ವಿರಾಟ್ ಕೊಹ್ಲಿ ಕಂಡರೆ ಉರಿ, ಕೆಟ್ಟ ಭಾಷೆ ಬಳಸಿದರಾ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ?
ಶ್ರೀಲಂಕಾ ಕ್ರಿಕೆಟ್ ಆಟಗಾರರಿಗೆ ಬುದ್ಧಿ ಬರುವಂತೆ ಕಾಣುತ್ತಿಲ್ಲ, ಪದೇ ಪದೆ ಪಾಕಿಸ್ತಾನದ ಆಟಗಾರರನ್ನು ಅನುಸರಿಸುವಂತೆ ಭಾರತ ತಂಡದ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಇದೀಗ ಸ್ವತಃ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಕ್ರಿಕೆಟ್ ಲೆಜೆಂಡ್ ವಿರಾಟ್ ಕೊಹ್ಲಿ ಶತಕದ ಬಗ್ಗೆ ಲೇವಡಿ ಮಾಡಿದ್ದಾರೆ. ಇದರ ಜೊತೆಗೆ ವಿರಾಟ್ ಕೊಹ್ಲಿಗೆ ವಿಶ್ ಮಾಡ್ತೀರಾ? ಅಂತಾ ರಿಪೋರ್ಟರ್‌ಗಳು ಪ್ರಶ್ನೆ ಕೇಳಿದರೆ ಕೆಟ್ಟ ಭಾಷೆ ಕೂಡ ಬಳಸಿದ್ದಾರೆ.
1996ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದು ವರ್ಲ್ಡ್ ಚಾಂಪಿಯನ್ ಆದ ಶ್ರೀಲಂಕಾ ಟೀಂ, 2023ರಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಶ್ರೀಲಂಕಾ ತಂಡದ ಆಟಗಾರರು ಭಾರತ ಕ್ರಿಕೆಟ್ ತಂಡದ ವಿರುದ್ಧ ದ್ವೇಷ ಕಾರುವುದನ್ನು ಬಿಡುತ್ತಿಲ್ಲ. ಇದನ್ನು ಮತ್ತೊಮ್ಮೆ ಶ್ರೀಲಂಕಾ ಕ್ರಿಕೆಟ್ ಟೀಂ ನಾಯಕ ಕುಸಾಲ್ ಮೆಂಡಿಸ್ ಸಾಬೀತು ಮಾಡಿದ್ದಾರೆ. ಅದರಲ್ಲೂ ಶತಕೋಟಿ ಭಾರತೀಯರ ಫೆವರಿಟ್ & ಕ್ರಿಕೆಟ್ ಲೋಕದ ದಂತಕಥೆ ವಿರಾಟ್ ಕೊಹ್ಲಿಯವರ ವಿರುದ್ಧ ಕುಸಾಲ್ ಮೆಂಡಿಸ್ ಕೆಟ್ಟ ಭಾಷೆ ಬಳಸಿರುವ ಆರೋಪ ಕೇಳಿಬಂದಿದೆ!

ಶ್ರೀಲಂಕಾ ಆಟಗಾರರಿಗೆ ಕೊಹ್ಲಿ ಕಂಡರೆ ಉರಿ?
ಹೌದು, ನಿನ್ನೆ ವಿರಾಟ್ ಕೊಹ್ಲಿ ಅವರು ಜಾಗತಿಕ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ್ದರು. ಈ ಹಿಂದೆ ಭಾರತದವರೇ ಆದ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ಶತಕ ಸಾಧನೆ ದಾಖಲೆಯನ್ನ ಕೊಹ್ಲಿ ನಿನ್ನೆ ಹಿಂದಿಕ್ಕಿದ್ರು. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 49 ಶತಕ ಗಳಿಸಿ ಅತಿಹೆಚ್ಚು ಶತಕ ಬಾರಿಸಿದ ದಾಖಲೆಯ ತಮ್ಮ ಹೆಸರಲ್ಲೇ ಉಳಿಸಿಕೊಂಡಿದ್ದರು. ಆದರೆ ನಿನ್ನೆ ವಿರಾಟ್ ಕೊಹ್ಲಿ ಅವರು, ಸಚಿನ್ ಮಾಡಿದ್ದ ಸಾಧನೆಗೆ ಬಂದು ಕೂತರು.
Journalist " Virat Just scored his 49th ODI ton. Do you like to congratulate him?"
