Suryakumar Yadav: ಬೌಲಿಂಗ್‌ನಲ್ಲಿ ಮಿಂಚಿದ ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಬ್ಯಾಟಿಂಗ್ ಪರಾಕ್ರಮ ಜಗತ್ತಿಗೆ ಗೊತ್ತಿದೆ. ಬ್ಯಾಟಿಂಗ್ ಮೂಲಕ ಇವರಿಬ್ಬರೂ ಹಲವು ಸೋಲುವ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಇಬರಿಬ್ಬರು ಬೌಲಿಂಗ್ ಮಾಡಬಲ್ಲರು ಎನ್ನುವುದು ಎನ್ನುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರಲಿಲ್ಲ. ಬರಿ ಬೌಲಿಂಗ್ ಮಾಡುವುದಷ್ಟೇ ಅಲ್ಲ ಸೋಲುವ ಪಂದ್ಯವನ್ನು ಟೈ ಮಾಡುವ ಮೂಲಕ ಕ್ರಿಕೆಟ್ ಲೋಕವನ್ನೇ ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಸೋಲುವಂತಿದ್ದ ಪಂದ್ಯವನ್ನು ಇವರಿಬ್ಬರು ಮ್ಯಾಜಿಕ್ ಬೌಲಿಂಗ್ ಮೂಲಕ ಟೈ ಆಗುವಂತೆ ಮಾಡಿದ್ದಾರೆ. 138 ರನ್‌ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಕೊನೆಯ ಎರಡು ಓವರ್ ಗಳಲ್ಲಿ ಕೇವಲ 9 ರನ್ ಬೇಕಿತ್ತು.

19ನೇ ಓವರ್ ಬೌಲಿಂಗ್ ಮಾಡಲು ರಿಂಕು ಸಿಂಗ್ ಬಂದಾಗ ಎಲ್ಲರೂ ಅಚ್ಚರಿಗೊಂಡರು. ರಿಂಕು ಸಿಂಗ್ ತಮ್ಮ ಓವರ್ ನ ಎರಡನೇ ಎಸೆತದಲ್ಲೇ ವಿಕೆಟ್ ಪಡೆದರು. ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದು ಶ್ರೀಲಂಕಾ ತಂಡಕ್ಕೆ ಶಾಕ್ ಕೊಟ್ಟರು. 19ನೇ ಓವರ್ ನಲ್ಲಿ ಕೇವಲ 3 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.
ಕೊನೆಯ ಓವರ್ ನಲ್ಲಿ ಮಿಂಚಿದ ಸೂರ್ಯ
ಕೊನೆಯ ಓವರ್ ಮಾಡಲು ಮೊಹಮ್ಮದ್ ಸಿರಾಜ್ ಬಂದರು, ಆದರೆ ಮನಸ್ಸು ಬದಲಾಯಿಸಿದ ನಾಯಕ ಸೂರ್ಯಕುಮಾರ್ ಯಾದವ್ ತಾವೇ ಬೌಲಿಂಗ್ ಮಾಡಲು ನಿರ್ಧರಿಸಿದರು. ಬರೀ ಬ್ಯಾಟರ್ ಆಗಿ ನೋಡಿದ್ದ ಅಭಿಮಾನಿಗಳಿಗೆ ಸೂರ್ಯಕುಮಾರ್ ಯಾದವ್ ಇಂತಹ ಸಮಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದಿದ್ದು ಅಚ್ಚರಿ ಉಂಟು ಮಾಡಿತ್ತು. ಆದರೆ ತಮ್ಮ ಓವರ್ ನ ಎರಡನೇ ಎಸೆತದಲ್ಲೇ ಕಮಿಂದು ಮೆಂಡಿಸ್ ಅವರನ್ನು ಔಟ್ ಮಾಡಿದರು. ಮೂರನೇ ಎಸೆತದಲ್ಲಿ ಮಹೀಶ್ ತೀಕ್ಷಣ ಕೂಡ ಔಟಾದರು. ಕೊನೆಯ ಮೂರು ಎಸೆತಗಳಲ್ಲಿ ಶ್ರೀಲಂಕಾ ಗೆಲುವಿಗೆ ಆರು ರನ್ ಬೇಕಿತ್ತು, ಆದರೆ ಕೇವಲ ಐದು ರನ್ ಗಳಿಸಿದ ಶ್ರೀಲಂಕಾ ಪಂದ್ಯವನ್ನು ಟೈ ಮಾಡಿಕೊಂಡಿತು.












Click it and Unblock the Notifications