Team India Celebration: ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಡ್ಯಾನ್ಸ್ ಭಾರೀ ವೈರಲ್
Team India Celebration: ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಟೀಂ ಇಂಡಿಯಾ ತಂಡ ನಿನ್ನೆ (ಜುಲೈ 04)ಯಷ್ಟೇ ಸ್ವದೇಶಕ್ಕೆ ಆಗಮಿಸಿದ್ದು, ಈ ವೇಳೆ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಇನ್ನು ಪ್ರಧಾನಿ ಮೋದಿ ಭೇಟಿ ಬಳಿಕ ಮುಂಬೈನಲ್ಲಿ ವಿಜಯೋತ್ಸವದ ರೋಡ್ ಶೋ ಮಾಡಲಾಯಿತು. ಅಲ್ಲದೆ, ವಾಂಖೆಡೆಯಲ್ಲಿ ಇಡೀ ಟೀಂ ಇಂಡಿಯಾ ಆಟಗಾರರೆಲ್ಲ ಸೇರಿ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಟಿ-20 ವಿಶ್ವಕಪ್ ಟ್ರೋಪಿ ಗೆದ್ದ ಭಾರತ ತಂಡಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭರ್ಜರಿ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ತಂಡದ ಆಟಗಾರರೆಲ್ಲಾ ಸೇರಿ ಟ್ರೋಪಿ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ.

17 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡು ನಿನ್ನೆಯಷ್ಟೇ ಸ್ವದೇಶಕ್ಕೆ ವಾಪಾಸ್ಸಾಗಿದ್ದು, ಈ ವೇಳೆ ಟೀಂ ಇಂಡಿಯಾ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು. ಮೊದಲಿಗೆ ಎಲ್ಲಾ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.
ಇನ್ನು 2023ರ ನವೆಂಬರ್ 19ರಂದು ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತು. ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದ ಭಾರತ ತಂಡ ಕೊನೆಗೆ ಫೈನಲ್‌ನಲ್ಲಿ ಮುಗ್ಗರಿಸಿದ್ದು, ಈ ವೇಳೆಯೂ ಪ್ರಧಾನಿ ಮೋದಿಯವರೇ ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಂಗೆ ಭೇಟಿ ನೀಡಿ ಧೈರ್ಯದ ಮಾತುಗಳನ್ನು ಹೇಳಿದ್ದರು. ಅಲ್ಲದೆ ಕುಗ್ಗಿದ್ದ ಆಟಗಾರರಿಗೆ ಬೆನ್ನುತಟ್ಟಿ ಬೆಂಬಲ ಸೂಚಿಸಿದ್ದರು.
ಇನ್ನು ಈ ಬಾರಿ ಟ್ರೋಪಿ ಗೆದ್ದು ಬರುತ್ತಿದ್ದಂತೆಯೂ ಭಾರತ ತಂಡದ ಆಟಗಾರರನ್ನು ಭೇಟಿಯಾಗಿ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸಿದರು. ಬಳಿಕ ಮುಂಬೈನಲ್ಲಿ ವಿಜಯೋತ್ಸವದ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಈ ವೇಳೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಎಲ್ಲಾ ಆಟಗಾರರು ಸಂಭ್ರಮಾಚರಣೆಯಲ್ಲಿ ಮಿಂದೆದ್ದಿದ್ದರು.
ತಮ್ಮ ನೆಚ್ಚಿನ ಆಟಗಾರರನ್ನು ಸ್ವಾಗತಿಸಲು ವಾಂಖೆಡೆ ಕ್ರೀಡಾಂಗಣದ ಬಳಿ ಅಭಿಮಾನಿಗಳ ದಂಡೇ ನೆರೆದಿತ್ತು. ಅಲ್ಲದೆ, ವಿಯಯೋತ್ಸವ ಮೆರವಣಿಗೆ ಸಾಗುವ ಮುಂಬೈನ ಮರೀನ್ ಡ್ರೈವ್‌ನಲ್ಲಿ ಲಕ್ಷಾಂತರ ಜನ ಕ್ರಿಕೆಟ್ ಅಭಿಮಾನಿಗಳು ನೆರೆದು ತನ್ನ ನೆಚ್ಚಿನ ಆಟಗಾರರ ಸಂಭ್ರಮಾರಣೆಯನ್ನು ಕಣ್ತುಂಬಿಕೊಂಡರು.
ತೆರೆದ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿ, ನಾರಿಮನ್ ಪಾಯಿಂಟ್‌ನಿಂದ ಪ್ರಾರಂಭವಾಗಿದ್ದ ಈ ವಿಜಯೋತ್ಸವ ಮೆರವಣಿಗೆ ಮರೀನ್ ಡ್ರೈವ್ ಮೂಲಕ ವಾಂಖೆಡೆ ಕ್ರೀಡಾಂಗಣಕ್ಕೆ ತಲುಪಿತು. ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರಿಗೆ ಬಿಸಿಸಿಐ ಅಭಿನಂದನೆ ಸಲ್ಲಿಸಿದ್ದು, ಈ ವೇಳೆ ನಗದು ಬಹುಮಾನವಾಗಿ 150 ಕೋಟಿ ರೂಪಾಯಿ ಟೀಂ ಇಂಡಿಯಾಗೆ ನೀಡಲಾಯಿತು.












Click it and Unblock the Notifications