ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ 11 ವರ್ಷದ ಸಂಭ್ರಮ: ವಿಡಿಯೋ ಹಂಚಿಕೊಂಡ 'ರನ್ ಮೆಷಿನ್'

|
Google Oneindia Kannada News

ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್‌ಗೆ ಅದ್ಭುತ ಕೊಡುಗೆ ನೀಡಿದ ಆಟಗಾರ, ತಮ್ಮ ಬ್ಯಾಟಿಂಗ್ ಕೌಶಲ್ಯದಿಂದ ಜಗತ್ತಿನಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ. ಅತ್ಯಂತ ಹೆಚ್ಚು ಖ್ಯಾತಿ ಪಡೆದಿರುವ ಕೊಹ್ಲಿ ಕ್ರಿಕೆಟ್‌ ಜಗತ್ತಿಗೆ ಕಾಲಿಟ್ಟು ದಶಕಗಳೇ ಕಳೆದುಹೋಗಿದೆ. ಇಂದು ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳು ಕೊಹ್ಲಿ ಹೆಸರಿನಲ್ಲಿದೆ.

'ರನ್ ಮೆಷಿನ್' ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಸೋಮವಾರಕ್ಕೆ 11 ವರ್ಷಗಳು ತುಂಬಿದೆ. 11 ವರ್ಷಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಜೂನ್ 20ರಂದು ಕಿಂಗ್‌ಸ್ಟನ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ನಂತರ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ 11 ವರ್ಷಗಳಾದ ಸಂದರ್ಭದಲ್ಲಿ ಕೊಹ್ಲಿ ನೆನಪಿನ ಪುಟಗಳನ್ನು ಮೆಲುಕು ಹಾಕಿದ್ದಾರೆ.

ಎಂ. ಎಸ್. ಧೋನಿ ಸಾಧನೆ ಸರಿಗಟ್ಟಿದ ದಿನೇಶ್ ಕಾರ್ತಿಕ್ಎಂ. ಎಸ್. ಧೋನಿ ಸಾಧನೆ ಸರಿಗಟ್ಟಿದ ದಿನೇಶ್ ಕಾರ್ತಿಕ್

ಕೊಹ್ಲಿ ಸಮಯವು ಬೇಗ ಕಳೆದುಹೋಗುತ್ತದೆ ಎಂದು ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಹಲವು ಮರೆಯಲಾಗದ ಕ್ಷಣಗಳನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 16 ಸೆಕೆಂಡುಗಳ ಕ್ಲಿಪ್ ಹಂಚಿಕೊಂಡಿರುವ ಅವರು, ಇದು ಕೆಂಪು-ಬಾಲ್ ಕ್ರಿಕೆಟ್‌ನಲ್ಲಿ ಅವರ ಕೆಲವು ಅತ್ಯುತ್ತಮ ಕ್ಷಣಗಳ ಸಂಕಲನ ಎಂದು ಹೇಳಿಕೊಂಡಿದ್ದಾರೆ. ಮೊದಲ ಟೆಸ್ಟ್‌ನಿಂದ 11 ವರ್ಷಗಳ ಟೆಸ್ಟ್ ಕ್ರಿಕೆಟ್‌ನ ಹಲವು ಫೋಟೊಗಳನ್ನು ಒಳಗೊಂಡಿದೆ.

11 ವರ್ಷಗಳ ಟೆಸ್ಟ್ ಕ್ರಿಕೆಟ್‌ನ ನೆನಪು

ಕೊಹ್ಲಿ ತನ್ನ ಕಂಪ್ಯೂಟರ್‌ಗೆ ಪಾಸ್‌ವರ್ಡ್ ಅನ್ನು ನಮೂದಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ, ನಂತರ ಅವರು 'ಟೆಸ್ಟ್' ಹೆಸರಿನ ಫೋಲ್ಡರ್ ಅನ್ನು ತೆರೆಯುತ್ತಾರೆ, ಅದರಲ್ಲಿ ಅವರ ಪ್ರಸಿದ್ಧ ಟೆಸ್ಟ್ ವೃತ್ತಿಜೀವನದ ಕೆಲವು ಸ್ಮರಣೀಯ ಚಿತ್ರಗಳಿವೆ.

"ಟೈಮ್ ಫ್ಲೈಸ್", ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ 8 ಗಂಟೆಯೊಳಗೆ ಸುಮಾರು 56 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ ಮತ್ತು ಸುಮಾರು 6.5 ಸಾವಿರ ಬಾರಿ ರೀಟ್ವೀಟ್ ಮಾಡಲಾಗಿದೆ.

