ಮೈಸೂರು ಪಬ್ ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕಣ್ಣಿಟ್ಟ ಸರ್ಕಾರ: ಯತೀಂದ್ರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪಬ್ ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಸಜೀವ ದಹನವಾಗಿದ್ದು, ಏಳು ಮಂದಿಗೆ ಗಾಯಗಳಾಗಿವೆ. ಇದರ ಬೆನ್ನಲ್ಲೆ ನಗರಾದ್ಯಂತ ಅನೇಕ ಪಬ್, ಬಾರ್, ರೆಸ್ಟೋರೆಂಟ್‌ಗಳು ಪರವಾನಿಗೆ ಇಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಬ್ ನಲ್ಲಿ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಅಬಕಾರಿ ಡಿಸಿ ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ. ಪಬ್ ಮಾಲೀಕನ ವಿರುದ್ಧ ದೂರು ದಾಖಲಿಸಲಾಗಿದೆ. ಪರಾವನಿಗೆ ಪಡೆಯದೇ ಈ ರೀತಿಯ ಅವಘಡಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

Mysuru Pub Fire

ಪೊಲೀಸರ ತನಿಖೆಗೆ ವೇಳೆ ಯಾವುದೇ ಲೈಸನ್ಸ್ ಇಲ್ಲದೆ ಪಬ್ ನಡೆಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ಅನೇಕ ಪಬ್ ಬಾರ್ ಅಂಡ್ ರೆಸ್ಟೋರೆಂಟ್ ಗಳು ಲೈಸನ್ಸ್ ಪಡೆಯದೇ ನಡೆಸುತ್ತಿರುವ ವಿಚಾರ ಗೊತ್ತಾಗಿದೆ. ಇದೇ ವಿಚಾರವಾಗಿ ನಾನು ಅಬಕಾರಿ ಡಿಸಿಗೆ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.

Monsoon Rain: ರಾಜ್ಯದಲ್ಲಿ ಶೇ 21 ಮಳೆ ಕೊರತೆ ನಡುವೆ ಕೃಷಿ ಇಲಾಖೆ ಅನಾಥ: ಡಿಕೆಶಿ ತಾಕತ್ತು ಪ್ರಶ್ನಿಸಿದ ಆರ್.ಅಶೋಕ್
Monsoon Rain: ರಾಜ್ಯದಲ್ಲಿ ಶೇ 21 ಮಳೆ ಕೊರತೆ ನಡುವೆ ಕೃಷಿ ಇಲಾಖೆ ಅನಾಥ: ಡಿಕೆಶಿ ತಾಕತ್ತು ಪ್ರಶ್ನಿಸಿದ ಆರ್.ಅಶೋಕ್

