200 ರನ್ ಕೂಡ ಹೊಡೆಯಲು ಆಗಲಿಲ್ಲ, ಆರ್‌ಸಿಬಿ ಸೋಲಿಗೆ ಈ ಇಬ್ಬರೇ ಪ್ರಮುಖ ಕಾರಣವಂತೆ... Virat Kohli
ಸುಮಾರು 50 ಕೋಟಿಗೂ ಹೆಚ್ಚು ಜನ ನಿನ್ನೆಯ ಆರ್‌ಸಿಬಿ ಬೆಂಗಳೂರು & ಎಸ್‌ಆರ್‌ಎಚ್ ಹೈದರಾಬಾದ್ ನಡುವಿನ ಮ್ಯಾಚ್ ನೋಡುತ್ತಿದ್ದರು. ಅದರಲ್ಲೂ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ನಿನ್ನೆ ಭರ್ಜರಿ ಗೆಲುವು ಕಾಣುತ್ತೆ, ಈ ಮೂಲಕ 200ಕ್ಕೂ ಹೆಚ್ಚು ರನ್‌ಗಳ ಟಾರ್ಗೆಟ್ ಇದ್ದರೂ ಆರ್‌ಸಿಬಿ ಅಬ್ಬರಿಸುತ್ತೆ ಅಂತಾನೇ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಕೋಟಿ ಕೋಟಿ ಅಭಿಮಾನಿಗಳ ಕನಸು ಪೀಸ್ ಪೀಸ್ ಆಗಲು ಈ ಇಬ್ಬರೇ ಪ್ರಮುಖ ಕಾರಣವಂತೆ...
18 ವರ್ಷಗಳಿಂದ ಎಲ್ಲರ ಬಾಯಲ್ಲೂ ಬರುತ್ತಿರುವ ಮಾತು ಒಂದೇ, ಈ ಸಲ ಕಪ್ ನಮ್ದೇ... ಹೀಗೆ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು ಸತತವಾಗಿ 18 ವರ್ಷಗಳಿಂದಲೂ ಐಪಿಎಲ್ ಕಪ್ ಗೆಲುವಿಗಾಗಿ ಕಾಯುತ್ತಿದ್ದಾರೆ. ಹೀಗಿದ್ದಾಗ 2025ರ ಐಪಿಎಲ್ ಟೂರ್ನಿ ನಾವೇ ಗೆಲ್ಲೋದು ಅಂತಾ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು ಹೇಳುತ್ತಿದ್ದರು. ಆರ್‌ಸಿಬಿ ಕೂಡ ಈ ವರ್ಷ ಸಖತ್ ಆಗಿ ಆಡುತ್ತಲೇ ಬಂದಿತ್ತು, ಆದರೆ ಕೊನೇ ಹಂತದಲ್ಲಿ ಏನೇನೋ ಎಡವಟ್ಟು ಆಗಿ ಹೋಗಿದೆ. ಅದರಲ್ಲೂ ಹೈದರಾಬಾದ್ ವಿರುದ್ಧ ನಿನ್ನೆ ಆರ್‌ಸಿಬಿ ಬೆಂಗಳೂರು ತಂಡ ಸೋತು ಹೋಗಲು ಈ ಇಬ್ಬರೇ ಕಾರಣವಂತೆ!

ಆರ್‌ಸಿಬಿ ಸೋಲಿಗೆ ಈ ಇಬ್ಬರೇ ಕಾರಣ...
ಹೌದು, 200ಕ್ಕೂ ಹೆಚ್ಚು ರನ್‌ಗಳ ಬೃಹತ್ ಟಾರ್ಗೆಟ್ ಚೇಸ್ ಮಾಡಿದ್ದ ಆರ್‌ಸಿಬಿ ತಂಡಕ್ಕೆ ಆರಂಭದಲ್ಲಿ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ & ಫಿಲ್ ಸಾಲ್ಟ್ ಭದ್ರ ಭವಿಷ್ಯ ಹಾಕಿಕೊಟ್ಟರು. ಅದರಲ್ಲೂ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಮನಸ್ಸಿಗೆ ಬಂದಂತೆ ಹೈದರಾಬಾದ್ ಬೌಲರ್‌ಗಳ ಬೌಲಿಂಗ್ ದಾಳಿ ಚಚ್ಚಿ ಬಿಸಾಡಿಬಿಟ್ಟರು. ಹೀಗಿದ್ದಾಗಲೇ, ಆರ್‌ಸಿಬಿ ಸೋಲಿಗೆ ಆ ಇಬ್ಬರೇ ಪ್ರಮುಖ ಕಾರಣವಂತೆ...
ಆರ್‌ಸಿಬಿ ಅಭಿಮಾನಿಗಳ ಆಕ್ರೋಶ!
ಹೈದರಾಬಾದ್ ವಿರುದ್ಧ ನಿನ್ನೆ ಆರ್‌ಸಿಬಿ ತಂಡ ಸುಲಭವಾಗಿ ಗೆಲ್ಲುವ ಅವಕಾಶವನ್ನ ಕಿಂಗ್ ವಿರಾಟ್ ಕೊಹ್ಲಿ & ಫಿಲ್ ಸಾಲ್ಟ್ ಸೃಷ್ಟಿ ಮಾಡಿದ್ದರು. ಹೀಗಿದ್ದಾಗ ನಂತರ ಬಂದ ಆರ್‌ಸಿಬಿ ತಂಡದ ಬೇರೆ ಆಟಗಾರರು ಸರಿಯಾಗಿ ಆಟ ಆಡಿದ್ದರೆ ಸುಲಭವಾಗಿ ಗೆದ್ದು ಬೀಗಬಹುದಿತ್ತು. ನಿನ್ನೆ ಆರ್‌ಸಿಬಿ ತಂಡ ಗೆದ್ದು ಬೀಗಿದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲೇ ಮುಂದುವರಿಯುವ ಅವಕಾಶ ಇತ್ತು. ಹೀಗಿದ್ದಾಗ ಕೆಲವು ಆಟಗಾರರು ಮಾಡಿದ ಎಡವಟ್ಟು ಬಗ್ಗೆ ಇದೀಗ ಆಕ್ರೋಶದ ರಣಕಹಳೆ ಮೊಳಗಿದೆ.
ಯೆಸ್, ಮಯಾಂಕ್ ಅಗರ್ವಾಲ್ ಕೇವಲ 11 ರನ್, ರಜತ್ ಪಾಟಿದಾರ್ 18 ರನ್ ಹಾಗೂ ಜಿತೇಶ್ ಶರ್ಮಾ ಕೇವಲ 24 ರನ್ ಬಾರಿಸಿ ಆರ್‌ಸಿಬಿ ತಂಡಕ್ಕೆ ನೆರವು ನೀಡಲೇ ಇಲ್ಲ. ಈ ಎಲ್ಲರಿಗಿಂತ ದೊಡ್ಡ ವೇಸ್ಟ್ ಅಂದ್ರೆ ರೋಮಾರಿಯೋ ಶೆಫರ್ಡ್ 1 ಬಾಲ್ ಆಡಿ 0 ರನ್ ಸುತ್ತಿ ಹೋಗಿದ್ದು ಹಾಗೂ ಟಿಮ್ ಡೇವಿಡ್ ಕೇವಲ 1 ರನ್‌ಗೆ ಔಟ್ ಆಗಿ ಹೋಗಿದ್ದು ಅಂತಿದ್ದಾರೆ ಆರ್‌ಸಿಬಿ ಅಭಿಮಾನಿಗಳು. ಅಲ್ಲದೆ ಆರ್‌ಸಿಬಿ ತಂಡ ಸೋಲು ಕಾಣಲು ಇದೇ ರೋಮಾರಿಯೋ ಶೆಫರ್ಡ್ & ಟಿಮ್ ಡೇವಿಡ್ ಕಾರಣ ಅಂತಾ, ಈ ಇಬ್ಬರೂ ಆಟಗಾರರ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.












Click it and Unblock the Notifications