ಶ್ರೀಲಂಕಾದ ಕ್ರಿಕೆಟ್ ದಿಗ್ಗಜನ ಕಿರಿ ಸೋದರ ಜೈಲು ಪಾಲು

ಕೊಲಂಬೋ, ಜೂನ್ 6: ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಅರ್ಜುನ್ ರಣತುಂಗ ಅವರ ಕಿರಿಯ ಸೋದರ ಜೈಲು ಪಾಲಾಗಿದ್ದಾರೆ. 1996 ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕರಾಗಿರುವ ರಣತುಂಗ ಸೋದರ ಪ್ರಸನ್ನರನ್ನು ಸೋಮವಾರದಂದು ಜೈಲಿಗೆ ಕಳಿಸಲಾಗಿದೆ. ಉದ್ಯಮಿಯೊಬ್ಬರಿಗೆ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಪ್ರಸನ್ನ ವಿರುದ್ಧದ ಆರೋಪ ಸಾಬೀತಾಗಿದೆ.

2015ರಲ್ಲಿ ದಾಖಲಾಗಿದ್ದ ಈ ಪ್ರಕರಣ ವಿಚಾರಣೆ ಸುದೀರ್ಘ ಅವಧಿ ನಡೆದಿತ್ತು. ಸೋಮವಾರದಂದು ಪ್ರಸನ್ನ ರಣತುಂಗ ಅಪರಾಧಿ ಎಂದು ಸ್ಥಳೀಯ ನ್ಯಾಯಾಲಯವೊಂದು ತೀರ್ಪು ನೀಡಿದೆ. ಪ್ರಸನ್ನ ರಣತುಂಗ ರಾಜಕಾರಣಿಯಾಗಿದ್ದು, ನಗರಾಭಿವೃದ್ಧಿ ಸಚಿವರಾಗಿದ್ದರು. 55 ವರ್ಷ ವಯಸ್ಸಿನ ಪ್ರಸನ್ನ ವಿರುದ್ಧ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ದೋಷಿ ಎಂದು ಪರಿಗಣಿಸಿ ಎರಡು ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಇದರ ಬೆನ್ನಲ್ಲೇ ರಾಜಕೀಯ ವೃತ್ತಿ ಬದುಕಿನಿಂದ ಐದು ವರ್ಷಗಳ ಹೊರಗುಳಿಯಬೇಕಾಗುತ್ತದೆ.

Sri Lankan Cricket legend Arjuna Ranatungas brother jailed for extortion

ಈ ಪ್ರಕರಣದ ಜೈಲು ಶಿಕ್ಷೆ ಜೊತೆಗೆ 25 ಮಿಲಿಯನ್ ಲಂಕನ್ ರುಪಾಯಿ (USD 69,061) ಹಾಗೂ ಸಂತ್ರಸ್ತ ಉದ್ಯಮಿಗೆ 1 ಮಿಲಿಯನ್ ರುಪಾಯಿ (USD 2,762) ಪರಿಹಾರ ಮೊತ್ತ ನೀಡುವಂತೆ ಕೋರ್ಟ್ ಸೂಚಿಸಿದೆ. ಬೆದರಿಕೆ ಹಾಗೂ ವಸೂಲಿ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ಪ್ರಸನ್ನ ಅವರ ಪತ್ನಿ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದು, ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+