Vaibhav Suryavanshi: ಸೆಂಚುರಿ ಬೆನ್ನಲ್ಲೇ ಹೊಸ ದಾಖಲೆ, ಆಸ್ತಿ ಹೆಚ್ಚಳ: ಮುಂದಿನ ಗುರಿ ಬಗ್ಗೆ ಮಾತನಾಡಿದ ವೈಭವ್ ಸೂರ್ಯವಂಶಿ!
Vaibhav Suryavanshi: ವೈಭವ್ ಸೂರ್ಯವಂಶಿ... ಇದೊಂದು ಹೆಸರು ಕಳೆದ ವಾರದಿಂದಲೂ ಭಾರತದ ಕ್ರಿಕೆಟ್ ಲೋಕದಲ್ಲಿ ಪ್ರತಿಧ್ವನಿಸುತ್ತಿರುವ ಹೆಸರು. ವೈಭವ್ ಸೂರ್ಯವಂಶಿ ಎನ್ನುವ 14 ವರ್ಷದ ಯುವಕ ಐಪಿಎಲ್‌ನಲ್ಲಿ ಎರಡು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಒಂದು ಅತ್ಯಂತ ಕಿರಿಯ ಕ್ರಿಕೆಟಿಗ ಮಾಡಿದ ಸಾಧನೆ ಮತ್ತೊಂದು ಅತ್ಯಂತ ಕಡಿಮೆ ಬಾಲ್‌ನಲ್ಲಿ ಶತಕ ಬಾರಿಸಿರುವ ಕಾರಣಕ್ಕೆ. ಹೌದು ಈ ಬಾರಿ ಐಪಿಎಲ್‌ನಲ್ಲಿ ಹೆಚ್ಚು ಸುದ್ದಿ ಮಾಡಿದ ಕ್ರಿಕೆಟಿಗರಲ್ಲಿ ವೈಭವ್ ಸೂರ್ಯವಂಶಿಗೆ ಅಗ್ರಪಂಕ್ತಿ ಅಂತಲೇ ಹೇಳಬಹುದು. ಕ್ರಿಕೆಟ್ ಜಗತ್ತಿನ ಗಣ್ಯಾತಿ ಗಣ್ಯರು ವೈಭವ್‌ಗೆ ವಿಶ್ ಮಾಡಿದ್ದಾರೆ. ಅಷ್ಟೇ ಅಲ್ಲ ವೈಭವ್ ಸಂಪತ್ತು (ಆಸ್ತಿ) ಸಹ ವೈಭವವಾಗಿದೆ. ಈ ರೀತಿ ಇರುವಾಗಲೇ ಮಹತ್ವದ ಆಸೆಯೊಂದನ್ನು ವೈಭವ್ ಹೇಳಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿದೆ.
ಬಿಹಾರದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ ಮೇಲೆ ಒಂದು ಕಡೆ ಲಕ್ ಬದಲಾಗಿದೆ. ಮತ್ತೊಂದು ಕಡೆ ವೈಭವ್ ಸಿಕ್ಕಾಪಟ್ಟೆ ಬೇರೆ... ಬೇರೆ ಕಾರಣಗಳಿಗೆ ಸುದ್ದಿಯಾಗುತ್ತಿದ್ದಾರೆ. ಶತಕದ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆ ಮಾಡಿರುವವರು ವೈಭವ್‌ಗೆ ವಿಶ್ ಮಾಡುತ್ತಿದ್ದಾರೆ. ವೈಭವ್‌ನ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಸಂಖ್ಯೆ ಮಿಲಿಯನ್ ದಾಟಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಿದೆ. ಇದರೊಂದಿಗೆ ಅವರು ಸ್ಪೆಷಲ್ ಆಸೆಯೊಂದನ್ನು ಹೇಳಿಕೊಂಡಿದ್ದಾರೆ. ಅದೇನು ಅಂತ ಇಲ್ಲಿದೆ ಮಾಹಿತಿ...

