• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Instagram ಗಳಿಕೆ: ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕೊಹ್ಲಿಗೆ ಎಷ್ಟನೇ ಸ್ಥಾನ?

|
Google Oneindia Kannada News

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪ್ರಚಾರಕ್ಕೂ ಕೊಹ್ಲಿ ಅನಧಿಕೃತ ರಾಯಭಾರಿ ಆಗಿಬಿಟ್ಟಿದ್ದಾರೆ. ಏಷ್ಯಾಕಪ್ ವೇಳೆ ಲಯಕ್ಕೆ ಮರಳಿದ ಕೊಹ್ಲಿ ನಂತರ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ನಡುವೆ ಮೈದಾನದ ಹೊರಗೂ ಕೊಹ್ಲಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.

33 ವರ್ಷ ವಯಸ್ಸಿನ ಕೊಹ್ಲಿ ಈಗ ಜನಪ್ರಿಯ ವಿಡಿಯೋ, ಚಿತ್ರ ಹಂಚಲು ಇರುವ ಸಾಮಾಜಿಕ ವೇದಿಕೆ Instagram ನಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 15 ಸೆಲೆಬ್ರಿಟಿಗಳಲ್ಲಿ ಸ್ಥಾನ ಪಡೆದಿದ್ದಾರೆ, Hopperhq ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕೊಹ್ಲಿ 14ನೇ ಸ್ಥಾನದಲ್ಲಿದ್ದಾರೆ.

ಕಿಂಗ್ ಕೊಹ್ಲಿಯೇ T20i ವಿಶ್ವಕಪ್ ಆಕರ್ಷಣೆಯ ಕೇಂದ್ರ ಬಿಂದು: ಥ್ರಿಲ್ಲಾದ ಫ್ಯಾನ್ಸ್ಕಿಂಗ್ ಕೊಹ್ಲಿಯೇ T20i ವಿಶ್ವಕಪ್ ಆಕರ್ಷಣೆಯ ಕೇಂದ್ರ ಬಿಂದು: ಥ್ರಿಲ್ಲಾದ ಫ್ಯಾನ್ಸ್

ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಫುಟ್ಬಾಲ್, ಬ್ಯಾಸ್ಕೆಟ್ ಬಾಲ್, ಹಾಲಿವುಡ್ ತಾರೆಯರಿದ್ದಾರೆ. 50 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಕೊಹ್ಲಿ ಅವರು ಕ್ರೀಡಾಲೋಕದ ತಾರೆಯರಾದ ನೇಮಾರ್, ಲೆಬ್ರಾನ್ ಜೇಮ್ಸ್ ರನ್ನು ಹಿಂದಿಕ್ಕಿದ್ದಾರೆ.

ವರದಿಗಳ ಪ್ರಕಾರ, ಕೊಹ್ಲಿ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಪೋಸ್ಟ್ ವೊಂದಕ್ಕೆ 10,88,000 ಡಾಲರ್ ಚಾರ್ಜ್ ಮಾಡುತ್ತಿದ್ದಾರೆ. ಕೊಹ್ಲಿ ಬ್ರ್ಯಾಂಡ್ ಮೌಲ್ಯ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಮ್ಯಾಂಚೆಸ್ಟರ್ ಯುನೈಟೆಡ್, ಪೋರ್ಚುಗಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಅತಿ ಹೆಚ್ಚು ಗಳಿಕೆ ಹೊಂದಿರುವ ಸೆಲೆಬ್ರಿಟಿಯಾಗಿದ್ದಾರೆ. ನಂತರದ ಸ್ಥಾನದಲ್ಲಿ ಕೈಲಿ ಜೆನ್ನರ್, ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಮೂರನೆ ಸ್ಥಾನದಲ್ಲಿದ್ದಾರೆ. ಸೆಲೆನಾ ಗೊಮೆಜ್ ಹಾಗೂ ಡ್ವಾಯ್ನೆ 'ದಿ ರಾಕ್' ಜಾನ್ಸನ್ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

ಅಗ್ರಸ್ಥಾನದಲ್ಲಿರುವ ರೊನಾಲ್ಡೋ ಒಂದು ಪೋಸ್ಟ್ ಹಾಕಲು 23,97,000 ಡಾಲರ್ ಪಡೆಯುತ್ತಿದ್ದಾರೆ. ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಕ್ರೀಡಾಪಟುಗಳ ಪೈಕಿ ರೊನಾಲ್ಡೋ, ಮೆಸ್ಸಿ, ನೇಮಾರ್ ಬಳಿಕ ಕೊಹ್ಲಿ ಇದ್ದಾರೆ.

English summary
Virat Kohli ranked in the top 15 highest-paid celebrities in the world on Instagram, according to the data released by Hopperhq.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X