ವಿರಾಟ್ ಕೊಹ್ಲಿ ಬೆನ್ನಿಗೆ ಚೂರಿ ಹಾಕಿದ್ದರಾ ಮಹೇಂದ್ರ ಸಿಂಗ್ ಧೋನಿ? MS Dhoni
ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ದೊಡ್ಡ ನಾಯಕ.. ಮಹೇಂದ್ರ ಸಿಂಗ್ ಧೋನಿ ನಿರ್ಮಿಸಿರುವ ದಾಖಲೆ ಮುರಿಯಲು ಸಾಧ್ಯವೇ ಇಲ್ಲ... ಧೋನಿ ಗುರಾಯಿಸಿದ್ರೆ ಸಾಕು ಬಾಲ್ ಬೌಂಡರಿ ಗೆರೆ ದಾಟಿ ಸಿಕ್ಸರ್ ಆಗಿಬಿಡುತ್ತೆ... ಹೀಗೆ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಅವರ ಅಭಿಮಾನಿಗಳು ನೂರಾರು ಹೊಗಳಿಕೆಯ ಮಾತನ್ನು ಆಡುತ್ತಾರೆ. ಹೀಗಿದ್ದಾಗಲೇ, ದಿಢೀರ್ ಮಹೇಂದ್ರ ಸಿಂಗ್ ಧೋನಿ ವಿರೋಧಿಗಳು ಕೂಡ ರೊಚ್ಚಿಗೆದ್ದು ಗಂಭೀರ ಆರೋಪ ಮಾಡಿದ್ದು ಕ್ರಿಕೆಟ್ ಲೋಕದಲ್ಲಿ ಕಿಚ್ಚು ಹೊತ್ತಿಸಿದೆ!
ವಿರಾಟ್ ಕೊಹ್ಲಿ ಅಭಿಮಾನಿಗಳಿಗೂ & ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೂ ಭಾರಿ ತಿಕ್ಕಾಟ ನಡೆಯುತ್ತಿದೆ. ಎರಡೂ ಕಡೆ ದೊಡ್ಡ ಗಲಾಟೆ ಸೋಷಿಯಲ್ ಮೀಡಿಯಾ ತುಂಬಾ ಬೆಂಕಿ ಹೊತ್ತಿಸುತ್ತಿದೆ. ಅದರಲ್ಲೂ ಆರ್‌ಸಿಬಿ ಅಂದ್ರೆ ಬೆಂಗಳೂರು ತಂಡ & ಸಿಎಸ್‌ಕೆ ಅಂದ್ರೆ ಚೆನ್ನೈ ತಂಡ ಅಂತಾ ದೊಡ್ಡ ಗಲಾಟೆ ಆಗಾಗ ನಡೆಯುತ್ತಾ ಬಂದಿದೆ. ಇಷ್ಟೆಲ್ಲಾ ಸಾಲದು ಎಂಬಂತೆ ಇದೀಗ ಮಹೇಂದ್ರ ಸಿಂಗ್ ಧೋನಿ ವಿರುದ್ಧ ವಿರಾಟ್ ಕೊಹ್ಲಿ ಅಭಿಮಾನಿ ಬಳಗ ಗಂಭೀರ ಆರೋಪ ಮಾಡುತ್ತಿದ್ದು, ವಿರಾಟ್ ಕೊಹ್ಲಿ ಬೆನ್ನಿಗೆ ಚೂರಿ ಹಾಕಿದ್ದರಾ ಮಹೇಂದ್ರ ಸಿಂಗ್ ಧೋನಿ?

ವಿರಾಟ್ ಕೊಹ್ಲಿ ಬೆನ್ನಿಗೆ ಚೂರಿ ಹಾಕಿದ್ದರಾ?
ಕ್ರಿಕೆಟ್ ಅಂದ್ರೆ ವಿರಾಟ್ ಕೊಹ್ಲಿ, ಭಾರತೀಯ ಕ್ರಿಕೆಟ್ ಜಗತ್ತಿಗೆ ಗತ್ತು ತಂದುಕೊಟ್ಟಿದ್ದೇ ಈ ವಿರಾಟ್ ಕೊಹ್ಲಿ ಅಂತಾ ಹೊಗಳುತ್ತಾರೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು. ಅಲ್ಲದೆ ಮಹೇಂದ್ರ ಸಿಂಗ್ ಧೋನಿ ಕಾರಣಕ್ಕೇ ಕಿಂಗ್ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಅಂದ್ರೆ ನಾಯಕತ್ವ ಕಳೆದುಕೊಂಡರು ಅನ್ನೋ ಆರೋಪ ಕೂಡ ಮಾಡುತ್ತಿದ್ದಾರೆ ಕೊಹ್ಲಿ ಫ್ಯಾನ್ಸ್. ಇದರ ಜೊತೆಗೆ ಇದೀಗ ಭಾರಿ ಗಂಭೀರ ಆರೋಪ ಒಂದು ಕೇಳಿಬಂದಿದ್ದು, ವಿರಾಟ್ ಕೊಹ್ಲಿ ಬೆನ್ನಿಗೆ ಚೂರಿ ಹಾಕಿದ್ದರಾ ಮಹೇಂದ್ರ ಸಿಂಗ್ ಧೋನಿ?
ಕೊಹ್ಲಿಗೆ ಧೋನಿ ಮೋಸ ಮಾಡಿದ್ರಾ?
ಹೌದು, 2019 ಕ್ರಿಕೆಟ್ ವಿಶ್ವಕಪ್ ವೇಳೆ ವಿರಾಟ್ ಕೊಹ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದರು. ಭಾರತ ತಂಡ 2019ರ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಸೆಮಿಫೈನಲ್ ತನಕ ಹೋಗಿ ಟ್ರೋಫಿ ಗೆಲ್ಲುವುದು ಗ್ಯಾರಂಟಿ ಆಗಿತ್ತು. ಇಂತಹ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕಾರಣಕ್ಕೇ ಭಾರತ ತಂಡ ಸೋತು ಹೋಗಿದ್ದು, ಚನ್ನಾಗಿ ಆಡುವ ಅವಕಾಶ ಇದ್ದರೂ ಧೋನಿ ಮಾತ್ರ ಬೇಕು ಅಂತಲೇ ಬಾಲ್ ವೇಸ್ಟ್ ಮಾಡಿದ್ದರು ಎಂಬ ಗಂಭೀರ ಆರೋಪವನ್ನು ವಿರಾಟ್ ಕೊಹ್ಲಿ ಫ್ಯಾನ್ಸ್ ಇದೀಗ ಮಾಡುತ್ತಿದ್ದಾರೆ. ಅಲ್ಲದೆ ಕೀಪಿಂಗ್ ಮಾಡುವಾಗ ಕೂಡ ಮಹೇಂದ್ರ ಸಿಂಗ್ ಧೋನಿ ಬೇಕು ಅಂತಲೇ ಬಾಲ್ ಬಿಟ್ಟು ಸಾಕಷ್ಟು ರನ್ ಹರಿಯುವಂತೆ ಮಾಡಿ ನ್ಯೂಜಿಲೆಂಡ್ ಗೆಲುವಿಗೆ ಪಂದ್ಯ ಬಿಟ್ಟುಕೊಟ್ಟರು ಎಂದು ವಿರಾಟ್ ಕೊಹ್ಲಿ ಅಭಿಮಾನಿಗಳು ಆರೋಪಿಸುತ್ತಾ ಇದ್ದಾರೆ.












Click it and Unblock the Notifications