ವಿರಾಟ್ ಕೊಹ್ಲಿ ವಿರುದ್ಧ ರೊಚ್ಚಿಗೆದ್ದರು ರಾಬಿನ್ ಉತ್ತಪ್ಪ!

ವಿರಾಟ್ ಕೊಹ್ಲಿ ಅಂದ್ರೆ ಕನ್ನಡಿಗರಿಗೆ ತುಂಬಾನೆ ಹತ್ತಿರ ಐಪಿಎಲ್ ಶುರುವಾಗಿ 17 ವರ್ಷಗಳಿಂದಲೂ ವಿರಾಟ್ ಕೊಹ್ಲಿ ಅವರು ಬೆಂಗಳೂರು ತಂಡಕ್ಕೆ ಆಡುತ್ತಿದ್ದು, ಬೇರೆ ಯಾವುದೇ ತಂಡಕ್ಕೆ ಹೋಗುವ ಮನಸ್ಸು ಮಾಡಿಲ್ಲ. ಹೀಗಾಗಿ ಕೊಹ್ಲಿ ಅವರನ್ನ ನಮ್ಮ ನಾಡಿನ ಜನ, ಅಂದ್ರೆ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಅಣ್ಣಾ ಅಂತಾ ಕರೆದು ಗೌರವಿಸುತ್ತಾರೆ. ಹೀಗೆ ಬೆಂಗಳೂರು ಟೀಂ ಆರ್‌ಸಿಬಿ ಫ್ಯಾನ್ಸ್ ಪಾಲಿನ ಅಣ್ಣ, ವಿರಾಟ್ ಕೊಹ್ಲಿ ವಿಚಾರವಾಗಿ ರಾಬಿನ್ ಉತ್ತಪ್ಪ ಅವರು ಈಗ ರೊಚ್ಚಿಗೆದ್ದಿದ್ದಾರೆ.

ಇಂಡಿಯನ್ ಕ್ರಿಕೆಟ್ ಟೀಂನ ರನ್ ಮಷಿನ್ ವಿರಾಟ್ ಕೊಹ್ಲಿ ಕಪ್ ಗೆಲ್ಲುವ ಹಠದಲ್ಲಿದ್ದಾರೆ. ಇದೀಗ ಸಂಪೂರ್ಣವಾಗಿ ಆರ್‌ಸಿಬಿ ಗೆಲುವಿಗೆ ತಮ್ಮ ತನು & ಮನ ಅರ್ಪಿಸಿದ್ದಾರೆ ಕೊಹ್ಲಿ. ಇಂತಹ ಸ್ಥಿತಿ ಎದುರಾದ ಸಮಯದಲ್ಲೇ ರಾಬಿನ್ ಉತ್ತಪ್ಪ ಹಾಗೂ ವಿರಾಟ್ ಕೊಹ್ಲಿ ನಡುವೆ ಡೈರೆಕ್ಟ್ ವಾರ್ ಶುರುವಾಗಿದೆ. ಒಂದು ಕಡೆ ವಿಟಾರ್ ಕೊಹ್ಲಿ ತಮ್ಮ ಮನಸ್ಸಿನ ಮಾತು ಹೇಳಿದ್ದರೆ, ಇನ್ನೊಂದು ಕಡೆ ಇದು ತಪ್ಪು ಅಂತಿದ್ದಾರೆ ರಾಬಿನ್ ಉತ್ತಪ್ಪ. ಹಾಗಾದ್ರೆ ಇಬ್ಬರ ನಡುವೆ ಜಗಳ ಶುರುವಾಗಿದ್ದು ಹೇಗೆ? ಬನ್ನಿ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.

Robin Uthappa Criticizes Virat Kohli for Unnecessary remarks on His Place in T20 World Cup Squad

ಕೊಹ್ಲಿ ಜೊತೆ ಉತ್ತಪ್ಪ ಕಿರಿಕ್?

ಕೆಲವು ದಿನಗಳ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರು ಹೇಳಿಕೆ ಒಂದನ್ನ ನೀಡಿದ್ದರು. ಈ ಹೇಳಿಕೆ ಈಗ ಭಾರಿ ಸಂಚಲನ ಸೃಷ್ಟಿ ಮಾಡಿದೆ. ವಿರಾಟ್ ಕೊಹ್ಲಿ ಅವರು ನೀಡಿದ್ದ ಹೇಳಿಕೆಗೆ ರಾಬಿನ್ ಉತ್ತಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ತೀಕ್ಷ್ಣ ಪ್ರತಿಕ್ರಿಯೆ 'ಅನಗತ್ಯ' ಎಂದು ಹೇಳಿರುವ ರಾಬಿನ್ ಉತ್ತಪ್ಪ ಈ ಮೂಲಕ ಹೊಸ ಮಾತಿನ ಮಹಾಯುದ್ಧ ಶುರುವಾಗಿದೆ. ಹಾಗಾದರೆ ವಿರಾಟ್ ಕೊಹ್ಲಿ ಕುರಿತಾಗಿ ರಾಬಿನ್ ಉತ್ತಪ್ಪ ನೀಡಿರುವ ಹೇಳಿಕೆ ಹೇಗೆಲ್ಲಾ ಸಂಚಲನ ಸೃಷ್ಟಿಸಿದೆ? ಮುಂದೆ ಓದಿ.

ವಿರಾಟ್ ಕೊಹ್ಲಿ ಹೇಳಿಕೆಗೆ ಆಕ್ಷೇಪ!

