Get Updates
Get notified of breaking news, exclusive insights, and must-see stories!

Virat Kohli: ವಿರಾಟ್ ಕೊಹ್ಲಿ & ಎಬಿಡಿ ನಡುವೆ ಈ ಕಾರಣಕ್ಕೆ ಮಾತು ನಿಂತಿತ್ತು!

Virat Kohli and AB De Villiers: ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಇಬ್ಬರೂ ಕ್ರಿಕೆಟ್ ಲೋಕದ ದಿಗ್ಗಜರು. ಇವರಿಬ್ಬರು ಆತ್ಮೀಯರು ಎನ್ನುವುದು ಹೊಸ ವಿಚಾರವೇನು ಅಲ್ಲ ಆದರೆ ಇವರಿಬ್ಬರ ಸ್ನೇಹ ಗಳಸ್ಯ ಕಂಠಸ್ಯ ಎನ್ನುವಷ್ಟು ಗಾಢವಾಗಿದೆ. ರಾಯಲ್ ಚಾಲೆಂಜರ್ಸ್‌ನಲ್ಲಿ (ಆರ್‌ಸಿಬಿ)ಯಲ್ಲಿ ಆಡುವಾಗ ಇವರ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಿತ್ತು. ಅಲ್ಲದೇ ಒಬ್ಬರನ್ನೊಬ್ಬರು ಸಾಕಷ್ಟು ತಿಳಿದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಬಹುಕಾಲ ಆಟವಾಡಿದ ಈ ಆಟಗಾರರ ಸ್ನೇಹ ಈಗ ಕುಟುಂಬವಾಗಿ ಬದಲಾಗಿದೆ. ಆದರೆ ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತ್ತು ಎನ್ನುವ ವಿಷಯ ಈಗ ವೈರಲ್ ಆಗುತ್ತಿದೆ. ಇಷ್ಟಕ್ಕೂ ಗಳಸ್ಯ ಕಂಠಸ್ಯ ಎನ್ನುವಂತಿದ್ದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ನಡುವೆ ವೈಮನಸ್ಸು ಯಾವ ಕಾರಣಕ್ಕೆ ಮೂಡಿತ್ತು ಎನ್ನುವುದನ್ನು ನೋಡೋಣ.

ವಿರಾಟ್ ಕೊಹ್ಲಿ ಹಾಗೂ ಎಬಿಡಿ ಅವರ ನಡುವಿನ ಗೆಳತನ ಅಚಲವಾಗಿದೆ. ಇವರಿಬ್ಬರು ಮೈದಾನದಲ್ಲಿ ದುಃಖ ಹಾಗೂ ಸಂತೋಷದ ಕ್ಷಣಗಳನ್ನು ಒಟ್ಟೊಟ್ಟಿಗೆ ಸಂಭ್ರಮಿಸಿದ್ದಾರೆ. ಇಬ್ಬರೂ ಸೋಲು - ಗೆಲುವಿನಲ್ಲಿ ಜೊತೆಯಾಗಿದ್ದವರು. ಈಚೆಗೆ ರಾಯಲ್‌ ಚಾಲೆಂರ್ಜಸ್‌ ಬೆಂಗಳೂರು ತಂಡವು ಗೆಲುವು ಸಾಧಿಸಿದ ಮೇಲೆ ಎಬಿಡಿ ಅವರು ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡದೊಂದಿಗೆ ಸಂಭ್ರಮಿಸಿದ್ದರು. ಆದರೆ, ಆಗಲೂ ಬಹಿರಂಗವಾಗದ ವಿಷಯವೊಂದು ಈಗ ಬಹಿರಂಗವಾಗಿದೆ. ವಿರಾಟ್ ಕೊಹ್ಲಿ ಅವರ ವೈಯಕ್ತಿಕ ವಿಚಾರವೊಂದನ್ನು ಎಬಿಡಿ ಅವರು ಎಲ್ಲರ ಮುಂದೆ ಹಂಚಿಕೊಂಡಿದ್ದೇ ಎಡವಟ್ಟಿಗೆ ಕಾರಣವಾಗಿತ್ತು ಅಂತ ಖುದ್ದು ಎಬಿಡಿ ಅವರೇ ಹೇಳಿದ್ದಾರೆ. ಇಷ್ಟಕ್ಕೂ ಎಬಿಡಿ ಹಾಗೂ ವಿರಾಟ್ ನಡುವೆ ವೈಮನ್ಸು ಮೂಡಿದ್ದೇಕೆ ಎನ್ನುವುದು ಇಲ್ಲಿದೆ.

