ರೋಹಿತ್ ಶರ್ಮಾ ನಿವೃತ್ತಿ ಬೆನ್ನಲ್ಲೆ ವಿರಾಟ್ ಕೊಹ್ಲಿ ನಿವೃತ್ತಿ: ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಕಿಂಗ್
ಭಾರತ-ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ಬಿಸಿಸಿಐ ಐಪಿಎಲ್ 2025 ಟೂರ್ನಿಯನ್ನ ಅರ್ಧಕ್ಕೆ ರದ್ದುಗೊಳಿಸಿತ್ತು. ಆಟಗಾರರ ಭದ್ರತೆ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೆ ಆರ್‌ಸಿಬಿ ಹಾಗೂ ಭಾರತದ ಸ್ಟಾರ್ ಕ್ರಿಕೆಟ್ ಆಟಗಾರ ಜೈ ಹಿಂದ್ ಎಂದು ಹೇಳುವ ಮೂಲಕ ಇಂಡಿಯನ್ ಆರ್ಮಿಗೆ ಸಪೋರ್ಟ್ ಮಾಡಿದ್ದರು. ಇದೀಗ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಹೇಳಿಕೆ ನೀಡಿ ಬಿಸಿಸಿಐಗೆ ಬಿಗ್ ಶಾಕ್ ನೀಡಿದ್ದಾರೆ.
ಆಟಗಾರು, ಅಭಿಮಾನಿಗಳು ಹಾಗೂ ಪ್ರಾಂಚೈಸಿ ಭದ್ರತೆ ಹಿತದೃಷ್ಟಿತಿಂದ ಬಿಸಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೆ, ಐಪಿಎಲ್‌ಗಿಂತ ದೇಶ ಹಾಗೂ ಭಾರತೀಯ ಸೇನೆ ಮೊದಲು ಅಂತಲೂ ಹೇಳುವ ಮೂಲಕ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಭಾರತ ತಂಡ ಸ್ಟಾರ್ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಬಿಸಿಸಿಐ ಶಾಕ್ ನೀಡಿದೆ.

ಹೌದು.. ಇತ್ತೀಚೆಗಷ್ಟೇ ಭಾರತದ ತಂಡದ ನಾಯಕ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದರು. ಇದರ ಬೆನ್ನಲ್ಲ ಇದೀಗ ಮತ್ತೊಬ್ಬ ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಲು ನಿರ್ಧರಿಸಿದ್ದು, ಈ ಮೂಲಕ ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಆದರೆ, ಈ ಬಗ್ಗೆ ಬಿಸಿಸಿಐ ಹೇಳಿದ್ದೇನು ಎಂದು ಇಲ್ಲಿ ತಿಳಿಯಿರಿ.
ಈಗಾಗಲೇ ಟಿ-20 ಗೆಲುವಿನ ಬಳಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ನಡುವೆಯೇ ಭಾರತೀಯ ಕ್ರಿಕೆಟ್ ಮಂಡಳಿಯು ಟೆಸ್ಟ್ ಕ್ರಿಕೆಟ್‌ಗೆ ಹೊಸ ನಾಯಕನ ಹುಡುಕಾಟದಲ್ಲಿದ್ದು, ಇದಕ್ಕೂ ಮುಂಚೆಯೇ ಅಂದರೆ ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಅವರೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಶಾಕ್ ಕೊಟ್ಟಿದ್ದರು. ಇದೀಗ ಅವರ ಹಾದಿಯಲ್ಲೇ ವಿರಾಟ್ ಕೊಹ್ಲಿ ಸಹ ಮುಂದುವರೆದಿದ್ದಾರೆ ಎಂದು ತಿಳಿದುಬಂದಿದೆ.
ಬಾಂಗ್ಲಾದೇಶ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿ ವಿಫಲರಾದ ಬಳಿಕ ರೋಹಿತ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡುವ ನಿರ್ಧಾರ ಮಾಡಿದ್ದರು. ಇದರ ಬೆನ್ನಲಗಲೇ ಭಾರತದ ಸ್ಫೋಟಕ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ನಿವೃತ್ತಿಯ ಮಾತುಗಳನಾಡಿದ್ದು, ಆದರೆ ಈ ನಿರ್ಧಾರದ ಬಗ್ಗೆ ಯೋಚನೆ ಮಾಡುವಂತೆಯೂ ಬಿಸಿಸಿಐ ಅವರನ್ನು ಕೇಳಿದೆ ಎಂದು ತಿಳಿದುಬಂದಿದೆ.