ಈ ಬಗ್ಗೆ ವಿರಾಟ್ ಕೊಹ್ಲಿ ಅವರು ಮಾತನಾಡುತ್ತಾ, ತಾವು ಟಿ20 ಕ್ರಿಕೆಟ್ ಮಾದರಿಯಲ್ಲಿ ಭಾರಿ ಹಿಡಿತ ಹೊಂದಿರುವ ಬಗ್ಗೆ ತಿಳಿಸಿದ್ದರು. ಹೀಗಾಗಿ ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟ್ ಸ್ಟಾರ್ ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪಂದ್ಯದ ನಂತರ ನಡೆದ ಸಂಭಾಷಣೆಯಲ್ಲಿ ಈ ಮಾತನ್ನು ಹೇಳಿರುವ ರಾಬಿನ್ ಉತ್ತಪ್ಪ ಅವ್ರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. 2007ರ ರೀತಿ ಕ್ರಾಂತಿಕಾರಿ ಆಯ್ಕೆಯನ್ನು ಆಯ್ಕೆಗಾರರು ಮಾಡುತ್ತಾರಾ? ಅಥವಾ ಬೇರೆ ನಿರ್ಧಾರ ಕೈಗೊಳ್ಳುತ್ತಾರಾ? ಅನ್ನೋ ಬಗ್ಗೆ ಚರ್ಚೆ ನಡೆಯುವಾಗ ಈ ಮಾತು ಬಂದಿದೆ.

Robin Uthappa Criticizes Virat Kohli for Unnecessary remarks on His Place in T20 World Cup Squad

ಈ ಮೂಲಕ ರಾಬಿನ್ ಉತ್ತಪ್ಪ ಹೇಳಿಕೆ ಇದೀಗ ಸಂಚಲನ ಸೃಷ್ಟಿಸಿದೆ. ಮತ್ತೊಂದು ಕಡೆ ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆರ್‌ಸಿಬಿ & ಕೊಹ್ಲಿ ಅವರ ಫ್ಯಾನ್ಸ್ ಚರ್ಚೆ ಜೋರಾಗಿದೆ. ಒಟ್ನಲ್ಲಿ ಈಗ ವಿರಾಟ್ ಕೊಹ್ಲಿ ಹಾಗೂ ರಾಬಿನ್ ಉತ್ತಪ್ಪ ಅವರ ನಡುವೆ ಮುಸುಕಿನ ಗುದ್ದಾಟ ಶುರುವಾದಂತೆ ಕಾಣುತ್ತಿದೆ. ಹಾಗೇ ಈ ಗುದ್ದಾಟ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಆದರೆ ವಿರಾಟ್ ಕೊಹ್ಲಿ ಅವರು ಐಸಿಸಿ ಟಿ20 ವಿಶ್ವಕಪ್‌ಗೆ ಆಯ್ಕೆ ಆಗುತ್ತಾರಾ? ಅಥವಾ ಆಯ್ಕೆ ಆಗೋದಿಲ್ವಾ? ಅನ್ನೋದನ್ನ ಕಾದು ನೋಡಬೇಕಿದೆ.

16 ವರ್ಷ ಕಪ್ ಗೆದ್ದೇ ಇಲ್ಲ!

ಐಪಿಎಲ್ ಶುರುವಾಯ್ತು ಅಂದ್ರೆ ಭಾರತದಲ್ಲಿ ಹಬ್ಬದ ರೀತಿ ಜನ ಸೆಲೆಬ್ರೇಷನ್‌ ಮಾಡ್ತಾರೆ ಅದ್ರಲ್ಲೂ ಬೆಂಗಳೂರು ನಿವಾಸಿಗಳಿಗೆ & ಕನ್ನಡಿಗರಿಗೆ ಆರ್‌ಸಿಬಿ ಕಣ ಕಣದಲ್ಲೂ ಬೆರೆತು ಹೋಗಿದೆ. ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷ ಕಪ್ ಗೆದ್ದೇ ಇಲ್ಲ. ಇಷ್ಟೆಲ್ಲಾ ನಡೆದ್ರೂ ಕನ್ನಡಿಗರು ಮಾತ್ರ ಆರ್‌ಸಿಬಿ ತಂಡದ ಕೈಬಿಟ್ಟಿಲ್ಲ ಹಾಗೇ ಈ ಬಾರಿ ಅಂದ್ರೆ 17ನೇ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ, ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಮತ್ತೆ 'ಈ ಸಲ ಕಪ್ ನಮ್ದೆ' ವೈರಲ್ ಆಗುತ್ತಿದೆ. ಆದರೆ ಆರ್‌ಸಿಬಿ ತಂಡ ನೀಡುತ್ತಿರುವ ಪ್ರದರ್ಶನ ಅಭಿಮಾನಿಗಳನ್ನು ಬೇಸರಪಡಿಸಿದೆ. ಅಲ್ಲದೆ, ಆರ್‌ಸಿಬಿ ತಂಡದಲ್ಲಿ ಸ್ಪಿನ್ನರ್ಸ್ ಇಲ್ಲ ಅನ್ನೋದು ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ. ಹೀಗಾಗಿ ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ಪುರುಷರ ತಂಡಕ್ಕೆ ಸ್ಪಿನ್ನರ್ ಆಗಿ ಬರಲಿ ಅಂತಿದ್ದಾರೆ ಫ್ಯಾನ್ಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+