ಬಿಜೆಪಿ ಸಂಸದನಿಂದ ನಮ್ಮ ಮೇಲೆ ಲೈಂಗಿಕ ದೌರ್ಜನ್ಯ: ಕಣ್ಣೀರಿಟ್ಟ ಮಹಿಳಾ ಕುಸ್ತಿಪಟುಗಳು
ನವದೆಹಲಿ, ಜನವರಿ 18: ಭಾರತದ ಜನಪ್ರಿಯ ಮಹಿಳಾ ಕುಸ್ತಿಪಟುಗಳಾದ ವಿನೀಶಾ ಪೋಗಾಟ್ ಅವರು ಬಿಜೆಪಿ ಸಂಸದ ಮತ್ತು ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದು, ತಾವು ಅನೇಕ ವರ್ಷಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವುದಾಗಿ ಆರೋಪಿಸಿದ್ದಾರೆ.
ಭಾರತದ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಸಂಗೀತಾ ಫೋಗಟ್, ಬಜರಂಗ್, ಸೋನಮ್ ಮಲಿಕ್ ಮತ್ತು ಅಂಶು ಅವರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬದಲಾಯಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ವಿನೇಶ್ ಫೋಗಟ್ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಡಬ್ಲ್ಯುಎಫ್‌ಐ ಅಧ್ಯಕ್ಷ ಮತ್ತು ಬಹು ಅವಧಿಯ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಅನೇಕ ವರ್ಷಗಳಿಂದ ತನ್ನನ್ನು ಹೇಗೆ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು ಪ್ರಚೋದಿಸುತ್ತಿದ್ದಾರೆ ಎಂಬುದರ ಕುರಿತು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಫೋಗಟ್ ಅವರು, "ಮಹಿಳಾ ಕುಸ್ತಿಪಟುಗಳಿಗೆ ರಾಷ್ಟ್ರೀಯ ಶಿಬಿರಗಳಲ್ಲಿ ತರಬೇತುದಾರರು ಮತ್ತು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಶರ್ಮಾ ಲೈಂಗಿಕ ಕಿರುಕುಳ ನೀಡಿದ್ದಾರೆ. ರಾಷ್ಟ್ರೀಯ ಶಿಬಿರಗಳಲ್ಲಿ ನೇಮಕಗೊಂಡ ಕೆಲವು ತರಬೇತುದಾರರು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಕುಸ್ತಿ ಪಟು, ಅನೇಕ ಯುವ ಮಹಿಳಾ ಕುಸ್ತಿಪಟುಗಳು ರಾಷ್ಟ್ರೀಯ ಶಿಬಿರಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ನನಗೆ ತಿಳಿದಿರುವ ಕನಿಷ್ಠ 20 ಹುಡುಗಿಯರು ರಾಷ್ಟ್ರೀಯ ಶಿಬಿರದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು. ಡಬ್ಲ್ಯುಎಫ್‌ಐ ಅಧ್ಯಕ್ಷ ಮತ್ತು ಇತರ ಕೋಚ್‌ಗಳಿಂದ ಮಹಿಳಾ ಆಟಗಾರ್ತಿಯರ ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡಲು ನಿರ್ಧರಿಸಿದಾಗ ತನಗೆ ಕೊಲೆ ಬೆದರಿಕೆಗಳನ್ನು ಹಾಕಲಾಯಿತು ಎಂದು ಅವರು ಹೇಳಿದರು.

ಭಾರತೀಯ ಜನತಾ ಪಕ್ಷದ ಸಂಸದ
ಇದುವರೆಗೆ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಡಬ್ಲ್ಯುಎಫ್‌ಐ ಮುಖ್ಯಸ್ಥರಲ್ಲದೆ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ (ಎಂಪಿ) ಕೂಡ ಆಗಿದ್ದಾರೆ.

ಡಬ್ಲ್ಯುಎಫ್‌ಐ ವಿರುದ್ಧದ ಹೋರಾಟ
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಕೂಡ ಪ್ರತಿಭಟನೆಯಲ್ಲಿ ನಮ್ಮ ಹೋರಾಟವು ಸರ್ಕಾರ ಅಥವಾ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ವಿರುದ್ಧ ಅಲ್ಲ. ಇದು ಡಬ್ಲ್ಯುಎಫ್‌ಐ ವಿರುದ್ಧವಾಗಿದೆ. ನಾವು ದಿನದ ನಂತರ ವಿವರಗಳನ್ನು ಹಂಚಿಕೊಳ್ಳುತ್ತೇವೆ. ಇದು ಸಮಸ್ಯೆಯ ಕೊನೆಯವರೆಗೂ ಹೋರಾಟವಾಗಿದೆ ಎಂದು ತಿಳಿಸಿದ್ದಾರೆ.

ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಆರೋಪ
ಈ ಬಗ್ಗೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರು, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಇತರರು ಸೇರಿದಂತೆ ಕುಸ್ತಿಪಟುಗಳು ಏನು ವಿರೋಧಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಕುಸ್ತಿಪಟುಗಳು ಫೆಡರೇಶನ್‌ಗೆ ಬಂದ ನಂತರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸಮಸ್ಯೆಯ ಬಗ್ಗೆ ಕೇಳಲು ನಾನು ಬಂದಿದ್ದೇನೆ
ಈ ಆರೋಪಗಳು ಏನು ಎಂದು ತಿಳಿದಿಲ್ಲ. ಆದರೆ, ಕೆಲವು ಕುಸ್ತಿಪಟುಗಳು ಪ್ರತಿಭಟನೆಗೆ ಕುಳಿತಿದ್ದಾರೆ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷರಿಗೆ ಬರೆದ ಪತ್ರದಿಂದ ನಮಗೆ ತಿಳಿದು ಬಂದಿದೆ. ಅವರ ಸಮಸ್ಯೆಯ ಬಗ್ಗೆ ಕೇಳಲು ನಾನು ಬಂದಿದ್ದೇನೆ. ಕುಸ್ತಿಪಟುಗಳು ಔಪಚಾರಿಕವಾಗಿ ಫೆಡರೇಶನ್ ಅನ್ನು ಸಂಪರ್ಕಿಸಿದ ನಂತರ, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಆದಾಗ್ಯೂ, ಪ್ರತಿಭಟನಾ ನಿರತ ಕುಸ್ತಿಪಟುಗಳು ಇನ್ನೂ ತಮ್ಮ ಸಮಸ್ಯೆಗಳ ಬಗ್ಗೆ ಫೆಡರೇಶನ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಮ್ಮ ಆರೋಪ ಏನು ಎಂದು ಅವರು ಇನ್ನೂ ನನಗೆ ಹೇಳಿಲ್ಲ. ನನ್ನೊಂದಿಗೆ ಅಥವಾ ಫೆಡರೇಶನ್‌ನೊಂದಿಗೆ ಇನ್ನೂ ಯಾವುದೇ ಸಮಸ್ಯೆಯನ್ನು ಎತ್ತಲಾಗಿಲ್ಲ ಎಂದು ಅವರು ಹೇಳಿದರು.












Click it and Unblock the Notifications