ಸೇಡು ತೀರಿಸಿಕೊಂಡ ಸಿರಾಜ್, ನಲುಗಿತು ಆರ್‌ಸಿಬಿ ಬ್ಯಾಟಿಂಗ್... RCB VS GT
ಆರ್‌ಸಿಬಿ ತಂಡ ಇವತ್ತು ಬೆಂಗಳೂರಿನಲ್ಲಿ ರನ್ ಮಳೆಯನ್ನೇ ಹರಿಸಲಿದೆ, ಈ ಮೂಲಕ ನಮ್ಮ ಆರ್‌ಸಿಬಿ ಭರ್ಜರಿಯಾಗಿ ಗುಜರಾತ್ ವಿರುದ್ಧ ಗೆದ್ದು ಬೀಗಲಿದೆ ಅಂತಾನೇ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಆರಂಭದಲ್ಲೇ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭ ಮಾಡಿದ ಆರ್‌ಸಿಬಿ ಬೆಂಗಳೂರು ತಂಡಕ್ಕೆ ಮೊಹಮ್ಮದ್ ಸಿರಾಜ್ ಇನ್ನಿಲ್ಲದಂತೆ ಕಾಡಿದರು. ಈ ಮೂಲಕ ತಮ್ಮನ್ನು ಆರ್‌ಸಿಬಿ ತಂಡದಿಂದ ಕೈಬಿಟ್ಟದ್ದಕ್ಕೆ ಸಿರಾಜ್ ಸೇಡು ತೀರಿಸಿಕೊಂಡು ಕೇಕೆ ಹಾಕಿದರು!
ಗುಜರಾತ್ ಟೈಟಾನ್ ತಂಡದ ಬೌಲಿಂಗ್ ಪಡೆ ಬಗ್ಗೆ ಅಷ್ಟಾಗಿ ನಂಬಿಕೆ ಇಲ್ಲದ ಆರ್‌ಸಿಬಿ ಟೀಂ ಆಟಗಾರರು, ಭರ್ಜರಿ ಹುಮ್ಮಸ್ಸಿನಲ್ಲೇ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ ಆರ್‌ಸಿಬಿ ತಂಡ ಕೇವಲ 8 ರನ್ ಗಳಿಸಿದ್ದಾಗ ಅರ್ಶದ್ ಖಾನ್ ಬೌಲಿಂಗ್‌ನಲ್ಲಿ 7 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿ ಔಟ್ ಆಗಿ ಪೆವಿಲಿಯನ್ ಸೇರಿದರು. ಆ ನಂತರ ಮೊಹಮ್ಮದ್ ಸಿರಾಜ್ ತಮ್ಮ ಬೌಲಿಂಗ್ ಅಬ್ಬರ ಶುರು ಮಾಡಿ, ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳ ಎದೆಯಲ್ಲಿ ಢವಢವ ಶುರು ಮಾಡಿದ್ದರು. 3 ನಿಮಿಷಕ್ಕೆ ಇಡೀ ಚಿನ್ನಸ್ವಾಮಿ ಕ್ರೀಡಾಂಗಣ ಸೈಲೆಂಟ್ ಆಗಿ ಕುಳಿತುಬಿಟ್ಟಿತ್ತು. ಆಗಲೇ ನೋಡಿ ಆರ್‌ಸಿಬಿ ತಂಡದ ಆಟಗಾರರು ಮ್ಯಾಜಿಕ್ ಮಾಡಿದ್ದು!

ಆರ್‌ಸಿಬಿ ತಂಡ VS ಮೊಹಮ್ಮದ್ ಸಿರಾಜ್!
ಹೌದು, ಮೊಹಮ್ಮದ್ ಸಿರಾಜ್ ಇವತ್ತು ಬೌಲಿಂಗ್ ಮಾಡಲು ಬಂದ ಮೊದಲ ಓವರ್‌ನಿಂದಲೇ ತಾವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಟ ಕಲಿತು ಹೋಗಿದ್ದು ಎಂಬುದನ್ನು ಒತ್ತಿ, ಒತ್ತಿ ಹೇಳಿದರು. ಕೈ ಸನ್ನೆ ಮೂಲಕ ಆರ್‌ಸಿಬಿ ಬ್ಯಾಟಿಂಗ್ ಕೆಣಕಿದರು. ಆರ್‌ಸಿಬಿ ತಂಡ ಕೇವಲ 13 ರನ್ ಗಳಿಸಿದ್ದಾಗ ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್ ಬೌಲಿಂಗ್‌ಗೆ ಕ್ಲೀನ್ ಬೋಲ್ಡ್ ಆಗಿಬಿಟ್ಟರು. ಆ ನಂತರ 4.4 ಓವರ್‌ಗೆ ಫಿಲ್ ಸಾಲ್ಟ್ ಕೂಡ ಮೊಹಮ್ಮದ್ ಸಿರಾಜ್ ಬೌಲಿಂಗ್‌ಗೆ ಕ್ಲೀನ್ ಬೋಲ್ಡ್ ಆದರು. ಈ ಮೂಲಕ ಆರ್‌ಸಿಬಿ ವಿರುದ್ಧ ಸೇಡನ್ನ ತೀರಿಸಿಕೊಂಡ ಸಿರಾಜ್, ತಮ್ಮನ್ನು ಆರ್‌ಸಿಬಿ ತಂಡದಿಂದ ಕೈಬಿಟ್ಟಿದ್ದಕ್ಕೇ ಸೇಡಿಗೆ ಸೇಡು ಎಂದು ಸವಾಲು ಹಾಕಿದರು!












Click it and Unblock the Notifications