— Out Of Context Cricket PK (@GemsOfCrickett) November 5, 2023
Kusak Mendis" Why I would congratulate him"😭😭😭#INDvSA #INDvsSA #SAvIND #ViratKohli #CWC2023 pic.twitter.com/DAqh2oeO5e
ಹೀಗೆ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ಸಾಧನೆಗೆ ಸಮವಾಗಿ ನಿಂತ ಭಾರತದ ಮತ್ತೊಬ್ಬ ಆಟಗಾರ ವಿರಾಟ್ ಕೊಹ್ಲಿ ಅವರ ಬಗ್ಗೆ ಇಡೀ ಜಗತ್ತು ಹೆಮ್ಮೆಯಿಂದ ಮಾನತಾಡಿ ಸಲಾಂ ಹೊಡೆದಿದೆ. ಆದರೆ ಕೊಹ್ಲಿಗೆ ಶುಭಾಶಯ ಹೇಳುತ್ತೀರಾ.? ಎಂದು ಪ್ರಶ್ನೆಯನ್ನು ಕೇಳಿದ್ದಕ್ಕೆ ಲಂಕಾ ತಂಡದ ನಾಯಕ ಮೆಂಡಿಸ್ ಬಳಸಿರುವ ಕೆಟ್ಟ ಭಾಷೆ ಎಂತಹದ್ದು ಗೊತ್ತಾ? ನೀವೆ ನೋಡಿ.

'ಹೋಲಿ ಫ..' ಅಂದ್ರಾ ಕುಸಾಲ್ ಮೆಂಡಿಸ್?
ಅಂದಹಾಗೆ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನ ಆಡುತ್ತಿದೆ ಶ್ರೀಲಂಕಾ ಕ್ರಿಕೆಟ್ ತಂಡ. ಹೀಗಾಗಿಯೇ ದೆಹಲಿಯಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿ ಶ್ರೀಲಂಕಾ ಟೀಂ ಕ್ಯಾಪ್ಟನ್ ಕುಸಾಲ್ ಮೆಂಡಿಸ್ ಜೊತೆಗೆ ಪತ್ರಕರ್ತರು ಮಾತನಾಡುತ್ತಿದ್ದರು. ಆದರೆ ಇದೇ ವೇಳೆ ವಿರಾಟ್ ಕೊಹ್ಲಿ ಕೊಲ್ಕತ್ತಾದ ಕ್ರಿಕೆಟ್ ಮೈದಾನದಲ್ಲಿ ತಮ್ಮ 49 ಶತಕ ಗಳಿಸಿ ಹೊಸ ಇತಿಹಾಸ ಬರೆದರು. ಹೀಗಿದ್ದಾಗ ಸಹಜವಾಗಿ ಭಾರತದ ಪತ್ರಕರ್ತರು ಕೊಹ್ಲಿ ಅವರ ಸಾಧನೆ ಬಗ್ಗೆ ಪ್ರಸ್ತಾಪ ಮಾಡಿ, ನೀವು ಕೊಹ್ಲಿ ಅವರಿಗೆ ವಿಶ್ ಮಾಡ್ತೀರಾ? ಅಂತಾ ಶ್ರೀಲಂಕಾ ತಂಡದ ನಾಯಕ ಮೆಂಡಿಸ್‌ಗೆ ಪ್ರಶ್ನೆ ಕೇಳಿದ್ರು.
ಆದರೆ ಪತ್ರಕರ್ತರು ವಿರಾಟ್ ಕೊಹ್ಲಿ ಸಾಧನೆ ಬಗ್ಗೆ ಪ್ರಸ್ತಾಪ ಮಾಡಿ, ಪ್ರಶ್ನೆ ಕೇಳಿದ ತಕ್ಷಣ ಉರಿದುಕೊಂಡ ಕುಸಾಲ್ ಮೆಂಡಿಸ್ ನಮ್ಮ ಕೊಹ್ಲಿಗೆ ವಿಶ್ ಮಾಡೋಕೆ ನಿರಾಕರಿಸಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ ಅನ್ನಬಹುದಿತ್ತು, ಆದರೆ ಇದೇ ವೇಳೆ ಮೆಂಡಿಸ್ ಕೆಟ್ಟ ಭಾಷೆ ಬಳಸಿರುವ ಆರೋಪ ಕೂಡ ಕುಸಾಲ್ ಮೆಂಡಿಸ್ ವಿರುದ್ಧ ಇದೀಗ ಕೇಳಿಬಂದಿದೆ. ಕುಸಾಲ್ ಮೆಂಡಿಸ್ ಹೀಗೆ ಕೆಟ್ಟ ಭಾಷೆ ಬಳಸಿದ್ದರು ಅಂತ ಆರೋಪಿಸಲಾಗಿರುವ ವಿಡಿಯೋ ಇಲ್ಲಿದೆ ನೋಡಿ.

ರೊಚ್ಚಿಗೆದ್ದರು ಕೊಹ್ಲಿ ಅವರ ಫ್ಯಾನ್ಸ್!