ಬಟ್ಲರ್‌ 162; ಇಂಗ್ಲೆಂಡ್‌ 498, ಮೂರು ಸಿಂಹಗಳ ಡಿಚ್ಚಿಗೆ ತತ್ತರಿಸಿದ ಡಚ್ಚರು!ಬಟ್ಲರ್‌ 162; ಇಂಗ್ಲೆಂಡ್‌ 498, ಮೂರು ಸಿಂಹಗಳ ಡಿಚ್ಚಿಗೆ ತತ್ತರಿಸಿದ ಡಚ್ಚರು!

11 ವರ್ಷ 101 ಪಂದ್ಯಗಳನ್ನಾಡಿದ ಕೊಹ್ಲಿ

11 ವರ್ಷ 101 ಪಂದ್ಯಗಳನ್ನಾಡಿದ ಕೊಹ್ಲಿ

ಟೆಸ್ಟ್ ಕ್ರಿಕೆಟ್‌ನಲ್ಲಿ 101 ಪಂದ್ಯಗಳನ್ನು ಆಡಿದ ಕೊಹ್ಲಿ, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 55.7 ಸ್ಟ್ರೈಕ್ ರೇಟ್‌ನೊಂದಿಗೆ 8043 ರನ್ ಗಳಿಸಿದ್ದಾರೆ, ಅವರ ಬ್ಯಾಟಿಂಗ್ ಸರಾಸರಿ 49.96. ಅವರು 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 254 ರನ್ ಗಳಿಸಿದರು, ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ.

55.7 ಸ್ಟ್ರೈಕ್ ರೇಟ್ ಹೊಂದಿರುವ ಕೊಹ್ಲಿ ಟೆಸ್ಟ್ ಕ್ರಿಕಟ್‌ನಲ್ಲಿ 7 ದ್ವಿಶತಕ, 27 ಶತಕ, 28 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ನಾಯಕನಾಗಿ ದಾಖಲೆ ಬರೆದಿರುವ ವಿರಾಟ್

ನಾಯಕನಾಗಿ ದಾಖಲೆ ಬರೆದಿರುವ ವಿರಾಟ್

ವಿರಾಟ್ ಕೊಹ್ಲಿ ನಾಯಕನಾಗಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. 68 ಪಂದ್ಯಗಳಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ ಟೆಸ್ಟ್ ತಂಡ 40 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತದ ಯಶಸ್ವೀ ಟೆಸ್ಟ್ ನಾಯಕರಲ್ಲಿ ಕೊಹ್ಲಿ ಒಬ್ಬರಾಗಿದ್ದಾರೆ.

ಇನ್ನು ಒಟ್ಟಾರೆ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟ ನಾಯಕರ ಪೈಕಿ ಗ್ರೇಮ್‌ ಸ್ಮಿತ್, ಅಲನ್ ಬಾರ್ಡರ್, ಸ್ಟಿಫನ್ ಫ್ಲೆಮಿಂಗ್, ರಿಕಿ ಪಾಂಟಿಂಗ್, ಹಾಗೂ ಕ್ಲೈವ್ ಲಾಯ್ಡ್ ಬಳಿಕ ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ.

ಫಾರ್ಮ್‌ ಕಂಡುಕೊಳ್ಳುವ ಭರವಸೆ

ಫಾರ್ಮ್‌ ಕಂಡುಕೊಳ್ಳುವ ಭರವಸೆ

2019ರ ನವೆಂಬರ್‌ನಿಂದೀಚೆಗೆ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. 2019ರಿಂದ ಇದುವರೆಗೆ ಶತಕ ದಾಖಲಿಸಲು ಕಿಂಗ್ ಕೊಹ್ಲಿಗೆ ಸಾಧ್ಯವಾಗಿಲ್ಲ. 2019ರಲ್ಲಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ದದ ಪಿಂಕ್ ಬಾಲ್‌ ಟೆಸ್ಟ್‌ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದರು.

ಜುಲೈ 1 ರಿಂದ 5 ನೇ ತಾರೀಖಿನವರೆಗೆ ಐದನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಲು ಕೊಹ್ಲಿ ಸಜ್ಜಾಗುತ್ತಿದ್ದಾರೆ. ಉತ್ತಮ ರನ್ ಹಾಕುವ ಮೂಲಕ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ. 11 ವರ್ಷಗಳನ್ನು ಪೂರೈಸಿರುವ ವಿರಾಟ್ ಕೊಹ್ಲಿ ಇನ್ನಷ್ಟು ವರ್ಷಗಳು ಭಾರತದ ಕ್ರಿಕೆಟ್‌ ತಂಡಕ್ಕೆ ಸೇವೆ ಸಲ್ಲಿಸಲಿ, ಉತ್ತಮ ರನ್ ಗಳಿಸುವ ಮತ್ತಷ್ಟು ದಾಖಲೆಗಳನ್ನು ನಿರ್ಮಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

English summary
Virat Kohli took to Twitter and shared a 16-second clip, which was a compilation of some of his best moments in Test Career. Virat Kohli Complets 11 Years of Test Cricket Career.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X