IPL 2024: ಸಿಎಸ್‌ಕೆ ವಿರುದ್ಧ ಸೋತ ಆರ್‌ಸಿಬಿ ಮೇಲೆ ಕಿಡಿಕಾರಿದ ಸುನಿಲ್ ಗವಾಸ್ಕರ್: ಫಾಫ್ ಪಡೆ ಎಡವಿದ್ದೆಲ್ಲಿ?

ಮೊದಲ್ನೇ ಮಾಚ್ ದೇವ್ರಿಗೆ..! ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಅಪಾರ್ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಸಿಎಸ್‌ಕೆ ವಿರುದ್ಧ ಸೋಲನುಭವಿಸಿದೆ.

ಮೊದಲ ಪಂದ್ಯದಲ್ಲೇ ದೊಡ್ಡ ಆಟಗಾರರು ರನ್ ಗಳಿಸಲು ಪರದಾಡಿದರು. ಹೊಸ ಆಟಗಾರರು ಭರವಸೆ ಮೂಡಿಸಿದರು. ಬೌಲಿಂಗ್‌ನಲ್ಲಿ ಆರ್‌ಸಿಬಿ ನಿರೀಕ್ಷಿತ ಪ್ರದರ್ಶನ ನೀಡದೇ ಇರುವುದು, ಬ್ಯಾಟಿಂಗ್ ಕೂಡ ವಿಫಲವಾಗಿದ್ದು ಸೋಲಿಗೆ ಕಾರಣವಾಯಿತು.

Sunil Gavaskar Slams RCB After Defeat against CSK in IPL 2024

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಸಿಎಸ್‌ಕೆ 18.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 6 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು.

ಸುನಿಲ್ ಗವಾಸ್ಕರ್ ಕಿಡಿ ಕಾರಿದ್ದೇಕೆ?

ಟಾಟಾ ಐಪಿಎಲ್ 2024 ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಭಿನ್ನವಾಗಿ ಏನು ಮಾಡಬಹುದಿತ್ತು ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ವಿವರಿಸಿದ್ದಾರೆ.

ಆರ್‌ಸಿಬಿ ಬೌಲರ್ ಗಳು ಹೆಚ್ಚಾಗಿ ಶಾರ್ಟ್ ಬಾಲ್ ಹಾಕುವ ಯೋಜನೆಯನ್ನು ಸುನಿಲ್ ಗವಾಸ್ಕರ್ ವಿರೋಧಸಿದ್ದಾರೆ. ಶಾರ್ಟ್ ಬಾಲ್ ಅನ್ನು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿ, ಆದರೆ ಅದು ಕೆಲಸ ಮಾಡದಿದ್ದಾಗ, ಬೇರೆ ಏನಾದರೂ ಮಾಡಬೇಕಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಮಯಾಂಕ್ ದಾಗರ್ 2 ಓವರ್ ಗಳಲ್ಲಿ 6 ನೀಡಿದ್ದರೂ ಅವರಿಂದ ಮತ್ತೊಂದು ಓವರ್ ಹಾಕಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಡಗೈ ಬ್ಯಾಟರ್ ಇದ್ದರು ಎನ್ನುವ ಕಾರಣಕ್ಕೆ ಎಡಗೈ ಸ್ಪಿನ್ನರ್ ಹತ್ತಿರ ಬೌಲಿಂಗ್ ಮಾಡಿಸದೇ ಇರುವುದು ತಪ್ಪು, ಒಂದು ಅವಕಾಶವನ್ನು ಪಡೆದುಕೊಳ್ಳಬೇಕು ಎಂದರು.

ಬೌನ್ಸರ್ ನಿಖರವಾಗಿರಬೇಕು ಇಲ್ಲವಾದರೆ ವೈಡ್ ಆಗುತ್ತದೆ, ಜೊತೆಗೆ ಮತ್ತೊಮ್ಮೆ ಬೌಲ್ ಮಾಡಬೇಕಾಗುತ್ತದೆ. ಆರ್‌ಸಿಬಿ ಬೌಲರ್ ಗಳು ಹೆಚ್ಚಾಗಿ ಬೌನ್ಸರ್ ಹಾಕಲು ಹೋಗಿ ಎಡವಿದರು ಎಂದು ಹೇಳಿದ್ದಾರೆ.

ಬೌಲಿಂಗ್ ಮಾಡಬೇಕಿತ್ತು

ಟಾಸ್ ಗೆದ್ದ ನಂತರ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದು ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಫಾಫ್ ಡುಪ್ಲೆಸಿಸ್ ಜಾಗದಲ್ಲಿ ನಾನಿದ್ದರೆ ಚೇಸಿಂಗ್ ಮಾಡುತ್ತಿದ್ದೆ. ಚೆನ್ನೈ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯಕವಾಗಿರಲಿಲ್ಲ, ಆರ್ ಸಿಬಿ ಚೇಸ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಮೊದಲ ಪಂದ್ಯ ಸೋತಿರುವ ಆರ್‌ಸಿಬಿ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಮಾರ್ಚ್ 25ರಂದು ಸಂಜೆ 7.30ಕ್ಕೆ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+