Virat Kohli: ದಾನಿಶ್ ಸೇಠ್ ವಿರುದ್ಧ ಸಿಟ್ಟಿಗೆದ್ದ ವಿರಾಟ್ ಕೊಹ್ಲಿ!

ಐಪಿಎಲ್ 2025ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿರುವ ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ನಟ ದಾನಿಶ್ ಸೇಠ್ ನಡೆಸಿಕೊಡುವ ಆರ್ ಸಿಬಿ ಇನ್‌ಸೈಡರ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಸಿಟ್ಟಿಗೆದ್ದರು. ದಾನಿಶ್ ಸೇಠ್ ವಿರಾಟ್ ಕೊಹ್ಲಿಗೆ ಪ್ರಶ್ನೆಗಳನ್ನು ಕೇಳಿದ್ದರ ಜೊತೆ ತಬ್ಬಿಕೊಂಡಿದ್ದು ಕೊಹ್ಲಿಗೆ ಸಿಟ್ಟು ತರಿಸಿತು. ಇದರಿಂದ ಸೀದಾ ಎದ್ದು ಹೋಗಿದ್ದಾರೆ.

virat kohli angry on mr nags rcb insiders show ipl 2025

ದಾನಿಶ್ ಸೇಠ್ ಮಾಡಿದ್ದೇನು?

ಕಳೆದ ಕೆಲವು ವರ್ಷಗಳಿಂದ ವಿರಾಟ್ ಕೊಹ್ಲಿ ಆಧ್ಯಾತ್ಮದತ್ತ ಮುಖ ಮಾಡಿದ್ದಾರೆ. ಕ್ರಿಕೆಟ್‌ನಿಂದ ಬಿಡುವು ಸಿಕ್ಕಿದಾಗ ಪ್ರೇಮಾನಂದ ಗೋವಿಂದ ಶರಣ್ ಮಹಾರಾಜ್ ಹಾಗೂ ಬಾಬಾ ನೀಮ್ ಕರೋಲಿ ಮಂದಿರಕ್ಕೆ ಪತ್ನಿ, ಮಕ್ಕಳ ಸಮೇತ ಹೋಗಿ ಧ್ಯಾನ ಮಾಡಿದ್ದರು. ಇದೇ ಥೀಮ್ ಇಟ್ಟುಕೊಂಡು ದ್ಯಾನಿಶ್ ಸೇಠ್ ವಿರಾಟ್ ಕೊಹ್ಲಿ ಅವರ ಸಂದರ್ಶನ ಮಾಡಿದ್ದಾರೆ.

ವಿರಾಟ್ ಕೊಹ್ಲಿ ದ್ಯಾನಿಶ್ ಸೇಠ್‌ಗೆ ಧ್ಯಾನ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ. ನಿಮಗೆ ಅನುಕೂಲವಾಗುವ ಆಸನದಲ್ಲಿ ಕುಳಿತು, ದೀರ್ಘವಾಗಿ ಮೂಗಿನಿಂದ ಉಸಿರು ಎಳೆದುಕೊಂಡು ಬಾಯಿ ಮೂಲಕ ಉಸಿರನ್ನು ಬಿಡಿ, ಸಮುದ್ರದ ಅಲೆಯ ಶಬ್ದವನ್ನು ಊಹಿಸಿಕೊಳ್ಳಿ ಎಂದು ಹಳುದ್ದಾರೆ.

ಪ್ರೀತಿ ಪಾತ್ರರನ್ನು ನೆನಪಿಸಿಕೊಳ್ಳಿ ಎಂದಿದ್ದು ಈ ಸಂದರ್ಭದಲ್ಲಿ ದ್ಯಾನಿಶ್ ಸೇಠ್ ವಿರಾಟ್ ಕೊಹ್ಲಿ ಅವರನ್ನು ತಬ್ಬಿಕೊಂಡಿದ್ದಾರೆ. ಕೊಹ್ಲಿ ಕಿರಿಕಿರಿಯಾಗಿದ್ದು ನನ್ನನ್ನು ಯಾಕೆ ತಬ್ಬಿಕೊಂಡೆ ಎಂದು ಕೇಳಿದ್ದು, ನೀವೆ ಅಲ್ಲವೇ ಪ್ರೀತಿ ಪಾತ್ರರಿಗೆ ಪ್ರೀತಿ ಕೊಡಿ ಎಂದಿದ್ದು ಎನ್ನುತ್ತಾರೆ. ಇದಕ್ಕೆ ಸಿಟ್ಟಾದ ಕೊಹ್ಲಿ, ಸ್ನಾನ ಮಾಡಿಕೊಂಡು ಬಂದು ತಬ್ಬಿಕೊಳ್ಳಬೇಕು, ಸ್ನಾನ ಮಾಡದೆ ಬಂದು ಹಿಂಗೆ ಮಾಡಿದರೆ ನನ್ನ ನೆಮ್ಮದಿಯೆಲ್ಲಾ ಹಾಳಾಯಿತು, ನಾನು ಹೋಗಿ ಸ್ನಾನ ಮಾಡಬೇಕು ಎಂದು ಅಲ್ಲಿಂದ ಹೋಗಿದ್ದಾರೆ. ಆಗ ದಾನಿಶ್ ಸೇಠ್ ಶಾಂತಿ ಕಾಪಾಡಿಕೊಳ್ಳಿ ಎಂದು ಕೊಹ್ಲಿಗೆ ಕೂಗಿ ಕೇಳಿದ್ದು, ಇದಕ್ಕೆ ಇನ್ನಷ್ಟು ರೇಗಿದ ಕೊಹ್ಲಿ, ಬೇರೆ ರೀತಿಯ ಉತ್ತರ ಕೊಟ್ಟಿದ್ದಾರೆ.

ಇದು ತಮಾಷೆಗಾಗಿ ಮಾಡಿದ ಕಾರ್ಯಕ್ರಮವಾಗಿದ್ದು ಆರ್ ಸಿಬಿ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಎಪಿಸೋಡ್ ನೋಡಿದ ಅಭಿಮಾನಿಗಳು ವಿರಾಟ್ ಕೊಹ್ಲಿ ಹಾಸ್ಯಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದಾರೆ. ಕೊಹ್ಲಿ ಸಿನಿಮಾದಲ್ಲಿ ಅಭಿನಯಿಸಲಿ ಎಂದು ಕೆಲವರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+