Rishabh Pant: ರಿಷಭ್ ಪಂತ್‌ಗೆ ಕಾದಿದೆಯಾ ಕಠಿಣ ಶಿಕ್ಷೆ? ಅಂಪೈರ್ ಜೊತೆ ಮಾತನಾಡಿದ್ದೇ ತಪ್ಪಾಯಿತಾ?
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದೆ. ಈ ವೇಳೆ ಭಾರತ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ. ಈ ಮುನ್ನಡೆಗೆ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಮಹತ್ವದ ಕೊಡುಗೆ ನೀಡಿದರು. ಟೀಮ್ ಇಂಡಿಯಾದ ಫೀಲ್ಡರ್‌ಗಳು ತಕ್ಕ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಪ್ರವಾಸಿ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇದೇ ವೇಳೆ ರಿಷಭ್ ಪಂತ್ ಅವರ ನಡೆ ಎಲ್ಲರ ಚಿತ್ತ ಕದ್ದಿದೆ.
ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ವೇಳೆ ಸಾಲು ಸಾಲು ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದರು. ಇದರಿಂದ ಬೌಲರ್‌ಗಳು ಹತಾಶೆಗೆ ಒಳಗಾದರು. ಇದರ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್ ಬ್ಯಾಟರ್‌ಗಳು ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಲ್ಲದೆ ರನ್ ಮಹಲ್ ಕಟ್ಟಿ ತಂಡಕ್ಕೆ ಆಧಾರವಾದರು. ಈ ವೇಳೆ ರಿಷಭ್ ಪಂತ್ ಚೆಂಡು ಬದಲಿಸುವಂತೆ ಅಂಪೈರ್‌ರಲ್ಲಿ ಕೇಳಿಕೊಂಡಿದ್ದಾರೆ. ಆದರೆ ಅಂಪೈರ್ ಇವರ ಮನವಿಯನ್ನು ತಿರಸ್ಕರಿಸಿದರು. ಆಗ ಈ ದೃಶ್ಯ ಕಂಡು ಬಂದಿತು.

ಇಂಗ್ಲೆಂಡ್‌ನ ಇನಿಂಗ್ಸ್‌ನ 60ನೇ ಓವರ್ ನಡೆಯುತ್ತಿತ್ತು. ಈ ವೇಳೆ ವಿಕೆಟ್‌ಗಳನ್ನು ಪಡೆಯಲು ಟೀಮ್ ಇಂಡಿಯಾ ಹೊಸ ಹೊಸ ಕಸರತ್ತುಗಳನ್ನು ಮಾಡುತ್ತಲೇ ಇತ್ತು. ರಿಷಭ್ ಪಂತ್ ಚೆಂಡನ್ನು ಬದಲಿಸುವಂತೆ ಅಂಪೈರ್‌ಗೆ ಕೇಳಿಕೊಂಡಿದರು. ಅಂಪೈರ್ ಆಗ ಗೇಜ್ ಪರೀಕ್ಷಿಸಲು ಮುಂದಾದರು. ಮತ್ತು ಚೆಂಡು ಸುಲಭವಾಗಿ ಅಂಪೈರ್ ಬಳಸಿದ ಗೇಜ್ ದಾಟಿತು. ಆಗ ಅಂಪೈರ್ ಚೆಂಡನ್ನು ಬದಲಿಸಲು ಅನುಮತಿ ನೀಡಲಿಲ್ಲ. ಇದರಿಂದ ರಿಷಭ್ ಪಂತ್ ಮತ್ತೆ ಮರು ಪರಿಶೀಲಿಸುವಂತೆ ಕೇಳಿಕೊಂಡ್ರು. ಆಗ ಅಂಪೈರ್ ನಿರಾಕರಿಸಿದರು. ಇದರಿಂದ ಪಂತ್ ಕೋಪಗೊಂಡರು. ಮತ್ತು ಚೆಂಡನ್ನು ನೆಲದ ಮೇಲೆ ಎಸೆದರು. ಇದನ್ನು ಕಂಡು ವೀಕ್ಷಕರು ಪಂತ್ ಹೆಸರು ಹೇಳಿ ಕೂಗಿದರು.
ಆಗಿದ್ದೇನು?
ಪಂತ್‌ಗೂ ಮುನ್ನ ಟೀಮ್ ಇಂಡಿಯಾದ ಹಲವು ಆಟಗಾರರು ಚೆಂಡನ್ನು ಬದಲಾಯಿಸುವಂತೆ ಕೇಳಿಕೊಂಡಿದ್ದರು. ಆದರೆ ಅಂಪೈರ್ ಆಟಗಾರರ ಮನವಿಯನ್ನು ತಿರಸ್ಕರಿಸಿದರು. ಅಂಪೈರ್ ನಿರ್ಧಾರಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕಾರಣ ರಿಷಭ್ ಪಂತ್ ಅವರ ನಡೆಗೆ ಮ್ಯಾಚ್ ರೆಫರಿ ಕ್ರಮ ಕೈಗೊಳ್ಳಬಹುದಾಗಿದೆ. ಪಂತ್ ಅಂಪೈರ್ ಜೊತೆ ವರ್ತಿಸಿದ ರೀತಿಗೆ ಶಿಕ್ಷೆ ವಿಧಿಸಬಹುದು. ರಿಷಭ್ ಪಂತ್ಗೂ ಮೊದಲು ಹಲವು ಆಟಗಾರರು ಚೆಂಡನ್ನು ಬದಲಿಸುವಂತೆ ಕೇಳಿಕೊಂಡಿದ್ದರು. ಈ ನಡೆಯನ್ನು ವೀಕ್ಷಕ ವಿವರಣೆಗಾರ ರವಿ ಶಾಸ್ತ್ರಿ ಸಹ ಕಿಡಿಕಾರಿದ್ದಾರೆ. ಪದೆ ಪದೇ ಅಂಪೈರ್ ಬಳಿ ಹೋಗಿ ಚೆಂಡನ್ನು ಬದಲಿಸಲು ಕೇಳುವುದು ಸರಿಯಲ್ಲ ಎಂದಿದ್ದಾರೆ.
ರಿಷಭ್ ಪಂತ್ ಈ ಪಂದ್ಯದಲ್ಲಿ ಮೊದಲ ಬ್ಯಾಟ್‌ನಿಂದ ಅಮೋಘ ಪ್ರದರ್ಶನ ನೀಡಿ ಶತಕ ಬಾರಿಸಿದರು. ಅಲ್ಲದೆ ಭಾರತದ ಪರ ಅತಿ ಹೆಚ್ಚು ಶತಕ ಬಾರಿಸಿದ ವಿಕೆಟ್ ಕೀಪರ್ ಎನಿಸಿಕೊಂಡರು. ಇದಾದ ಬಳಿಕ ಇವರು ಕ್ಯಾಚಿಂಗ್‌ನಲ್ಲೂ ಧೋನಿ ಅವರ ವಿಶೇಷ ಕ್ಲಬ್ ಸೇರಿದ್ರು.












Click it and Unblock the Notifications