Virat Kohli: ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿದ ಬಳಿಕ ಪತ್ನಿ ಜೊತೆ ವಿಶೇಷ ಸ್ಥಳಕ್ಕೆ ತೆರಳಿದ ವಿರಾಟ್ ಕೊಹ್ಲಿ

ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಮಾಜಿ ನಾಯಕ ಕೊಹ್ಲಿ ಕೂಡ ವಿದಾಯ ಹೇಳಿದ್ದಾರೆ. ವಿದಾಯ ಹೇಳಿದ ಒಂದು ದಿನದ ಬಳಿಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ವಿಶೇಷವಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಂಗಳವಾರ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ದೇವಾಲಯ ಪಟ್ಟಣವಾದ ಬೃಂದಾವನಕ್ಕೆ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಭೇಟಿ ನೀಡಿದ್ದರು. ದಂಪತಿಗಳು ಬೃಂದಾವನದ ಆಶ್ರಮದಲ್ಲಿ ಪ್ರೇಮಾನಂದ ಗೋವಿಂದ ಶರಣ್ ಅಥವಾ ಪ್ರೇಮಾನಂದ್ ಜಿ ಮಹಾರಾಜ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬೃಂದಾವನಕ್ಕೆ ಭೇಟಿ ನೀಡಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

virat kohli visit premanand maharaj in vrindavan with anuskha sharma

ವಿರಾಟ್ ಕೊಹ್ಲಿ ದೈವಭಕ್ತಿ

ವೈರಲ್ ಆಗಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಕಾರಿನಲ್ಲಿ ಬೃಂದಾವನಕ್ಕೆ ಆಗಮಿಸುತ್ತಿರುವುದನ್ನು ನೋಡಬಹುದು. ಫೋಟೋದಲ್ಲಿ ದಂಪತಿಗಳು ಪ್ರೇಮಾನಂದ್ ಜಿ ಮಹಾರಾಜ್ ಅವರ ಮುಂದೆ ಭಕ್ತಿಯಿಂದ ಕುಳಿತಿರುವ ಫೋಟೊಗಳು ವೈರಲ್ ಆಗಿದೆ. ಹಳದಿ ನಿಲುವಂಗಿಯನ್ನು ಧರಿಸಿದ ಗುರುಗಳು ಸರಳವಾದ ಉಡುಪನ್ನು ಧರಿಸಿ, ಮೈಕ್ರೊಫೋನ್ ಮೂಲಕ ಶಕ್ತಿ ದಂಪತಿಗಳೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ದಂಪತಿಗಳು ಪ್ರೇಮಾನಂದರನ್ನು ಭೇಟಿ ಮಾಡುತ್ತಿರುವುದು ಇದೇ ಮೊದಲಲ್ಲ. ಅವರು ಜನವರಿ 2023 ರ ಆರಂಭದಲ್ಲಿ, ಜನವರಿ 2025 ರಲ್ಲಿ ಕೂಡ ಭೇಟಿಯಾಗಿದ್ದರು.

ಮಾತುಕತೆ ವೈರಲ್!

ಪ್ರೇಮಾನಂದ ಸ್ವಾಮೀಜಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರನ್ನು ಸ್ವಾಗತಿಸಿದ್ದು, ಕೊಹ್ಲಿ ಅವರನ್ನು ನೀವು ಸಂತೋಷವಾಗಿದ್ದೀರಾ? ಎಂದು ಕೇಳಿದ್ದಾರೆ. ಅದಕ್ಕೆ ವಿರಾಟ್ ಕೊಹ್ಲಿ ಹೌದು ನಾನು ಚನ್ನಾಗಿದ್ದೇನೆ ಎಂದು ಉತ್ತರ ನೀಡಿದ್ದಾರೆ. ಇದಕ್ಕೆ ಸ್ವಾಮೀಜಿ ನೀವು ಚನ್ನಾಗಿರಬೇಕು ಎಂದು ಹೇಳಿದ್ದಾರೆ.

ಸಮೃದ್ಧಿ ಎನ್ನುವುದು ಕೇವಲ ದೇವರ ಅನುಗ್ರಹವಲ್ಲ, ಅದು ಪುಣ್ಯದ ಫಲಿತಾಂಶ. ಇದನ್ನು ದೇವರ ಕಡೆಗೆ ಚಲನೆ ಎಂದು ಪರಿಗಣಿಸಲಾಗಿದೆ. ನಿಜವಾಗಿಯೂ ಮುಖ್ಯವಾದುದು ನಿಮ್ಮ ಆಂತರಿಕ ಆತ್ಮದ ರೂಪಾಂತರ, ನೀವು ಈಗ ಬದುಕುತ್ತಿರುವಂತೆಯೇ ಬದುಕಿ, ಜಗತ್ತಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರಿ, ಆದರೆ ನಿಮ್ಮ ಆಂತರಿಕ ಆತ್ಮವು ಬದಲಾಗಲಿ. ಒಳಗೆ ಯಾವುದೇ ಮನ್ನಣೆ ಅಥವಾ ಖ್ಯಾತಿಯ ಬಯಕೆ ಇರಬಾರದು. ನಿಮ್ಮ ಆಂತರಿಕ ಆಲೋಚನೆಗಳು ಹೀಗಿರಬೇಕು ಎಂದು ಹೇಳಿದ್ದಾರೆ. ಇದಕ್ಕೆ ಅನುಷ್ಕಾ ಶರ್ಮಾ, ಜಪ ಮಾಡುವುದರಿಂದ ಆಗುತ್ತದಾ ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+