ಮೈಸೂರು ಅಕ್ರಮ, ಬಾರ್ ರೆಸ್ಟೋರೆಂಟ್‌ ಮಾಲೀಕರಿಗೆ ನಡುಕ

ಮೈಸೂರಿನಲ್ಲಿ ಎಲ್ಲೆಲ್ಲಿ ಅಕ್ರಮವಾಗಿ ಹಾಗೂ ಲೈಸನ್ಸ್ ಇಲ್ಲದೆ ಬಾರ್ ಆಂಡ್ ರೆಸ್ಟೋರೆಂಟ್ ನಡೆಯುತ್ತಿದೆ ಅಂತವುಗಳನ್ನು ಗುರುತಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶಿಸಲಾಗಿದೆ. ಈ ಮೂಲಕ ಅಕ್ರಮ, ನಿಯಮ ಮೀರಿ ಪಬ್, ಬಾರ್ ನಡೆಸುವ ಮಾಲೀಕರಿಗೆ ನಡುಕ ಶುರುವಾಗಿದೆ. ಇನ್ನೂ ಲೈಸನ್ಸ್ ಇಲ್ಲದೆ ಬಾರ್ ನಡೆಸುತ್ತಿದ್ದರೂ ಸಹಿತ ಅಬಕಾರಿ ಡಿಸಿ ಕಣ್ಮುಚ್ಚಿ ಕುಳಿತಿದ್ದರಾ? ಎಂಬ ಪ್ರಶ್ನೆಗೆ ಅವರು, ಅಧಿಕಾರಿಗಳ ಮೇಲೂ ಕ್ರಮಕ್ಕೆ ಒತ್ತಾಯ ಕೇಳಿ ಬಂದಿದೆ, ಅದು ನನ್ನ ಗಮನದಲ್ಲಿದೆ. ಅಮಾನತು ಮಾಡುವಂತೆ ಶಿಫಾರಸು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇನ್ನೂ ಬೆಂಗಳೂರಿನಲ್ಲಿ ಇಂತಹ ಅಕ್ರಮ ಬಾರ್, ರೆಸ್ಟೋರೆಂಟ್‌ಗಳ ಕಾರ್ಯ ನಿರ್ವಹಣೆ ಮೇಲೆ ಕಣ್ಣಿಡುವಂತೆ, ಅಗತ್ಯವರಿತು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೂ ನಿರ್ದೇಶನ ನೀಡಲಾಗಿದೆ. ಅವರು ಎಲ್ಲ ಕಡೆಗಳಲ್ಲಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

ದಟ್ಟಹಳ್ಳಿ ಪಬ್ ನಲ್ಲಿ ದಿಡೀರ್ ಬೆಂಕಿ

ಮೈಸೂರಿನ ದಟ್ಟಹಳ್ಳಿ ನಾಲ್ಕನೇ ಹಂತದಲ್ಲಿರುವ ಪಬ್‌ವೊಂದರಲ್ಲಿ ಏಕಾಎಕಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಕೆನ್ನಾಲಿಗೆ, ದಟ್ಟ ಹೊಗೆ ಆಕಾಶದೆತ್ತರಕ್ಕೆ ಏರಿತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಉಂಟಾಯಿತು. ಈ ಘಟನೆಯಲ್ಲಿ ಡಾರ್ಜಲಿಂಗ್‌ನ ಸಾಹಿನ್ (26) ಹಾಗೂ ನೇಪಾಳ ಮೂಲದ ಪ್ರಕಾಶ್ (24) ಮೃತ ಇಬ್ಬರು ದುರ್ದೈವಿಗಳು. ಇವರು ಬೆಂಕಿ ಆವರಿಸುತ್ತಿದ್ದಂತೆ ಒಳಗಿನಿಂದ ಹೊರ ಬರಲಾಗದೇ ಸಜೀವ ದಹನವಾಗಿದ್ದಾರೆ. ಹುಣಸೂರು ನಗರದ ವೀಲ್ ವಾಸಿಂ, ಶೋಯೆಬ್, ಅಜರ್ ಮತ್ತು ತಾಲೂಕಿನ ಕೊಳವಿಗೆಯ ಶ್ರೀಕಾಂತ್ ಅಲಿಯಾಸ್ ಸಿರಿ ಬಂಧಿಸಲಾಗಿದೆ.

ಇನ್ನುಳಿದಂತೆ ಗ್ರಾಹಕರಾದ ಸೋನು, ರಮೇಶ್, ಮಹದೇವಪ್ರಸಾದ್,ಪ್ರಜ್ವಲ್, ಅವಿನಾಶ್, ಪಬ್‌ನ ಮಾಲಕ ಪ್ರೀತಂ ಅವರು ಗಾಯಾಳುಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಭೂಸ್ವಾಧೀನವಾದಾಗ ಬಿಜೆಪಿ ಮೌನವಾಗಿದ್ದೇಕೆ; ಗೃಹಲಕ್ಷ್ಮಿ ಹಣದಿಂದ ನಕಲಿ ಫೈನಾನ್ಸ್‌ ವಿರುದ್ಧ ಡಿಕೆಶಿ ಖಡಕ್ ಎಚ್ಚರಿಕೆ
ಭೂಸ್ವಾಧೀನವಾದಾಗ ಬಿಜೆಪಿ ಮೌನವಾಗಿದ್ದೇಕೆ; ಗೃಹಲಕ್ಷ್ಮಿ ಹಣದಿಂದ ನಕಲಿ ಫೈನಾನ್ಸ್‌ ವಿರುದ್ಧ ಡಿಕೆಶಿ ಖಡಕ್ ಎಚ್ಚರಿಕೆ

