Get Updates
Get notified of breaking news, exclusive insights, and must-see stories!

ಅಕ್ಷರ್ ಅಬ್ಬರಕ್ಕೆ ವೆಸ್ಟ್ ಇಂಡೀಸ್ ತತ್ತರ!: ಕ್ವೀನ್ಸ್ ಪಾರ್ಕ್‌ ಓವಲ್‌ನಲ್ಲಿ ದಾಖಲೆ ಬರೆದ ಟೀಂ ಇಂಡಿಯಾ

ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ದಾಖಲೆಯೊಂದನ್ನು ಬರೆದಿದೆ. ಯಾವುದೇ ತಂಡವೊಂದರ ವಿರುದ್ಧ ಸತತ ದ್ವಿಪಕ್ಷೀಯ ಏಕದಿನ ಸರಣಿ ಜಯಗಳಿಸಿದ ದಾಖಲೆಯನ್ನು ಭಾರತ ನಿರ್ಮಿಸಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ಮತ್ತೊಂದು ರೋಚಕ ಅಂತ್ಯಕ್ಕೆ ಸಾಕ್ಷಿಯಾಯಿತು. ಶುಕ್ರವಾರ ನಡೆದ ಮೊದಲ ಪಂದ್ಯವನ್ನು ಭಾರತ ತಂಡ ಮೂರು ರನ್‌ಗಳಿಂದ ಗೆದ್ದುಕೊಂಡಿತ್ತು.

ಭಾರತ ವೆಸ್ಟ್‌ಇಂಡೀಸ್ ವಿರುದ್ಧ ಈವರೆಗೆ ಸತತವಾಗಿ 12 ಏಕದಿನ ಸರಣಿಯನ್ನು ಗೆದ್ದುಕೊಂಡಿದೆ. 2007ರಿಂದ ಇಲ್ಲಿಯವರೆಗೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಒಂದೂ ಸರಣಿಯನ್ನು ಸೋಲನುಭವಿಸಿಲ್ಲ. ಅದರಲ್ಲೂ ಭಾರತ ತಂಡ ಶಿಖರ್ ಧವನ್ ನಾಯಕತ್ವದಲ್ಲಿ, ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಬಲಿಷ್ಠ ವಿಂಡೀಸ್ ತಂಡವನ್ನು ಬಗ್ಗು ಬಡಿಯುವ ಮೂಲಕ ದಾಖಲೆ ಬರೆದಿದೆ.

1996 ರಿಂದ 2021 ರವರೆಗೆ ಜಿಂಬಾಬ್ವೆ ವಿರುದ್ಧ ಸತತ 11 ಸರಣಿಗಳನ್ನು ಗೆದ್ದಿದ್ದ ಪಾಕಿಸ್ತಾನದ ಹೆಸರಿನಲ್ಲಿದ್ದ ದಾಖಲೆಯನ್ನು ಮೀರಿ ಭಾರತ ತನ್ನ ಹೆಸರಿಗೆ ದಾಖಲೆ ಬರೆದುಕೊಂಡಿದೆ.

 ಟೀಂ ಇಂಡಿಯಾ ದಾಖಲೆ ಗೆಲುವು

ಟೀಂ ಇಂಡಿಯಾ ದಾಖಲೆ ಗೆಲುವು

ಭಾರತ ತಂಡವೊಂದರ ವಿರುದ್ಧ ಸತತವಾಗಿ 12 ಸರಣಿಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದೆ. ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ 1996 ರಿಂದ 2021ರ ಅವಧಿಯಲ್ಲಿ 11 ಸರಣಿಯನ್ನು ಗೆದ್ದಿದ್ದು ಈವರೆಗಿನ ದಾಖಲೆಯಾಗಿತ್ತು. ಪಾಕಿಸ್ತಾನ ವೆಸ್ಟ್ ಇಂಡೀಸ್ ವಿರುದ್ಧ 1999 ರಿಂದ 2022ರವರೆಗೆ 10 ಸರಣಿಗೆಳನ್ನು ಗೆದ್ದಿದೆ.

ದಕ್ಷಿಣ ಆಫ್ರಿಕಾ ಜಿಂಬಾಬ್ವೆ ವಿರುದ್ಧ 1995 ರಿಂದ 2018ರ ಅವಧಿಯಲ್ಲಿ 9 ಸರಣಿಗಳನ್ನು ಗೆದ್ದು ನಾಲ್ಕನೇ ಸ್ಥಾನದಲ್ಲಿದ್ದರೆ. 2007ರಿಂದ 2021 ರ ಅವಧಿಯಲ್ಲಿ ಭಾರತ ಶ್ರೀಲಂಕಾ ವಿರುದ್ಧ 9 ಸರಣಿಗಳ ಗೆಲವು ದಾಖಲಸಿದೆ.

