Samit Dravid: ಭಾರತ ತಂಡಕ್ಕೆ ಎಂಟ್ರಿ ಕೊಟ್ಟ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್
ಭಾರತ ತಂಡದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಇದೀಗ ಭಾರತ ತಂಡಕ್ಕೆ ಆಡಲು ಸಜ್ಜಾಗಿದ್ದಾರೆ. ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ಮಿಂಚಿದ ಸಮಿತ್, ಇದೀಗ ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಏಕದಿನ ಮತ್ತು ನಾಲ್ಕುದಿನಗಳ ಟೆಸ್ಟ್ ಪಂದ್ಯಕ್ಕೆ ಅವರು ಆಯ್ಕೆಯಾಗಿದ್ದಾರೆ. ಭಾರತ ಅಂಡರ್ 19 ತಂಡವು ಆಸ್ಟ್ರೇಲಿಯಾ ವಿರುದ್ಧ 50 ಓವರ್‌ಗಳ ಮೂರು ಪಂದ್ಯಗಳನ್ನು ಮತ್ತು ಎರಡು ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಪುದುಚೆರಿ ಮತ್ತು ಚೆನ್ನೈನಲ್ಲಿ ಟೆಸ್ಟ್ ಪಂದ್ಯಗಳು ನಡೆಯಲಿದೆ. ಏಕದಿನ ತಂಡಕ್ಕೆ ಮೊಹಮ್ಮದ್ ಅಮಾನ್ ನಾಯಕತ್ವ ವಹಿಸಿಕೊಂಡಿದ್ದು, ನಾಲ್ಕು ದಿನಗಳ ಟೆಸ್ಟ್ ತಂಡಕ್ಕೆ ಸೋಹಮ್ ಪಟವರ್ಧನ್ ನಾಯಕರಾಗಿದ್ದಾರೆ. ಏಕದಿನ ಸರಣಿಯ ಮೂರು ಪಂದ್ಯಗಳು ಸೆಪ್ಟೆಂಬರ್ 21, 23 ಮತ್ತು 26 ರಂದು ನಡೆಯಲಿದ್ದು, ಎಲ್ಲಾ ಪಂದ್ಯಗಳು ಪುದುಚೆರಿಯಲ್ಲಿ ನಡೆಯಲಿವೆ.

ನಾಲ್ಕು ದಿನಗಳ ಪಂದ್ಯಗಳು ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 7 ರಂದು ಪ್ರಾರಂಭವಾಗಲಿವೆ. ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿವೆ. ವೇಗದ ಬೌಲಿಂಗ್ ಆಲ್ ರೌಂಡರ್ ಸಮಿತ್ ದ್ರಾವಿಡ್ ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ಪರ ಆಡುತ್ತಿದ್ದಾರೆ.
ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ಸಮಿತ್ ದ್ರಾವಿಡ್ ಅವರಿಂದ ಉತ್ತಮ ಪ್ರದರ್ಶನ ಏನೂ ಬಂದಿಲ್ಲ. ಏಳು ಇನ್ನಿಂಗ್ಸ್‌ಗಳಲ್ಲಿ ಕೇವಲ 82 ರನ್ ಗಳಿಸಿದ್ದಾರೆ. 33 ರನ್ ಅವರು ಗಳಿಸಿದ ಅತ್ಯಧಿಕ ದೊಡ್ಡ ಸ್ಕೋರ್ ಆಗಿದೆ. ಬೌಲರ್ ಆದರೂ ಅವರಿಗೆ ಮಹಾರಾಜ ಟ್ರೋಫಿಯಲ್ಲಿ ಇನ್ನೂ ಬೌಲಿಂಗ್ ಮಾಡಲು ಅವಕಾಶ ಸಿಕ್ಕಿಲ್ಲ.
ಕೂಚ್ ಬೆಹಾರ್ ಪಂದ್ಯಾವಳಿಯಲ್ಲಿ ಮಿಂಚು
2024ರ ಆರಂಭದಲ್ಲಿ ಸಮಿತ್ ದ್ರಾವಿಡ್ ಅವರು ಕೂಚ್ ಬೆಹಾರ್ ಟ್ರೋಫಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಕರ್ನಾಟಕ ಮೊದಲ ಬಾರಿಗೆ ಕೂಚ್ ಬೆಹಾರ್ ಪ್ರಶಸ್ತಿ ಗೆದ್ದುಕೊಂಡಿತ್ತು. 18 ವರ್ಷದ ಅವರು ಎಂಟು ಪಂದ್ಯಗಳಲ್ಲಿ 362 ರನ್ ಗಳಿಸಿದ್ದರು. ಜಮ್ಮು ಮತ್ತು ಕಾಶ್ಮೀರ ವಿರುದ್ಧ 98 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದರು. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದ ಬೌಲಿಂಗ್‌ನಲ್ಲಿ ಕೂಡ ಅವರು ಮಿಂಚಿದ್ದು, ಎಂಟು ಪಂದ್ಯಗಳಲ್ಲಿ 16 ವಿಕೆಟ್ ಪಡೆದುಕೊಂಡಿದ್ದರು.
ಏಕದಿನ ಸರಣಿಗೆ ಭಾರತ ಅಂಡರ್ 19 ತಂಡ
ರುದ್ರ ಪಟೇಲ್ (ಉಪನಾಯಕ), ಸಾಹಿಲ್ ಪರಾಖ್, ಕಾರ್ತಿಕೇಯ ಕೆಪಿ, ಮೊಹಮ್ಮದ್ ಅಮಾನ್ (ನಾಯಕ), ಕಿರಣ್ ಚೋರ್ಮಲೆ, ಅಭಿಗ್ಯಾನ್ ಕುಂದು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್ ಪಂಗಾಲಿಯಾ, ಸಮಿತ್ ದ್ರಾವಿಡ್, ಯುಧಾಜಿತ್ ಗುಹಾ, ಸಮರ್ಥ್ ಎನ್, ನಿಖಿಲ್ ಕುಮಾರ್, ಚೇತನ್ ಶರ್ಮಾ, ಹಾರ್ದಿಕ್ ರಾಜ್, ರೋಹಿತ್ ರಾಜಾವತ್, ಮೊಹಮ್ಮದ್ ಇನಾನ್.
ನಾಲ್ಕು ದಿನಗಳ ಸರಣಿಗೆ ಭಾರತ ತಂಡ
ವೈಭವ್ ಸೂರ್ಯವಂಶಿ, ನಿತ್ಯ ಪಾಂಡ್ಯ, ವಿಹಾನ್ ಮಲ್ಹೋತ್ರಾ (ಉಪನಾಯಕ), ಸೋಹಂ ಪಟವರ್ಧನ್ (ನಾಯಕ), ಕಾರ್ತಿಕೇಯ ಕೆ.ಪಿ, ಸಮಿತ್ ದ್ರಾವಿಡ್, ಅಭಿಗ್ಯಾನ್ ಕುಂದು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್ ಪಂಗಾಲಿಯಾ (ವಿಕೆಟ್ ಕೀಪರ್) ಚೇತನ್ ಶರ್ಮಾ, ಸಮರ್ಥ್ ಎನ್, ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್ಜೀತ್ ಸಿಂಗ್, ಆದಿತ್ಯ ಸಿಂಗ್, ಮೊಹಮ್ಮದ್ ಇನಾನ್.












Click it and Unblock the Notifications