ಮೃತರ ಮನೆಗೆ ಯತೀಂದ್ರ ಭೇಟಿ

ಇಂದು ಬೆಳಗ್ಗೆ ನಗರಾಭಿವೃದ್ಧಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರಿನ ಕೆಆರ್ ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿದರು. ಅಗ್ನಿ ಅವಘಡದಲ್ಲಿ ಮೃತಪಟ್ಟಿರುವ ಸಾಹಿಲ್ ಹಾಗೂ ಪ್ರಕಾಶ್ ಅವರ ಮೃತದೇಹ ವೀಕ್ಷಿಸಿ ಸಂತಾಪ ಸೂಚಿಸಿದರು. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಡದಿ ಟೌನ್ ಶಿಪ್ ಜಟಾಪಟಿ: ರೈತರು ಒಪ್ಪಿದ್ದಾರೆ!

ಬೆಂಗಳೂರಿನ ಬಿಡದಿ ಟೌನ್ ಶಿಫ್ ಯೋಜನೆ ಕುರಿತು ಮಾತನಾಡಿದ ಯತೀಂದ್ರ ಅವರು, ಬಿಡದಿ ಟೌನ್‌ ಶಿಫ್ ಮಾಡುವುದು ಅತ್ಯವಶ್ಯಕ. ಆ ಭಾಗದ ಶೇ. 80ರಷ್ಟು ರೈತರು ಜಮೀನು ಕೊಡಲು ಒಪ್ಪಿದ್ದಾರೆ. ಹೆಚ್ಚಿನ ಮಟ್ಟದ ಪರಿಹಾರಕ್ಕೆ ಒಪ್ಪಿದ್ದಾರೆ. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ
ಇದರಲ್ಲಿ ಜೆಡಿಎಸ್ ರಾಜಕಾರಣ ಮಾಡುತ್ತಿದೆ ಎಂದು ಅವರು ತಿರುಗೇಟು ನೀಡಿದರು.

ಬೆಂಗಳೂರು ಜನಸಂದಣಿ ಹೆಚ್ಚಾಗುತ್ತಿದೆ. ಎಷ್ಟೋ ಜನರಿಗೆ ನಿವೇಶನದ ಅಗತ್ಯವಿದೆ. ಬೆಂಗಳೂರು ವಿಸ್ತರಣೆಯ ಅವಶ್ಯಕತೆಯಂತೂ ಇದ್ದೇ ಇದೆ. ಅದೆಲ್ಲ ನೋಡಿಕೊಂಡೆ ಸರ್ಕಾರ ಯೋಜನೆಗೆ ಕೈ ಹಾಕಿದೆ. ರೈತರೊಂದಿಗೆ ಮಾತುಕತೆ ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮಾಡುತ್ತೇವೆ ಎಂದು ಅವರು ಹೇಳಿದರು.

ಸಿಎಲ್‌ಪಿ ಸಭೆಯಲ್ಲಿ ನಾನು ಪಾಲ್ಗೊಳ್ಳುವೆ

ಇನ್ನೂ ಎಂಎಲ್‌ಸಿ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, 5 ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಸಿ.ಎಲ್. ಪಿ ಸಭೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ. ಚುನಾವಣೆ ಸಂಧರ್ಭದಲ್ಲಿ ಇದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+