 ವೆಸ್ಟ್ ಇಂಡೀಸ್‌ ಉತ್ತಮ ಬ್ಯಾಟಿಂಗ್

ವೆಸ್ಟ್ ಇಂಡೀಸ್‌ ಉತ್ತಮ ಬ್ಯಾಟಿಂಗ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಕೈಲ್ ಮೇಯರ್ಸ್ ಮತ್ತು ಶೈ ಹೋಪ್‌ ಮೊದಲ ವಿಕೆಟ್‌ಗೆ 65 ರನ್ ಜೊತೆಯಾಟ ಆಡಿದರು.

ಕೈಲ್ ಮೇಯರ್ಸ್23 ಎಸೆತಗಳಲ್ಲಿ 39 ರನ್ ಗಳಿಸಿ ಔಟಾದ ಬಳಿಕ ಬ್ಯಾಟಿಂಗ್ ಮುಂದುವರೆಸಿದ ಶೈ ಹೋಪ್ 135 ಎಸೆತಗಳಲ್ಲಿ 115 ರನ್ ಗಳಿಸಿದರು. ನಾಯಕ ನಿಕೋಲಸ್ ಪೂರನ್ 77 ಎಸೆತಗಳಲ್ಲಿ 74 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಅಂತಿಮವಾಗಿ 311 ರನ್‌ ಕಲೆ ಹಾಕಿತು.

 100ನೇ ಪಂದ್ಯದಲ್ಲಿ ಶೈ ಹೋಪ್ ಶತಕ

100ನೇ ಪಂದ್ಯದಲ್ಲಿ ಶೈ ಹೋಪ್ ಶತಕ

100ನೇ ಏಕದಿನ ಪಂದ್ಯವಾಡಿದ ಶೈ ಹೋಪ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. 135 ಎಸೆತಗಳಲ್ಲಿ 8 ಬೌಂಡರಿ 3 ಸಿಕ್ಸರ್ ಸಹಿತ 115 ರನ್ ಗಳಿಸಿ ಔಟಾದರು. ಈ ಮೂಲಕ 100ನೇ ಪಂದ್ಯದಲ್ಲಿ ಶತಕ ಸಿಡಿಸಿದ 10ನೇ ಆಟಗಾರ ಎನಿಸಿಕೊಂಡರು.

ಈ ಮೊದಲು ಗಾರ್ಡನ್ ಗ್ರೀನಿಡ್ಜ್ ಅಜೇಯ 102, ಕ್ರಿಸ್ ಕೇರ್ನ್ಸ್‌ 115, ಮೊಹಮ್ಮದ್ ಯೂಸುಫ್ 129, ಕುಮಾರ್ ಸಂಗಕ್ಕಾರ 101, ಕ್ರಿಸ್‌ ಗೇಲ್ ಅಜೇಯ 132, ಮಾರ್ಕಸ್‌ ಟ್ರೆಸ್ಕೋಥಿಕ್ 100, ರಾಂ ನರೇಶ್ ಸರವಣ್ ಅಜೇಯ 115, ಡೇವಿಡ್ ವಾರ್ನರ್ 124, ಶಿಖರ್ ಧವನ್ 109 ತಮ್ಮ ನೂರನೇ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

 ಅಕ್ಷರ್ ಅಬ್ಬರ ವೆಸ್ಟ್ ಇಂಡೀಸ್ ತತ್ತರ

ಅಕ್ಷರ್ ಅಬ್ಬರ ವೆಸ್ಟ್ ಇಂಡೀಸ್ ತತ್ತರ

ಗೆಲುವಿಗಾಗಿ 312 ರನ್ ಬೆನ್ನತ್ತಿದ ಭಾರತ ನಿಧಾನಗತಿಯ ಆರಂಭ ಪಡೆಯಿತು. 17.2 ಓವರ್‌ಗಳಲ್ಲಿ ಕೇವಲ 79 ರನ್‌ಗಳಿಗೆ ಶಿಖರ್ ಧವನ್, ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಬಂದ ಸಂಜು ಸ್ಯಾಮ್ಸನ್‌ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟ ಆಡಿದರು.

ಸಂಜು ಸ್ಯಾಮ್ಸನ್ ರನೌಟ್ ಆದ ನಂತರ ಬಂದ ದೀಪಕ್ ಹೂಡಾ 33 ರನ್ ಗಳಿಸಿ ಔಟಾದರು, ಶ್ರೇಯಸ್ ಅಯ್ಯರ್ ಕೂಡ 63 ರನ್ ಗಳಿಸಿ ನಿರ್ಗಮಿಸಿದರು. ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಭಾರತವನ್ನು ಏಕಾಂಗಿ ಹೋರಾಟದ ಮೂಲಕ ಗೆಲ್ಲಿಸಿದ್ದು ಅಕ್ಷರ್ ಪಟೇಲ್. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದಿ ಅಕ್ಷರ್ ಪಟೇಲ್ ಕೇವಲ 35 ಬಾಲ್‌ಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಿತ 64 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+