ವೈಭವ್‌ಗೆ ಹರಿದು ಬಂದ ಸಂಪತ್ತು: ಐಪಿಎಲ್ 2025ನೇ ಸಾಲಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಯ್ಕೆಯಾದಾಗಲೇ ವೈಭವ್ ಸೂರ್ಯವಂಶಿಗೆ ಭರ್ಜರಿ ಆದಾಯ ಹರಿದು ಬಂದಿತ್ತು. ವೈಭವ್‌ಗೆ ಈಗ 14 ವರ್ಷ 23 ದಿನಗಳು ಮಾತ್ರ. ಆದರೆ, ಆತನ ಪರಿಶ್ರಮ ಹಾಗೂ ಕುಟುಂಬದ ಸಹಕಾರ ಆತನನ್ನು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. ಈಗ ವೈಭವ್ ಕೋಟ್ಯಾಂತರ ರೂಪಾಯಿಯ ಒಡೆಯ!
ವೈಭವ್ ಅವರ ಒಟ್ಟು ಆಸ್ತಿಯ ಮೊತ್ತ ಬರೋಬ್ಬರಿ 2 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಬಡ ಮಧ್ಯಮ ಕುಟುಂಬದಿಂದ ಬಂದ ಹುಡುಗ ಕೆಲವೇ ವರ್ಷಗಳಲ್ಲಿ ದೊಡ್ಡ ಸಾಧನೆಯೊಂದನ್ನು ಮಾಡಿದ್ದಾರೆ. ರಾಜಸ್ಥಾನ ತಂಡ ಮೆಗಾ ಹರಾಜಿನಲ್ಲಿ ಇವರ ಹೆಸರು ಕೇಳಿ ಬಂದಾಗ ವೈಭವ್‌ಗೆ 13 ವರ್ಷಗಳಾಗಿತ್ತು ಅಷ್ಟೇ. ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ನಡುವೆ ಭಾರೀ ಪೈಪೋಟಿ ಎದುರಾಗಿತ್ತು. ನಿರಂತರ ಬಿಡ್‌ನ ನಂತರ ರಾಜಸ್ಥಾನ್ ರಾಯಲ್ಸ್ ವೈಭವ್ ಅವರನ್ನು ತಂಡಕ್ಕೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಹರಾಜಿನಲ್ಲಿ ಆರ್‌ಆರ್ ಫ್ರಾಂಚೈಸಿಯು 1.1 ಕೋಟಿ ನೀಡಿ ತಂಡಕ್ಕೆ ಖರೀದಿ ಮಾಡಿತ್ತು. ಈಚೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಹ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಹೊಸ ಆಸೆ ಹಂಚಿಕೊಂಡ ವೈಭವ್!
ನಾನು ಇಂದು ಏನಾದರೂ ಸಾಧನೆ ಮಾಡಿದ್ದರೆ ಅದು ನನ್ನ ತಂದೆ & ತಾಯಿಯ ಪರಿಶ್ರಮದ ಫಲ ಅಂತ ವೈಭವ್ ಹೇಳಿದ್ದಾರೆ. ನನ್ನ ತಾಯಿ ಪ್ರತಿ ದಿನವೂ ರಾತ್ರಿ 11ಕ್ಕೆ ಮಲಗಿ, ನನಗಾಗಿ ಬೆಳಿಗ್ಗೆ 3ಗಂಟೆಗೆಲ್ಲಾ ಏಳುತ್ತಿದ್ದಾರೆ. ನನ್ನ ತಂದೆ ನನ್ನ ಕನಸಿಗಾಗಿ ಅವರ ಕೆಲಸವನ್ನೇ ಬಿಟ್ಟಿದ್ದಾರೆ. ನನ್ನ ಅಣ್ಣ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಇವರೆಲ್ಲರ ಸಹಕಾರಿಂದ ಇದು ಸಾಧ್ಯವಾಗಿದೆ. ಮುಂದಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್‌ಗೆ ದೊಡ್ಡ ಕೊಡುಗೆ ಕೊಡಬೇಕು ಎನ್ನುವುದೇ ನನ್ನ ಆಸೆ ಅಂತ ಹೇಳಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ ಮಾಡುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ.












Click it and Unblock the Notifications