Virat Kohli and AB De Villiers

ನಾನು ಮಾಡಿದ ಆ ಒಂದು ಸಣ್ಣ ತಪ್ಪಿನಿಂದಾಗಿ ಹಲವು ತಿಂಗಳುಗಳ ಕಾಲ ವಿರಾಟ್ ಕೊಹ್ಲಿ ಅವರು ನನ್ನೊಂದಿಗೆ ಮಾತು ಮುರಿದುಕೊಂಡಿದ್ದರು. ವಿರಾಟ್‌ ನನ್ನ ನಡುವೆ ಮಾತುಕತೆ ಇರಲಿಲ್ಲ. ಈಗ ಐದಾರು ತಿಂಗಳುಗಳಿಂದ ಎಲ್ಲವೂ ಸರಿ ಹೋಗಿದೆ ಎಲ್ಲವೂ ಮೊದಲಿನಂತೆ ಆಗುತ್ತಿದೆ ಎಂದು ಎಬಿಡಿ ಅವರು ಹೇಳಿದ್ದಾರೆ. ಇದಕ್ಕೆ ಕಾರಣವಾಗಿರುವುದು ಅಚಾನಕ್ಕಾಗಿ ವಿರಾಟ್ ಕೊಹ್ಲಿ ಅವರ ಖಾಸಗಿ ವಿಚಾರವನ್ನು ಎಬಿಡಿ ಅವರು ಹಂಚಿಕೊಂಡಿದ್ದು.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಅವರ ವೈಯಕ್ತಿಕ ಜೀವನ ಹಾಗೂ ಖಾಸಗಿ ವಿಚಾರಗಳನ್ನು ಅತ್ಯಂತ ಗೌಪ್ಯವಾಗಿ ಇರಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಅವರ ಮಕ್ಕಳ ಚಿತ್ರಗಳನ್ನು ಕ್ಲಿಕ್ಕಿಸದಂತೆ ಅವರು ಮನವಿ ಮಾಡಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಖಾಸಗಿ ವಿಚಾರಗಳನ್ನು ವಿರುಷ್ಕಾ ದಂಪತಿ ಅಷ್ಟಾಗಿ ಬಹಿರಂಗಪಡಿಸುವುದಿಲ್ಲ.

ಈ ರೀತಿ ಇರುವಾಗಲೇ 2024ರ ಪ್ರಾರಂಭದಲ್ಲಿ ವಿರಾಟ್ ಕೊಹ್ಲಿ ಅವರು ಭಾರತದಲ್ಲಿ ನಡೆಯುತ್ತಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಬ್ರೇಕ್‌ ತೆಗೆದುಕೊಂಡಿದ್ದರು. ಅವರು ಕೆಲವೊಂದು ವೈಯಕ್ತಿಕ ಕಾರಣಗಳನ್ನು ಕೊಟ್ಟು ವಿರಾಮ ಘೋಷಿಸಿದ್ದರು. ಆದರೆ ಆ ಸಮಯದಲ್ಲಿ ಎಬಿ ಡಿವಿಲಿಯರ್ಸ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದಿದ್ದರು.

ಅಲ್ಲದೇ ಈ ಸರಣಿಯಿಂದ ಕೊಹ್ಲಿ ಹಿಂದೆ ಸರಿಯುವುದಕ್ಕೆ ಇದೇ ಕಾರಣ ಎಂದು ಹೇಳಿದ್ದರು. ಆದರೆ ಈ ರೀತಿ ಅವರು ಹೇಳಿದ್ದು ಉದ್ದೇಶಪೂರ್ವಕವಾಗಿರಲಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದನ್ನು ಬಹಿರಂಗಪಡಿಸಿದ ಮೇಲೆ ಎಬಿಡಿ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಆದರೂ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು ಅಂತ ಎಬಿಡಿ ಅವರೇ ಹೇಳಿಕೊಂಡಿದ್ದಾರೆ.

ನಾನು ಮಾಡಿದ ತಪ್ಪಿನಿಂದಾಗಿ ವಿರಾಟ್‌ ಕೊಹ್ಲಿ ಹಲವು ತಿಂಗಳುಗಳ ಕಾಲ ಮಾತನಾಡಿರಲಿಲ್ಲ. ಆದರೆ ಈಗ ಐದಾರು ತಿಂಗಳುಗಳಿಂದ ಕೊಹ್ಲಿ ಅವರೊಂದಿಗೆ ಮಾತನಾಡುವುದಕ್ಕೆ ಅವಕಾಶ ಸಿಕ್ಕಿದೆ. ಈ ಕಾರಣಕ್ಕೆ ದೇವರಿಗೆ ಧನ್ಯವಾದಗಳು ಅಂತ ಹೇಳಿದ್ದಾರೆ. ಅವರ ವೈಯಕ್ತಿ ವಿಚಾರವನ್ನು ನಾನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಬಾರದಿತ್ತು ಅಂತಲೂ ಅವರು ಹೇಳಿದ್ದಾರೆ.

ವಿರಾಟ್‌ ಖಾಸಗಿ ವಿಚಾರ: ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಖಾಸಗಿ ವಿಚಾರಕ್ಕೆ ಆದ್ಯತೆ ಕೊಡುತ್ತಾರೆ. ಇಬ್ಬರೂ ಅವರ ಮಗ ಮತ್ತು ಮಗಳ ಫೋಟೋವನ್ನು ಕ್ಲಿಕ್ಕಿಸಬೇಡಿ ಅಂತ ಮನವಿ ಮಾಡಿಕೊಂಡಿದ್ದರು. ಅವರ ಖಾಸಗಿತನವನ್ನು ಗೌರವಿಸಿ ಅಂತಲೂ ಹೇಳಿದ್ದರು. ಈ ರೀತಿ ಇರುವಾಗ ವಿರಾಟ್‌ ಅವರ ಖಾಸಗಿ ವಿಚಾರವನ್ನು ಎಬಿಡಿ ಅವರು ಯೂಟ್ಯೂಬ್‌ನಲ್ಲಿ ಹೇಳಿದ್ದರು. ಹೀಗಾಗಿ ವಿರಾಟ್‌ಗೆ ಎಬಿಡಿ ಮೇಲೆ ಕೋಪ ಬಂದಿತ್ತು ಅಂತ ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+