ಆರ್‌ಸಿಬಿ ಕಪ್ ಗೆದ್ದರೂ ಸೆಲೆಬ್ರೇಷನ್ ಸಪ್ಪೆ, ಸಪ್ಪೆ... ಕಡಿಮೆ ಆಗುತ್ತಿದೆಯಾ ಫ್ಯಾನ್ಸ್ ಕ್ರೇಜ್? RCB Team
ಆರ್‌ಸಿಬಿ ಬೆಂಗಳೂರು ತಂಡ ಅಂದರೆ ಕೋಟಿ ಕೋಟಿ ಅಭಿಮಾನಿಗಳು ಇದ್ದು, ದೊಡ್ಡ ಪ್ರಮಾಣದ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ನಮ್ಮ ಆರ್‌ಸಿಬಿ ತಂಡಕ್ಕೆ ಇಡೀ ಜಗತ್ತಿನಲ್ಲೇ ಅತಿಹೆಚ್ಚು ಕ್ರಿಕೆಟ್ ಅಭಿಮಾನಿಗಳ ಬೆಂಬಲ ಇದೆ ಎನ್ನುತ್ತಾರೆ ಬೆಂಬಲಿಗರು. ಹೀಗಿದ್ದಾಗ ಆರ್‌ಸಿಬಿ ಮಹಿಳಾ ತಂಡಕ್ಕೆ ಕೂಡ ಇಷ್ಟೇ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಹಾಗೇ ಈ ಬೆಂಬಲ ಪಡೆದು ಆರ್‌ಸಿಬಿ ಮಹಿಳಾ ತಂಡ 2ನೇ ಬಾರಿಗೆ ಕಪ್ ಗೆದ್ದು ಬೀಗಿದೆ. ಇಷ್ಟೆಲ್ಲಾ ಇದ್ದರೂ ದಿಢೀರ್ ಚರ್ಚೆಯೊಂದು ಗಮನ ಸೆಳೆದು, ಕಡಿಮೆ ಆಗುತ್ತಿದೆಯಾ ಫ್ಯಾನ್ಸ್ ಕ್ರೇಜ್? ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಈ ಸಲ ಕಪ್ ನಮ್ದೇ... ಈ ಸಲ ಕಪ್ ನಮ್ದೇ... ಅಂತಾ ಅಭಿಮಾನಿಗಳು ಪದೇ ಪದೇ ಘೋಷಣೆ ಕೂಗುತ್ತಾ ಬೆಂಬಲ ನೀಡುತ್ತಿದ್ದರು ಬೆಂಗಳೂರು ತಂಡಕ್ಕೆ. ಆದರೆ ಕಳೆದ ಕೆಲವು ವರ್ಷಗಳಿಂದ ಆಸೆ ಈಡೇರಿದ್ದು, ಕನಸು ನನಸಾಗುತ್ತಾ ಬಂದಿದೆ. ಹೀಗಾಗಿ ಪ್ರತಿಸಾರಿ ಕಪ್ ನಮ್ಮದೇ ಅಂತಾ ಅಭಿಮಾನಿ ಬಳಗ ಇದೀಗ ಖುಷಿಯಲ್ಲಿ ಕುಣಿದಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇದೀಗ ಆರ್‌ಸಿಬಿ ಮಹಿಳಾ ತಂಡ 2ನೇ ಬಾರಿಗೆ ಕಪ್ ಗೆದ್ದು ಮನೆಗೆ ತಂದಿದೆ. ಇಂತಹ ಸಮಯದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಬೇಕಿತ್ತು. ಆದರೆ ಅಭಿಮಾನಿಗಳ ಸೆಲೆಬ್ರೇಷನ್ ಎಲ್ಲೋ ಸಪ್ಪೆ ಸಪ್ಪೇ ಆಗುತ್ತಿದೆಯಾ? ಬರ್ತಾ ಬರ್ತಾ ಕ್ರೇಜ್ ಕಡಿಮೆ ಆಗುತ್ತಿದೆಯಾ? ಎಂಬ ಚರ್ಚೆ ಶುರುವಾಗಿದೆ.

ಸಂಭ್ರಮಾಚರಣೆ ಕಡಿಮೆ ಆಗಿದ್ದು ಏಕೆ?