ಮುಂದಿನ ತಿಂಗಳು ಅಂದರೆ, ಜೂನ್‌ನಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ 5 ಟೆಸ್ಟ್‌ಗಳ ಸರಣಿಗೆ ತಂಡವನ್ನು ಆಯ್ಕೆ ಮಾಡಲು ಆಯ್ಕೆದಾರರು ಶೀಘ್ರದಲ್ಲೇ ಸಭೆ ಸೇರಲಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಂತರ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಯೋಚಿಸಲು ಆರಂಭಿಸಿದರು.
ಇನ್ನು ಆ ಸರಣಿಯ ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದ ಬಳಿಕ ಕೊಹ್ಕಿ ಅವರ ಪ್ರದರ್ಶನ ಉತ್ತಮ ಆಗಿರಲಿಲ್ಲ. ಇದೀಗ ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದು, ನಿವೃತ್ತಿ ವಿಚಾರದಲ್ಲಿ ತಮ್ಮ ನಿಲುವು ಬದಲಾಯಿಸದಿದ್ದರೆ, ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಮಾಹಿತಿ ಪ್ರಕಾರ, ವಿರಾಟ್ ಕೊಹ್ಲಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಬಿಸಿಸಿಐನ ನಿಲುವಾಗಿದೆ. "ಅವರು ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯದ ಬಗ್ಗೆ ಮಂಡಳಿಗೆ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಂದಿದೆ. ಆದರೂ, ಬಿಸಿಸಿಐ ಅವರನ್ನು ನಿವೃತ್ತಿ ಘೋಷಣೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದೆ ಅಂತಲೂ ಮಾಹಿತಿ ಲಭ್ಯವಾಗಿದೆ.
2014ರ ಕೊನೆಯಲ್ಲಿ ವಿರಾಟ್ ಕೊಹ್ಲಿ ಭಾರತೀಯ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ್ರು. ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಳಿಕ ಅವರನ್ನು ಭಾರತದ ನಾಯಕರನ್ನಾಗಿ ಮಾಡಲಾಯಿತು. ಆದರೆ, 2022ರ ಆರಂಭದಲ್ಲಿ ವಿರಾಟ್ ನಾಯಕತ್ವದಂದಿ ಕೆಳಗಿಳಿಯಲು ನಿರ್ಧರಿಸಿದ್ದು, ನಂತರ ಬಿಸಿಸಿಐ ಈ ಸ್ಥಾನವನ್ನು ರೋಹಿತ್ ಶರ್ಮಾ ಅವರಿಗೆ ನೀಡಿತ್ತು. ಈಗಾಗಲೇ ರೋಹಿತ್ ವಿದಾಯ ಹೇಳಿದ್ದು, ಇದೇ ಹಾದಿಯನ್ನು ಕೊಹ್ಲಿ ಹಿಡಿದಿದ್ದಾರೆ. ಇದರಿಂದ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ಗೆ ಅನುಭವಿ ಆಟಗಾರರ ಕೊರತೆಯಾದಂತಾಗುತ್ತದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಸಾಧನೆ
* ಟೆಸ್ಟ್ ಪಂದ್ಯ - 123 ಗಳನ್ನು
* ರನ್ - 9,230 ಗಳಿಸಿದ್ದಾರೆ.
* ಸರಾಸರಿ - 46.85
ಐಪಿಎಲ್ 2025 ಟೂರ್ನಿ ರದ್ದಾದ ಬಳಿಕ ಜೈ ಹಿಂದ್ ಎನ್ನುವ ಪೋಸ್ಟರ್ ಅನ್ನು ಅವರ ಇನ್ಸ್ಟಾ ಪೇಜ್‌ನಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ನೀಡುವ ಬಗ್ಗೆ ಮಾತನಾಡಿದ್ದು, ಸೈನ್ಯಕ್ಕೆ ಸೇರಲಿದ್ದಾರೆಯಾ ಎನ್ನುವ ಪ್ರಶ್ನೆಗಳು ಮೂಡಿವೆ.












Click it and Unblock the Notifications