ಮಂಗಳೂರಿನಲ್ಲಿ ಮೂರು ದಿನ ರಾಷ್ಟ್ರಮಟ್ಟದ ಈಜು ಸ್ಪರ್ಧೆ: ಎಮ್ಮೆಕೆರೆ ಈಜುಕೊಳದ ವಿಶೇಷತೆಗಳೇನು..?

ಮಂಗಳೂರು, ನವೆಂಬರ್‌ 25: ಮಂಗಳೂರು ನಗರದ ಎಮ್ಮೆಕೆರೆಯಲ್ಲಿ ಇಂದು ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಲೋಕಾರ್ಪಣೆಗೊಂಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮೂರು ದಿನಗಳವರೆಗೆ ರಾಷ್ಟ್ರಮಟ್ಟದ ಈಜು ಸ್ಪರ್ಧೆ ಆಯೋಜನೆಗೊಂಡಿದೆ. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಮೂಲೆಗಳಿಂದ ಬಂದ ಈಜು ಸ್ಪರ್ಧಿಗಳು ಉತ್ಸಾಹದಿಂದಲೇ ಭಾಗವಹಿಸಿದರು.

ವಿವಿಧ ವಿಭಾಗಗಳಲ್ಲಿ ಈಜುಸ್ಪರ್ಧೆ ನಡೆಯಲಿದ್ದು, 29 ರಾಜ್ಯಗಳ ಸುಮಾರು 752 ಮಂದಿ ಈಜುಪಟುಗಳು ಭಾಗವಹಿಸಿದ್ದಾರೆ. 25 ವರ್ಷದಿಂದ 90 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯನ್ನು ನಡೆಸಲು ಈಜು ಫೆಡರೇಶನ್ ಆಫ್ ಇಂಡಿಯಾದ 150ಕ್ಕೂ ಅಧಿಕ ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಭಾಗಿಯಾಗಿದ್ದಾರೆ.

Three Days National Level Swimming Competition In Mangaluru

ಇಂಡಿಯನ್ ಸ್ವಿಮ್ಮಿಂಗ್ ಫೆಡರೇಶನ್ ವತಿಯಿಂದ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶ, ಅಸ್ಸಾಂ, ಚಂಡೀಗಡ, ದೆಲ್ಲಿ, ಗುಜರಾತ್, ಹರ್ಯಾಣ, ಲಕ್ಷ ದ್ವೀಪ, ಮಣಿಪುರ, ಮೇಘಾಲಯ, ರಾಜಸ್ತಾನ, ಸಿಕ್ಕಿಂ,

ತಮಿಳುನಾಡು, ಉತ್ತರಖಂಡ, ಪಶ್ಚಿಮ ಬಂಗಾಲ, ಒರಿಸ್ಸಾ ರಾಜ್ಯಗಳ ಈಜುಪಟುಗಳು ಆಗಮಿಸಿದ್ದಾರೆ. ಸ್ಪರ್ಧಿಗಳು ಅತ್ಯಂತ ಉತ್ಸಾಹದಿಂದಲೇ ನೂತನ ಈಜುಕೊಳದಲ್ಲಿ ಈಜುಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಹಿರಿಯ ನಾಗರಿಕರೂ ಭಾರೀ ಉತ್ಸಾಹದಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಕಂಡು ಬಂದಿತ್ತು‌.

ಎಮ್ಮೆಕೆರೆಯ ಈ ಅಂತಾರಾಷ್ಟ್ರೀಯ ಒಲಿಂಪಿಕ್ ಗುಣಮಟ್ಟದ ಈಜುಕೊಳ ಸುಮಾರು 2 ಎಕರೆ ಪ್ರದೇಶದಲ್ಲಿ 24.94 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.‌ 50ಮೀಟರ್ ಉದ್ದ, 25ಮೀಟರದ ಅಗಲ ಮತ್ತು 2.2ಮೀಟರ್ ನಿಂದ 1.4ಮೀಟರ್ ವರೆಗಿನ ಆಳ ಹೊಂದಿರುವ ಸ್ಪರ್ಧಾತ್ಮಕ ಸ್ವಿಮ್ಮಿಂಗ್ ಪೂಲ್ ಇದಾಗಿದೆ.

ಸ್ಪರ್ಧೆಯೊಂದಿಗೆ, ಕ್ರೀಡಾಪಟುಗಳ ತರಬೇತಿಗಾಗಿ 25 ಮೀ. ಉದ್ದ, 10 ಅಗಲ ಮತ್ತು 2.2 ಮೀ ಆಳದ ಅಭ್ಯಾಸ ಪೂಲ್ ಅನ್ನು ನಿರ್ಮಿಸಲಾಗಿದೆ. ಅಲ್ಲದೆ, ಈಜುಸ್ಪರ್ಧೆಗೆ ಮಕ್ಕಳನ್ನು ಆರಂಭಿಕ ಹಂತದಲ್ಲೇ ತರಬೇತುಗೊಳಿಸುವ ಉದ್ದೇಶದಿಂದ ಪಕ್ಕದಲ್ಲಿಯೇ 13.8ಮೀ ಉದ್ದ, 10ಮೀ ಅಗಲ ಮತ್ತು 1.2ಮೀ ಆಳದ ಪುಟಾಣಿ ಈಜುಕೊಳ‌ವನ್ನೂ ಸಹ ನಿರ್ಮಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+