ಆರ್‌ಸಿಬಿ ಅಂದ್ರೆ ಕನ್ನಡಿಗರ ತಂಡ ಅಂತಾ ಅಭಿಮಾನಿಗಳು ಹೆಮ್ಮೆಯಿಂದ ಹೇಳುತ್ತಾರೆ. ಅಲ್ಲದೆ ಈ ಕಾರಣಕ್ಕೆ ಕೋಟಿ ಕೋಟಿ ಅಭಿಮಾನಿಗಳ ಬೆಂಬಲ ಇದ್ದು, ಸಾಕಷ್ಟು ಪ್ರಮಾಣದಲ್ಲಿ ಕ್ರೇಜ್ ಕೂಡ ಇರುತ್ತದೆ. ಅದರಲ್ಲೂ ಆರ್‌ಸಿಬಿ ಮಹಿಳಾ ತಂಡ ಮೊದಲ ಬಾರಿಗೆ ಕಪ್ ಗೆದ್ದಾಗ ಬೆಂಗಳೂರು ಸೇರಿ ಇಡೀ ಇಂಡಿಯಾದಲ್ಲಿ ಭರ್ಜರಿ ಸೆಲೆಬ್ರೇಷನ್ ನಡೆದಿತ್ತು. ಆದರೆ ಈ ಬಾರಿ 2ನೇ ಬಾರಿಗೆ ಕಪ್ ಗೆದ್ದಿರುವ ಸಮಯದಲ್ಲಿ ಸಂಭ್ರಮಾಚರಣೆ ಅಷ್ಟು ದೊಡ್ಡ ಮಟ್ಟದಲ್ಲಿ ಇಲ್ಲ ಎಂಬ ಚರ್ಚೆ ನಡೆಯುತ್ತಿದೆ. ಈ ಪೈಕಿ ಪಟಾಕಿ ಹಚ್ಚುವುದರಿಂದ ಹಿಡಿದು, ಅಭಿಮಾನಿಗಳು ರಸ್ತೆಗಳಲ್ಲಿ ಸಂಭ್ರಮಿಸುವ ತನಕ ಎಲ್ಲಾ ಬದಲಾಗಿದೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸೆಲೆಬ್ರೇಷನ್ ಕಡಿಮೆ ಆಗಲು ಕಾರಣ ಏನು?
ಡಬ್ಲೂಪಿಎಲ್ 2026ರ ಕಪ್ ಗೆದ್ದು ಬೀಗಿರುವ ಹಿನ್ನೆಲೆ ಭರ್ಜರಿ ಖುಷಿ & ಸಂಭ್ರಮ ಮೂಡಿದೆ. ಹೀಗೆ ನಮ್ಮ ಬೆಂಗಳೂರು ತಂಡದ ಸಾಧನೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಫೈನಲ್ ಪಂದ್ಯದಲ್ಲಿ ನಮ್ಮ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಗೆದ್ದು ಬೀಗಿತ್ತು. ಈ ಮೂಲಕ ಆರ್‌ಸಿಬಿ ಡಬ್ಲ್ಯೂಪಿಎಲ್ ಅಖಾಡದಲ್ಲಿ 2ನೇ ಬಾರಿಗೆ ಕಪ್ ಗೆದ್ದಿದೆ. 2024ರಲ್ಲಿ ಕೂಡ ಕಪ್ ಗೆದ್ದಿದ್ದ ನಮ್ಮ ಆರ್‌ಸಿಬಿ ತಂಡ, ಇದೀಗ ಮತ್ತೊಮ್ಮೆ 2026ರ ಫೈನಲ್ ಗೆದ್ದು ಕಪ್ ತಂದಿದೆ. ಹೀಗಿದ್ದರೂ ಸೆಲೆಬ್ರೇಷನ್ ಮಾತ್ರ ಅಷ್ಟು ಜೋರಾಗಿ ನಡೆಯಲಿಲ್ಲ ಅಂತಾ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ. ಈ ಬಗ್ಗೆ ಆರ್‌ಸಿಬಿ ಅಭಿಮಾನಿಗಳು ಕೂಡ ಖಡಕ್ ಉತ್ತರ ಕೊಡುತ್ತಿದ್ದು, ಬೆಂಗಳೂರಿನಲ್ಲಿ ಪಂದ್ಯಗಳು ನಡೆಯದ ಕಾರಣಕ್ಕೆ ಹಿಂಗಾಯ್ತಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications