ವಿರಾಟ್‌, ರೋಹಿತ್‌ ಕ್ರೇಜ್‌: ಸರಣಿಗೆ 4 ತಿಂಗಳು ಮುನ್ನವೇ ಟಿಕೆಟ್‌ ಸೋಲ್ಡ್ ಔಟ್‌

ಟೀಮ್ ಇಂಡಿಯಾ ಆಟಗಾರರ ಹವಾ ವಿಶ್ವದಲ್ಲೇ ಹೆಚ್ಚಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಈಗಲೂ ಕಾತುರರಾಗಿದ್ದಾರೆ. ಈ ಇಬ್ಬರಿಗೂ ಈಗಲೂ ವಿಶ್ವ ಮಟ್ಟದಲ್ಲಿ ಇರುವ ಕ್ರೇಜ್‌ ಕಂಡು ಸ್ವತಃ ಕ್ರಿಕೆಟ್‌ ಆಸ್ಟ್ರೇಲಿಯಾ ದಂಗಾಗಿದೆ. ಹಾಗಿದ್ದರೆ ಆಗಿದ್ದು ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾದ ಲೆಜೆಂಡ್ರಿ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಐಪಿಎಲ್‌ ವೇಳೆ, ಇಬ್ಬರೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೊದಲೇ ಈ ಸ್ಟಾರ್ ಆಟಗಾರರು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಈ ಇಬ್ಬರು ಆಟಗಾರರು ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಾರೆ. ಟೀಮ್ ಇಂಡಿಯಾ ಇದೇ ವರ್ಷದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳಲ್ಲಿದೆ. ಈ ವೇಳೆ ಭಾರತ, ಆತಿಥೇಯ ತಂಡದ ವಿರುದ್ಧ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ.

Virat Kohli Rohit Sharma Craze Tickets for Australia Series Sold Out Four Months in Advance

ಈ ಪ್ರವಾಸಕ್ಕೆ ಟೀಮ್ ಇಂಡಿಯಾ ಇನ್ನು ಥಿಂಕ್ ಸಹ ಮಾಡಿಲ್ಲ. ಇನ್ನು ಈ ಸರಣಿಗೆ ನಾಲ್ಕು ತಿಂಗಳು ಬಾಕಿ ಇದೆ. ಈಗಾಗಲೇ ಕ್ರಿಕೆಟ್‌ ಆಸ್ಟ್ರೇಲಿಯಾ ಕೆಲವು ಪಂದ್ಯಗಳ ಟಿಕೆಟ್‌ ಮಾರಾಟ ಮಾಡಲು ಆರಂಭಿಸಿದೆ. ಈ ವೇಳೆ 2 ಪಂದ್ಯಗಳ ಎಲ್ಲಾ ಟಿಕೆಟ್‌ಗಳು ಸಹ ಮಾರಾಟವಾಗಿವೆ, ಇದಕ್ಕೆ ದೊಡ್ಡ ಕಾರಣ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ.

ಟಿಕೆಟ್‌ ಬಿಕರಿ

ಕ್ರಿಕೆಟ್‌ ಆಸ್ಟ್ರೇಲಿಯಾ ಈಗಾಗಲೇ ಹೇಳಿಕೆ ನೀಡಿದ್ದು, 2 ಪಂದ್ಯಗಳ ಟಿಕೆಟ್ ಮಾರಾಟವಾದ ಬಗ್ಗೆ ಮಾಹಿತಿ ನೀಡಿದೆ. ಈ ಆಟಗಾರರಿಗೆ ಇರುವ ಅಭಿಮಾನಿಗಳ ಬಳಗವನ್ನು ಕಂಡು ಸ್ವತಃ ಸಿಎ (ಕ್ರಿಕೆಟ್‌ ಆಸ್ಟ್ರೇಲಿಯಾ) ಆಶ್ಚರ್ಯಚಕಿತವಾಗಿದೆ. ಏಕದಿನ ಸರಣಿ ಹಾಗೂ ಟಿ20 ಸರಣಿಯ ಶೇಕಡಾ 90 ರಷ್ಟು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ತಿಳಿಸಿದೆ. ಶೇಕಡಾ 16 ರಷ್ಟು ಟಿಕೆಟ್‌ಗಳನ್ನು ಭಾರತೀಯ ಅಭಿಮಾನಿಗಳ ಕ್ಲಬ್ ಖರೀದಿಸಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದ್ದು, ಒಬ್ಬನೇ ಅಭಿಮಾನಿ ಭಾರೀ ಸಂಖ್ಯೆಯಲ್ಲಿ ಟಿಕೆಟ್ ಖರೀದಿ ಮಾಡಿದನ್ನು ಸಹ ಖಚಿತ ಪಡಿಸಿದೆ.

ಕ್ರೇಜ್‌ ಕಂಡು ಅಧಿಕಾರಿಗಳು ಸುಸ್ತು

ಅಭಿಮಾನಿಗಳು ಈ ಸರಣಿಯನ್ನು ಕಾಯುತ್ತಿದ್ದಾರೆ. ಸಿಡ್ನಿಯಲ್ಲಿ ನಡೆಯಲಿರುವ ಏಕದಿನ ಪಂದ್ಯದ ಟಿಕೆಟ್‌ ಸೋಲ್ಡ್ ಔಟ್ ಆಗಿವೆ. ಇನ್ನು ಮನುಕಾ ಓವಲ್‌ನಲ್ಲಿ ನಡೆಯಲಿರುವ ಟಿ20 ಪಂದ್ಯದ ಟಿಕೆಟ್‌ ಸಹ ಬಿಕರಿ ಆಗಿವೆ. ಇನ್ನು ಸರಣಿಗೆ ನಾಲ್ಕು ತಿಂಗಳು ಇರುವಾಗಲೇ ಉಳಿದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಈವೆಂಟ್ಸ್ ಮತ್ತು ಆಪರೇಷನ್ಸ್ ಜನರಲ್ ಮ್ಯಾನೇಜರ್ ಕೋಯೆಲ್ ಮಾರಿಸನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದ ವಿರುದ್ಧದ ಸರಣಿಯಿಂದ ನಮ್ಮ ಸಂಸ್ಥೆಗೆ ಹೆಚ್ಚಿನ ಲಾಭವಾಗಿದೆ. ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಮಾಡಿದ ಸಾಲವನ್ನು ತಿರಿಸಲು ಇದು ಸಹಕಾರಿ ಆಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಟಾಡ್ ಗ್ರೀನ್‌ಬರ್ಗ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+