21 ಕೋಟಿ ರೂಪಾಯಿ ಆಟಗಾರ ವಿರಾಟ್ ಕೊಹ್ಲಿ ಹೈದರಾಬಾದ್ ಪಂದ್ಯದಲ್ಲಿ ಆಡಲ್ಲ ಅಂತಾ... Virat Kohli
ವಿರಾಟ್ ಕೊಹ್ಲಿ ದೆಹಲಿ ಮೂಲದ ಆಟಗಾರನೇ ಆಗಿದ್ದರೂ, 18 ವರ್ಷಗಳಿಂದ ಕನ್ನಡಿಗರ ದತ್ತು ಪುತ್ರ ಆಗಿದ್ದಾರೆ. ಜರ್ಸಿ ನಂಬರ್ 18 ಅಂದ್ರೆ ಅಭಿಮಾನಿಗಳಿಗೆ ಅದೇನೋ ಖುಷಿ & ಖುಷಿ, ಯಾಕಂದ್ರೆ ವಿರಾಟ್ ಕೊಹ್ಲಿ ಅವರ ಜರ್ಸಿ ನೋಡಿದರೆ ಸಾಕು ಅಷ್ಟು ಗೌರವ ಕೊಡ್ತಾರೆ ಫ್ಯಾನ್ಸ್. ವಿರಾಟ್ ಕೊಹ್ಲಿ ಆಡಲು ನಿಂತರೆ ಅಭಿಮಾನಿಗಳು ಕಣ್ಣು ಮಿಟುಕಿಸದೆ ದೃಷ್ಟಿ ಟಿವಿ ಪರದೆ ಮೇಲೆ ಇಟ್ಟಿರುತ್ತಾರೆ, ವಿರಾಟ್ ಕೊಹ್ಲಿ ಔಟಾದರೆ ಟಿವಿ ಸ್ವಿಚ್ ಆಫ್ ಮಾಡುವವರೂ ಇದ್ದಾರೆ!
ಹೌದು, ವಿರಾಟ್ ಕೊಹ್ಲಿ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ವಿರಾಟ್ ಕೊಹ್ಲಿ ಅವರನ್ನ ಕಂಡರೆ ಜೀವಕ್ಕಿಂತ ಹೆಚ್ಚಾಗಿ ಅಭಿಮಾನಿಗಳು ಇಷ್ಟ ಪಡುತ್ತಾರೆ. ಆರ್‌ಸಿಬಿ ತಂಡ ಕೂಡ ಸುಮಾರು 21 ಕೋಟಿ ರೂಪಾಯಿ ಕೊಟ್ಟು ವಿರಾಟ್ ಕೊಹ್ಲಿ ಅವರ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಹಿತಿ ಇದೆ. ಐಪಿಎಲ್ 2025 ಅಖಾಡದಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಆರ್ಭಟ ಕೂಡ ಜೋರಾಗಿಯೇ ಇದೆ. ಹೀಗಿದ್ದಾಗಲೇ, 21 ಕೋಟಿ ರೂಪಾಯಿ ಆಟಗಾರ ವಿರಾಟ್ ಕೊಹ್ಲಿ ಹೈದರಾಬಾದ್ ಪಂದ್ಯದಲ್ಲಿ ಆಡಲ್ಲ ಅಂತಾ...

ವಿರಾಟ್ ಕೊಹ್ಲಿ ಹೈದರಾಬಾದ್ ಪಂದ್ಯದಲ್ಲಿ...
ಯೆಸ್, ಭಾರತ & ಪಾಕಿಸ್ತಾನ ನಡುವೆ ಯುದ್ಧ ಶುರುವಾದ ಬೆನ್ನಲ್ಲೇ ಐಪಿಎಲ್ 2025 ಪೂರ್ತಿ ನಿಲ್ಲಿಸಲಾಗಿತ್ತು. ಹೀಗೆ 2025ರ ಐಪಿಎಲ್ ನಿಲ್ಲಿಸಿ ಆದೇಶ ಹೊರಡಿಸಿದ್ದ ಬಿಸಿಸಿಐ ಈಗ ಮತ್ತೆ ಐಪಿಎಲ್ ಶುರು ಮಾಡಿದೆ. ಹೀಗಿದ್ದಾಗ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಮಳೆ ಕಾಟಕ್ಕೆ ಚಿಂತೆ ಮಾಡುವಂತೆ ಆಗಿದೆ. ಇದೇ ಕಾರಣಕ್ಕೆ ಬೆಂಗಳೂರಲ್ಲಿ ನಡೆಯಬೇಕಿದ್ದ ಪಂದ್ಯ ಶಿಫ್ಟ್ ಆಗಿ ಇದೀಗ ಉತ್ತರ ಪ್ರದೇಶದ ಲಖನೌ ಕ್ರೀಡಾಂಗಣದಲ್ಲಿ ಆಯೋಜನೆ ಆಗಿದೆ. ಹೀಗಿದ್ದಾಗಲೇ, 21 ಕೋಟಿ ರೂಪಾಯಿ ಆಟಗಾರ ವಿರಾಟ್ ಕೊಹ್ಲಿ ಹೈದರಾಬಾದ್ ವಿರುದ್ಧದ RCB ಪಂದ್ಯದಲ್ಲಿ ಆಡಲ್ಲ ಅಂತಾ...
ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ...
ವಿರಾಟ್ ಕೊಹ್ಲಿ ಅವರು ಇಲ್ಲದೆ ಐಪಿಎಲ್ ಮ್ಯಾಚ್ ನೋಡಲು ಆಗಲ್ಲ ಅನ್ನೋದು ಫ್ಯಾನ್ಸ್ ಮಾತು. ಯಾಕೆ ಅಂದ್ರೆ ವಿರಾಟ್ ಕೊಹ್ಲಿ ಅವರು ಇದ್ದರೆ ಅದರ ಮಜಾನೆ ಬೇರೆ ಆಗಿರುತ್ತದೆ, ಹಿಗಾಗಿ ವಿರಾಟ್ ಕೊಹ್ಲಿ ಇರಲೇಬೇಕು ಅನ್ನೋ ವಾದ ಮಾಡುತ್ತಾರೆ ಕೋಟಿ ಕೋಟಿ ಅಭಿಮಾನಿ ದೇವರುಗಳು. ಆದರೆ ಇದೀಗ, ವಿರಾಟ್ ಕೊಹ್ಲಿ ಅವರು ಹೈದರಾಬಾದ್ ವಿರುದ್ಧ ಆರ್‌ಸಿಬಿ ತಂಡದ ಪರವಾಗಿ ನಾಳೆ ಆಟ ಆಡುತ್ತಾರಾ? ಇಲ್ಲವಾ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್‌ಸಿಬಿ & ಹೈದರಾಬಾದ್ ಪಂದ್ಯ ಮಳೆ ಭಯ ಹಿನ್ನೆಲೆ ಲಖನೌಗೆ ಶಿಫ್ಟ್ ಆಗಿದೆ, ಆದರೆ ವಿರಾಟ್ ಕೊಹ್ಲಿ ಅವರು ಇನ್ನೂ ಲಖನೌಗೆ ಹೋಗಿಲ್ಲ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ...
ಅಭಿಮಾನಿಗಳ ಮನಸ್ಸಿನಲ್ಲಿ ಹೊಸ ತಳಮಳ...
ವಿರಾಟ್ ಕೊಹ್ಲಿ ಅವರು ಇನ್ನೂ ಲಖನೌಗೆ ಹೋಗಿಲ್ಲ ಅನ್ನೋ ಸುದ್ದಿ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಹಬ್ಬಿದ ನಂತರ ಅಭಿಮಾನಿಗಳಿಗೆ ಟೆನ್ಷನ್ ಶುರುವಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ, ಹೀಗಾಗಿ ವಿರಾಟ್ ಕೊಹ್ಲಿ ಅವರು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಡುತ್ತಾರಾ? ಇಲ್ಲವಾ? ಎಂಬ ಕುತೂಹಲ ಹೆಚ್ಚಾಗಿದೆ.
ಮತ್ತೊಂದು ಕಡೆಯಲ್ಲಿ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅವ್ರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ನಂತರ ಒಂದೇ ಒಂದು ಐಪಿಎಲ್ ಪಂದ್ಯವನ್ನ ಕೂಡ ಆಡಿಲ್ಲ, ಕೆಕೆಆರ್ ವಿರುದ್ಧದ ಪಂದ್ಯ ಮಳೆಯಲ್ಲಿ ಮುಳುಗಿ ಹೋಗಿತ್ತು. ಈ ಕಾರಣಕ್ಕೆ ಅಭಿಮಾನಿಗಳು ಆರ್‌ಸಿಬಿ ತಂಡದ ಪರವಾಗಿ ನಾಳೆ ಹೈದರಾಬಾದ್ ತಂಡಕ್ಕೆ ಚಳಿ ಬಿಡಿಸಲು ಕಿಂಗ್ ಕೊಹ್ಲಿ ಬರ್ತಾರೆ ಅಂತ ಕಾಯುತ್ತಿದ್ದರು. ಆದರೆ ಇದೀಗ ಬೇರೆಯದ್ದೇ ಸುದ್ದಿ ಹಬ್ಬಿದ್ದು, ಈ ಬಗ್ಗೆ ಚರ್ಚೆ ಜೋರಾಗಿದೆ... ಹೀಗಾಗಿ ಕಿಂಗ್ ವಿರಾಟ್ ಕೊಹ್ಲಿ ಅವರು ನಾಳೆ ಆಡಬೇಕು ಅನ್ನೋದೆ ಎಲ್ಲರ ಆಸೆಯಾಗಿದೆ...












Click it and Unblock the Notifications