ಮೇಜರ್ ಲೀಗ್ ಕ್ರಿಕೆಟ್: ರಚಿನ್ ರವೀಂದ್ರ ಓವರ್‌ನಲ್ಲಿ 4 ಸಿಕ್ಸರ್ ಬಾರಿಸಿದ ಸಂಜಯ್: ಬೆಂಗಳೂರಿಗೆ ಇದೆ ವಿಶೇಷ ನಂಟು
ಐಪಿಎಲ್ ಟೂರ್ನಿಯು ಮುಗಿದಿದೆ. ವಿಶ್ವ ದೆಲ್ಲೆಡೆ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭವಾಗಿದೆ. ಈ ಮಧ್ಯದಲ್ಲಿ ಮೇಜರ್ ಲೀಗ್ ಕ್ರಿಕೆಟ್ ಸದ್ದು ಮಾಡುತ್ತಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಯಾಮ್ ಫ್ರಾನ್ಸಿಸ್ಕೋ ಯನಿಕಾರ್ನ್ ತಂಡ 123 ರನ್‌ಗಳಿಂದ ವಾಷಿಂಗ್ಟನ್ ಫ್ರೀಡಂ ತಂಡವನ್ನು ಮಣಿಸಿತು. ಈ ಪಂದ್ಯದಲ್ಲಿ ಎಲ್ಲರ ಚಿತ್ತವನ್ನು ಸ್ಯಾಮ್ ಫ್ರಾನ್ಸಿಸ್ಕೋ ತಂಡದ ಸಂಜಯ್ ಕೃಷ್ಣಮೂರ್ತಿ ಕದಿದ್ದಾರೆ.
ಮೇಜರ್ ಲೀಗ್‌ನ ಮೊದಲ ಪಂದ್ಯದಲ್ಲಿ ಸ್ಯಾಮ್ ಫ್ರಾನ್ಸಿಸ್ಕೋ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಸ್ಯಾಮ್ ಫ್ರಾನ್ಸಿಸ್ಕೋ ತಂಡದ ಆರಂಭಿಕ ಆಟಗಾರ ಫಿನ್ ಅಲೇನ್ ಸುಂಟರ ಗಾಳಿಯ ರೀತಿ ಇನಿಂಗ್ಸ್ ಕಟ್ಟಿದರು. ಇವರ ಅಬ್ಬರದ ಆಟದ ನೆರವಿನಿಂದ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 269 ರನ್ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ವಾಷಿಂಗ್ಟನ್ ಫ್ರೀಡಂ ಉತ್ತಮ ಆರಂಭದ ಹೊರತಾಗಿಯೂ ರನ್ ಚೇಸ್ ಮಾಡಲು ಆಗಲಿಲ್ಲ. ಅಂತಿಮವಾಗಿ ವಾಷಿಂಗ್ಟನ್ ಫ್ರೀಡಂ 13.1 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲ್‌ಔಟ್ ಆಯಿತು.

ಸ್ಯಾಮ್ ಫ್ರಾನ್ಸಿಸ್ಕೋ ತಂಡದ ಪರ ಫಿಲ್ ಅಲೆನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಕೇವಲ 51 ಎಸೆತಗಳಲ್ಲಿ 5 ಬೌಂಡರಿ, 19 ಸಿಕ್ಸರ್ ಸಹಾಯದಿಂದ 151 ರನ್ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸಂಜಯ್ ಕೃಷ್ಣ ಮೂರ್ತಿ ಕೇವಲ 20 ಎಸೆತಗಳಲ್ಲಿ 36 ರನ್ ಸಿಡಿಸಿ ಅಬ್ಬರಿಸಿದರು. ಈ ಮೂಲಕ 22 ವರ್ಷದ ಆಲ್‌ರೌಂಡರ್ ಎಲ್ಲರ ಚಿತ್ತ ಕದ್ದರು.
ಒಂದೇ ಓವರ್‌ನಲ್ಲಿ 4 ಸಿಕ್ಸರ್
ಸಂಜಯ್ ಭರವಸೆಯ ಬೌಲರ್‌ಗಳನ್ನು ಮನ ಬಂದಂತೆ ಥಳಿಸಿದರು. ಇವರು ಅಂತಾರಾಷ್ಟ್ರೀ ಕ್ರಿಕೆಟ್‌ನಲ್ಲಿ ಸದ್ದು ಮಾಡುತ್ತಿರು ರಚಿನ್ ರವೀಂದ್ರ ಅವರ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಬಾರಿಸಿ ಸದ್ದು ಮಾಡಿದರು. ವಾಷಿಂಗ್ಟನ್ ಫ್ರೀಡಂ ತಂಡದ ಪರ ರಚಿನ್ ರವೀಂದ್ರ ಇನಿಂಗ್ಸ್‌ನ 8ನೇ ಓವರ್ ಎಸೆದರು. ಈ ವೇಳೆ ಸಂಜಯ್ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ಬಾರಿಸಲಿಲ್ಲ. ಆದರೆ ಮುಂದಿನ ನಾಲ್ಕು ಎಸೆತದಲ್ಲಿ ಸಿಕ್ಸರ್ ಬಾರಿಸಿದ ಆರ್ಭಟಿಸಿದರು.
ಬೆಂಗಳೂರಿಗೆ ಇರುವ ನಂಟೇನು?
ಸಂಜಯ್ ಕೃಷ್ಣಮೂರ್ತಿ ಅವರಿಗೂ ಭಾರತಕ್ಕೂ ವಿಶೇಷ ಸಂಬಂಧ ಇದೆ. ಬರೀ ಭಾರತ ಅಲ್ಲ ನಮ್ಮ ಬೆಂಗಳೂರಿಗೆ ಇವರಿಗೆ ವಿಶೇಷ ನಂಟಿದೆ. ಇವರು 2011ರಲ್ಲಿ ಅಮೆರಿಕದಲ್ಲಿ ಜನಿಸಿದರು. ಬಳಿಕ ಇವರ ಪೋಷಕರು ಬೆಂಗಳೂರಿಗೆ ಶಿಫ್ಟ್ ಆದರು. ಇವರು ಇಲ್ಲಿಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದರು. ಅಲ್ಲದೆ ಇವರು 16 ವರ್ಷದೊಳಗಿನ ವಿಭಾಗದಲ್ಲಿ ಬೆಂಗಳೂರು ಪರ ಆಡಿದ್ದಾರೆ. ಇವರಿಗೆ ಭಾರತದ ಪೌರತ್ವ ಸಿಗದೇ ಇದ್ದಾಗ, ಇವರು ಅಮೆರಿಕನ್ ಪ್ರಜೇಯಾಗಿಯೇ ಉಳಿದರು. ಇದರ ಬಳಿಕ ಇವರು ಅಮೆರಿಕಾದಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. ಇವರು ಯುಎಸ್‌ಎ ಪರ 14 ಏಕದಿನ, 9 ಟಿ20 ಪಂದ್ಯಗಳನ್ನು ಆಡಿದ್ದಾರೆ.












Click it and Unblock the Notifications