• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ಗೆಲುವು: ಪಾಕ್‌ನಲ್ಲಿ ಸಂಭ್ರಮ ಏಕೆ?

|
Google Oneindia Kannada News

ಕತಾರ್, ನವೆಂಬರ್ 23: ಫಿಫಾ ವಿಶ್ವಕಪ್‌ನಲ್ಲಿ ಸೌದಿ ಅರೇಬಿಯಾ ತಂಡವು ಬಲಿಷ್ಠ ತಂಡ ಅರ್ಜೆಂಟೀನಾ ಫುಟ್ಬಾಲ್‌ ತಂಡವನ್ನು ಸೋಲಿಸಿದೆ. ಈ ಅಪರೂಪದ ಗೆಲುವು ಸಾಧಿಸಿರುವ ಕ್ಷಣಕ್ಕೆ ಸೌದಿಯಲ್ಲಿ ಸಂಭ್ರಮವನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂಭ್ರಮವನ್ನು ಆಚರಿಸಲು ಸೌದಿ ಸರ್ಕಾರವು ಒಂದು ದಿನದ ಅಧಿಕೃತ ರಜೆ ಘೋಷಣೆ ಮಾಡಲಾಗಿದೆ. ಇನ್ನು ಸೌದಿ ಅರೇಬಿಯಾ ಗೆದ್ದಿದಕ್ಕೆ ಪಾಕಿಸ್ತಾನದಲ್ಲೂ ಸಂಭ್ರಮಿಸಲಾಗಿದೆ.

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರೇ ಟ್ವೀಟ್ ಮಾಡುವ ಮೂಲಕ ಸೌದಿ ಅರೇಬಿಯಾ ತಂಡವನ್ನು ಅಭಿನಂದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯಿಂದ 71,000 ಜನರಿಗೆ ನೇಮಕಾತಿ ಪತ್ರ ವಿತರಣೆ ಪ್ರಧಾನಿ ನರೇಂದ್ರ ಮೋದಿಯಿಂದ 71,000 ಜನರಿಗೆ ನೇಮಕಾತಿ ಪತ್ರ ವಿತರಣೆ

ಸೌದಿ ಅರೇಬಿಯಾ ಮುಸ್ಲಿಂಮರ ಬಹುಸಂಖ್ಯಾತ ರಾಷ್ಟ್ರವಾಗಿದೆ ಹಾಗಾಗಿ ಪಾಕ್‌ನಲ್ಲಿ ಸಂಭ್ರಮ ಆಚರಿಸಲಾಗುತ್ತಿದೆ. ಇನ್ನು ಪಾಕಿಸ್ತಾನಕ್ಕೆ ಗರಿಷ್ಠ ಸಾಲ ಮತ್ತು ಅಗತ್ಯದ ಸಮಯದಲ್ಲಿ ಹಣಕಾಸಿನ ನೆರವು ನೀಡುವ ದೇಶಗಳಲ್ಲಿ ಸೌದಿ ಅರೇಬಿಯಾ ಒಂದಾಗಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ.

ವಿಶೇಷ ಸಂದೇಶ ರವಾನಿಸಿದ ಪಾಕ್‌ ಪ್ರಧಾನಿ

ಫಿಫಾ ವಿಶ್ವಕಪ್ 2022ರಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ಜಯಗಳಿಸಿರುವ ಈ ಸಂಭ್ರಮಕ್ಕೆ ಪಾಕಿಸ್ತಾನದ ಪ್ರಧಾನಿ ಟ್ವೀಟ್ ಮಾಡುವ ಮೂಲಕ ಇಡೀ ತಂಡ ಮತ್ತು ಸೌದಿ ಅರೇಬಿಯಾ ನಾಗರಿಕರಿಗೆ ಅಭಿನಂದಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಶೆಹಬಾಜ್‌ ಷರೀಫ್‌, 'ಎಂತಹ ಅದ್ಭುತ ಫುಟ್ಬಾಲ್ ಆಟವಿದು. ಫಿಫಾ ವಿಶ್ವಕಪ್‌ನಲ್ಲಿ ಸೌದಿ ಅರೇಬಿಯಾ ತಂಡ ಅರ್ಜೆಂಟೀನಾವನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸೌದಿ ಅರೇಬಿಯಾದ ಸಹೋದರ, ಸಹೋದರಿಯರೊಂದಿಗೆ ನಾವು ಕೂಡ ಈ ವಿಜಯದ ಸಂಭ್ರಮವನ್ನು ಆಚರಿಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

Saudi Arabia beat Argentina 2-1 in one of the biggest upsets in FIFA World Cup history

ಸೌದಿ ಅರೇಬಿಯಾದಲ್ಲಿ ಇಂದು ದಿನಪೂರ್ತಿ ಸಂಭ್ರಮಾಚರಣೆ

ಅರ್ಜೆಂಟೀನಾವನ್ನು ಸೋಲಿಸಿದ ನಂತರ ಪಾಕಿಸ್ತಾನದಲ್ಲಿ ಭಾರೀ ಸಂಭ್ರಮಾಚರಣೆ ನಡೆಯುತ್ತಿದೆ. ಇಡೀ ಸೌದಿ ಅರೇಬಿಯಾದಲ್ಲಿ ಒಂದು ದಿನದ ರಜೆ ಘೋಷಿಸಲಾಗಿದೆ. ಶಾಲಾ-ಕಾಲೇಜುಗಳು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಕಚೇರಿಗಳಿಗೂ ಬುಧವಾರ ರಜೆ ನೀಡಲಾಗಿದೆ. ಸೌದಿ ಅರೇಬಿಯಾದಲ್ಲಿ ಅದ್ಧೂರಿಯಾಗಿ ಸಂಭ್ರಮಾಚರಣೆ ನಡೆಯುತ್ತಿದ್ದು, ಈ ಖುಷಿಯನ್ನು ಇಡೀ ದೇಶವೇ ವಿಶ್ವಕಪ್ ಗೆದ್ದಂತೆ ಸಂಭ್ರಮಿಸುತ್ತಿದೆ. ಅರ್ಜೆಂಟೀನಾದಂತಹ ಬಲಿಷ್ಠ ತಂಡವನ್ನು 2-1 ಅಂತರದಿಂದ ಸೌದಿ ಅರೇಬಿಯಾ ಸೋಲಿಸಿದೆ.

English summary
Pakistan PM Shehbaz Sharif congratulates Saudi Arabia's football team on the historic victory against Argentina,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X