Sania Mirza-Mohammed Shami: ಮೊಹಮ್ಮದ್ ಶಮಿ ಜೊತೆ ಮದುವೆಯಾಗ್ತಾರಾ?; ಕೊನೆಗೂ ಮೌನ ಮುರಿದ ಸಾನಿಯಾ ಮಿರ್ಜಾ
ಕಳೆದ ವರ್ಷ ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತನ್ನ ಪತಿ ಶೋಯೆಬ್ ಮಲಿಕ್‌ನಿಂದ ಬೇರ್ಪಟ್ಟಿದ್ದಾರೆ. ಇದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು.
ಟೀಂ ಇಂಡಿಯಾದ ದಿಗ್ಗಜ ವೇಗದ ಬೌಲರ್ ಮೊಹಮ್ಮದ್ ಶಮಿ ಹಾಗೂ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಂದಿನಿಂದಲೂ ಸಕತ್ ಸುದ್ದಿಯಲ್ಲಿದ್ದಾರೆ. ಸದ್ಯದಲ್ಲೇ ಈ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಾನಿಯಾ ಮಿರ್ಜಾ ಕೊನೆಗೂ ಉತ್ತರ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೌನ ಮುರಿದಿದ್ದಾರೆ.

ಸಾನಿಯಾ ಮಿರ್ಜಾ- ಮೊಹಮ್ಮದ್ ಶಮಿ ಮದುವೆ?
ಈಗ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಮೊಹಮ್ಮದ್ ಶಮಿ ಮದುವೆ ಬಗ್ಗೆ ಎಲ್ಲಿಯೂ ಅಧಿಕೃಥವಾಗಿ ವರದಿಯಾಗಿಲ್ಲ. ಮೊಹಮ್ಮದ್ ಶಮಿ ಈ ಬಗ್ಗೆ ಕಾಮೆಂಟ್ ಕೂಡ ಮಾಡಿಲ್ಲ. ಆದರೆ, ಸಾನಿಯಾ ಮಿರ್ಜಾ ಅವರ ತಂದೆ ಇತ್ತೀಚೆಗೆ ವದಂತಿಗಳ ಬಗ್ಗೆ ಮಾತನಾಡಿದ್ದರು. ಇದೆಲ್ಲದರ ನಡುವೆ ಸಾನಿಯಾ ಮಿರ್ಜಾ ವಿಶೇಷ ಸಂದೇಶವನ್ನು ಪೋಸ್ಟ್ ಮಾಡಿದ್ದು, ಜನರು ತಾಳ್ಮೆಯಿಂದಿರಿ ಎಂದು ಸಲಹೆ ನೀಡಿದ್ದಾರೆ.
ಸಾನಿಯಾ ಮಿರ್ಜಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಸ್ಟೋರಿ ಹಂಚಿಕೊಂಡಿದ್ದಾರೆ, "The answer is sabr, it's always sabr" ಎಂದಿದ್ದಾರೆ. ಅಂದರೆ ಇದಕ್ಕೆ ಉತ್ತರ ತಾಳ್ಮೆಯಿಂದಿರಿ... ಯಾವಾಗಲೂ ತಾಳ್ಮೆಯಿಂದಿರಿ ಎಂದು ಅರ್ಥ. ಎಲ್ಲಾ ವದಂತಿಗಳಿಗೂ ಸ್ಪಷ್ಟತೆ ಸಿಗಲಿದೆ ತಾಳ್ಮೆಯಿಂದಿರಿ ಎಂದು ಹೇಳಿದ್ದಾರೆ.

ಸಾನಿಯಾ ಮಿರ್ಜಾ ಮದುವೆಯ ವದಂತಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೋ ಅಥವಾ ವದಂತಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ಜನರನ್ನು ಒತ್ತಾಯಿಸುತ್ತಿದ್ದಾರೋ ಎಂದು ಜನ ತಲೆ ಕೆಡಿಸಿಕೊಂಡಿದ್ದಾರೆ. ಅವರು ಮಾತ್ರ ಯಾವುದೇ ಸ್ಪಷ್ಟತೆ ನೀಡಿಲ್ಲ. ಅವರ ಉತ್ತರ ಅವರಿಗೆ ಮಾತ್ರ ಖಚಿತವಾಗಿ ತಿಳಿದಿದೆ.
ಹಜ್ ಯಾತ್ರೆ ಮಾಡಿದ್ದ ಸಾನಿಯಾ ಮಿರ್ಜಾ
ನ್ನು ಕೊನೆಯ ಬಾರಿಗೆ ಪ್ರತಿಷ್ಠಿತ 2024 ರ ಫ್ರೆಂಚ್ ಓಪನ್‌ನಲ್ಲಿ ಕಾಣಿಸಿಕೊಂಡಿದ್ದ ಸಾನಿಯಾ ಮಿರ್ಜಾ, ಪವಿತ್ರ ಹಜ್ ಯಾತ್ರೆಯನ್ನು ಕೈಗೊಂಡಿದ್ದರು. ಇದು ಶೋಯೆಬ್ ಮಲಿಕ್ ಅವರಿಂದ ವಿಚ್ಛೆದನ ಪಡೆದ ನಂತರ ಮಾಡಿದ ಪ್ರಮುಖ ಪ್ರವಾಸ. ತಮ್ಮ ಮನಸ್ಸನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಯತ್ನ ಇದು ಎನ್ನಲಾಗಿದೆ.
ಇದೀಗ ಭಾರತದ ಅಪ್ರತಿಮ ಮಹಿಳಾ ಟೆನಿಸ್ ಆಟಗಾರ್ತಿ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆಗಿನ ವಿವಾಹದ ವದಂತಿಗಳ ಹಿನ್ನೆಲೆ ಮತ್ತೆ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ, ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಈ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದರು.












Click it and Unblock the Notifications