ಹೌದು, ವಿರಾಟ್ ಕೊಹ್ಲಿ ಅವರ ಶತಕದ ಸಾಧನೆಗೆ ಶುಭಾಶಯ ಹೇಳುತ್ತೀರಾ? ಅನ್ನೋ ಪ್ರಶ್ನೆಗೆ ಸುಮ್ಮನೆ ಉತ್ತರಿಸದೆ ಕೂತ್ತಿದ್ದರೂ ಆಗುತ್ತಿತ್ತು. ಆದ್ರೆ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಅಧಿಕ ಪ್ರಸಂಗ ಮಾಡಿದ್ದಲ್ಲದೆ, 'ಹೋಲಿ ಫ..' ಅಂತಾ ಕೆಟ್ಟ ಭಾಷೆ ಬಳಸಿದ್ದಾರೆ? ಅನ್ನೋ ಆರೋಪ ಕೇಳಿಬಂದಿದೆ. ಅಲ್ಲದೆ ವೈರಲ್ ಆಗುತ್ತಿರುವ ವಿಡಿಯೋ ಕೂಡ ಅದನ್ನೇ ಹೇಳುತ್ತಿದೆ. ವಿಡಿಯೋದಲ್ಲಿ ಕೇಳಿಬರುವ ಕುಸಾಲ್ ಮೆಂಡಿಸ್ ಧ್ವನಿಯಲ್ಲಿ 'ಹೋಲಿ ಫ..'? ಎಂಬ ಕೆಟ್ಟ ಪದವು ಸ್ಪಷ್ಟವಾಗೇ ಜನರಿಗೆ ಕೇಳಿಸಿದೆ. ಹೀಗಾಗಿ ಕೊಹ್ಲಿ ಅವರ ಅಭಿಮಾನಿಗಳು ಶ್ರೀಲಂಕಾ ತಂಡದ ನಾಯಕನ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಇದು ಹೀನಾಯ ಸೋಲಿನ ಎಫೆಕ್ಟ್?
ಒಟ್ನಲ್ಲಿ ಭಾರತದ ವಿರುದ್ಧ ಶ್ರೀಲಂಕಾ ತಂಡವು ಹೀನಾಯವಾಗಿ ಸೋತ ನಂತರ ಕುಸಾಲ್ ಮೆಂಡಿಸ್ ಹೀಗೆ ಮಾತನಾಡಿದ್ದಾರಾ? ಎನ್ನುವ ಅನುಮಾನ ಕೂಡ ಕಾಡುತ್ತಿದೆ. ಏಕೆಂದರೆ ಇತ್ತೀಚೆಗೆ ಭಾರತದ ವಿರುದ್ಧ ಮ್ಯಾಚ್ ಆಡಿದ್ದ ಶ್ರೀಲಂಕಾ ತಂಡ ಕೇವಲ 55 ರನ್‌ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಮೂಲೆ ಸೇರಿತ್ತು. ಅದರಲ್ಲೂ ಈ ಹೀನಾಯ ಸೋಲಿನಲ್ಲಿ ಇದೇ ಕುಸಾಲ್ ಮೆಂಡಿಸ್ ಪಾತ್ರ ಇತ್ತು. ಯಾಕಂದರೆ ಕುಸಾಲ್ ಮೆಂಡಿಸ್ ಭಾರತ ವಿರುದ್ಧ ಕೇವಲ 1 ರನ್ ಗಳಿಸಿ ಪೆವಿಲಿಯನ್ ಗೂಡು ಸೇರಿದ್ದರು. ಹೀಗಿದ್ದಾಗಲೇ ಭಾರತ ನೀಡಿದ್ದ 358 ರನ್ ಬೃಹತ್ ಗುರಿ ತಲುಪಲು ಆಗದೆ ಲಂಕಾ ಹೀನಾಯ ಸೋಲು ಕಂಡು ವಿಶ್ವಕಪ್ ಟೂರ್ನಿಯಿಂದಲೇ ಅಧಿಕೃತವಾಗಿ ಹೊರಗೆ ಬಿದ್ದಿತ್ತು.
ಈಗ ನೋಡಿದರೆ ಈ ಮೆಂಡಿಸ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಾಗೇ ಮೆಂಡಿಸ್ ನೀಡಿರುವ ಹೇಳಿಕೆ ಇದೀಗ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಕೂಡ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮೆಂಡಿಸ್ ವಿರುದ್ಧ ಆಕ್ರೋಶ ಮೊಳಗಿದ್ದು, ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ತನ್ನ ಮಾತಿಗೆ ಕ್ಷಮೆ ಕೇಳಲಿ ಅಂತಾ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.












Click it and Unblock the Notifications