ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನ ಭಾರತ ತಂಡಕ್ಕೆ ಆಯ್ಕೆ?

ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಮಾತ್ರವಲ್ಲ, ಕನ್ನಡಿಗರ ಪಾಲಿಗೂ ರನ್ ಮಷಿನ್ ಅಂತಾ ಹೇಳಬಹುದು. ಯಾಕಂದ್ರೆ ಕಳೆದ 16 ವರ್ಷಗಳಿಂದ ಕನ್ನಡಿಗರ ಆರ್‌ಸಿಬಿ ತಂಡಕ್ಕಾಗಿ ಆಟ ಆಡುತ್ತಿರುವ ವಿರಾಟ್ ಕೊಹ್ಲಿ, ನೂರಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡು ಅಬ್ಬರಿಸುತ್ತಿದ್ದಾರೆ. ಹೀಗಿದ್ದಾಗಲೇ ವಿರಾಟ್ ಕೊಹ್ಲಿ ಅವರು 2024ರ T20 ವಿಶ್ವಕಪ್‌ಗೆ ಆಯ್ಕೆ ಆಗುತ್ತಾರಾ? ಅಂತಾ ಅಭಿಮಾನಿಗಳು ಕಾಯುತ್ತಿದ್ದು, ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ವಿರಾಟ್ ಕೊಹ್ಲಿ ಈಗಾಗಲೇ ಐಪಿಎಲ್ 2024ರ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರವಾಗಿ 150 ಸ್ಟ್ರೈಕ್ ರೇಟ್ ಮೂಲಕ 500ಕ್ಕೂ ಹೆಚ್ಚು ರನ್ ಚಚ್ಚಿ ಬಿಸಾಡಿದ್ದಾರೆ. ಈ ಮೂಲಕ, ಐಪಿಎಲ್ ಅಖಾಡದಲ್ಲೂ ವಿರಾಟ್ ಕೊಹ್ಲಿ ಅವರ ಅಬ್ಬರ ಜೋರಾಗಿದೆ. ಇದೇ ವೇಳೆ ಈಗ 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಮಹತ್ವದ ಸಭೆ ನಡೆಸುತ್ತಿದೆ. ಇಂದು ಸಂಜೆಯ ಒಳಗಾಗಿ ಭಾರತೀಯ ತಂಡ ಪ್ರಕಟವಾಗಲಿದೆ. ಈ ಕಾರಣಕ್ಕೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದು, ಈಗ ಕೊಹ್ಲಿ ಭಾರತ ತಂಡಕ್ಕೆ ಆಯ್ಕೆ ಆಗುತ್ತಾರಾ? ಅಥವಾ ಆಯ್ಕೆ ಆಗುವುದಿಲ್ವಾ? ಮುಂದೆ ಓದಿ.

Virat Kohli May Select For Indian Squad To T20 World Cup 2024

ಬೇಕೆ ಬೇಕು.. ವಿರಾಟ್ ಕೊಹ್ಲಿ ಬೇಕು!

ವಿರಾಟ್ ಕೊಹ್ಲಿ ಐಪಿಎಲ್ 2024ರ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರ ಅಬ್ಬರದಿಂದಲೇ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಅವರ ಆಟದಲ್ಲಿ ಸ್ಥಿರತೆಯು ಕೂಡ ಇದೆ. ಹೀಗಾಗಿ 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡುವಾಗ ವಿರಾಟ್ ಕೊಹ್ಲಿ ಅವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಅವರ ಈಗಿನ ಆಟ ನೋಡುತ್ತಿದ್ದರೆ, ಕೊಹ್ಲಿಗೆ ಚಾನ್ಸ್ ಸಿಗುವುದು ಬಹುತೇಕ ಗ್ಯಾರಂಟಿ ಆಗುತ್ತಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್‌ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್‌, ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್‌, ಕುಲ್‌ದೀಪ್‌ ಯಾದವ್‌, ಯುಜುವೇಂದ್ರ ಚಹಾಲ್‌, ಅರ್ಷದೀಪ್ ಸಿಂಗ್, ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್

ಕಾಯ್ದಿರಿಸಿದ ಆಟಗಾರರು

ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+