ಫಿನಿಶರ್ ಸ್ಥಾನಕ್ಕೆ ನ್ಯಾಯ ತುಂಬುತ್ತಾರಾ ರಿಂಕು ಸಿಂಗ್?
ಟೀಮ್ ಇಂಡಿಯಾ ಬಹುದಿನಗಳಿಂದ ಒಬ್ಬ ಬೆಸ್ಟ್ ಮ್ಯಾಚ್ ಫಿನಿಶರ್ ಹುಡುಕಾಟ ನಡೆಸಿದೆ. ಈ ಸ್ಥಾನದಲ್ಲಿ ಬಹು ದಿನಗಳ ಕಾಲ ಮಹೇಂದ್ರ ಸಿಂಗ್ ಧೋನಿ ರಾರಾಜಿಸಿದ್ದರು. ಅವರು ಇರುವವರೆಗೂ ಆ ಸ್ಥಾನದ ಬಗ್ಗೆ ಚಿಂತೆ ಇರಲಿಲ್ಲ. ಆದರೆ ಈಗ ಟೀಮ್ ಇಂಡಿಯಾ ಮ್ಯಾಚ್ ಫಿನಿಶರ್ ಪಾತ್ರಕ್ಕೆ ನ್ಯಾಯ ಒದಗಿಸುವ ಸೂಕ್ತ ಆಟಗಾರನ ಹುಡುಕಾಟ ನಡೆದಿದೆ. ಈ ಸ್ಥಾನವನ್ನು ತುಂಬಲು ತಾನು ರೆಡಿ ಎಂದು ಹಾರ್ದಿಕ್ ಪಾಂಡ್ಯ ಸಾಬೀತು ಪಡಿಸಿದ್ದಾರೆ.
ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಅವರಿಗೆ ಇನ್ನೋಬ್ಬ ಆಟಗಾರನ ಹುಡುಕಾಟ ನಡೆಸುತ್ತಿದೆ. ಅಸಲಿಗೆ ಈ ಪ್ರಶ್ನೆಗೆ ಜಿಂಬಾಬ್ವೆ ಸರಣಿಯಲ್ಲಿ ಉತ್ತರ ಸಿಕ್ಕಿದೆ. ಬಿಗ್ ಇನ್ನಿಂಗ್ಸ್ ಆಡುವ ಎಬಿಲಿಟಿ ಹಾಗೂ ಬಿಗ್ ಹಿಟ್ಟಿಂಗ್ ಎಬಿಲಿಟಿಯನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯಂಗ್ ಮ್ಯಾನ್ ಹೆಸರು ಮುಂಚೂಣಿಯಲ್ಲಿ ಕೇಳಿಸಿಕೊಳ್ಳುತ್ತಿದೆ.

ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್‌ನಲ್ಲಿ ಕಾಣಿಸಿಕೊಂಡ ಸ್ಟಾರ್ ಪ್ಲೇಯರ್ ರಿಂಕು ಸಿಂಗ್.. ಈ ಎಡಗೈ ಬ್ಯಾಟರ್ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ತಂಡಕ್ಕೆ ಆಧಾರವಾದ ಆಟಗಾರ. ಇವರ ಬ್ಯಾಟಿಂಗ್ ಝಲಕ್‌ನ್ನು ಐಪಿಎಲ್‌ನಲ್ಲಿ ಈಗಾಗಲೇ ಅಭಿಮಾನಿಗಳು ಕಂಡಿದ್ದು ಫುಲ್ ಮಾರ್ಕ್ಸ್ ನೀಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಎರಡನೇ ಟಿ20ಯಲ್ಲಿ ಅವರು 22 ಎಸೆತಗಳಲ್ಲಿ 48 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು ಮತ್ತು ಭಾರತ 234 ರನ್‌ಗಳ ದೊಡ್ಡ ಸ್ಕೋರ್ ಕಲೆ ಹಾಕುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ರಿಂಕು ಫಿಟ್ ಪ್ಲೇಯರ್
ಫಿನಿಶರ್‌ನ ಕೆಲಸವೆಂದರೆ ಪರಿಸ್ಥಿತಿಗೆ ಅನುಗುಣವಾಗಿ ಆಡುವಾಗ ಕೊನೆಯವರೆಗೂ ಉಳಿಯುವುದು ಮಾತ್ರವಲ್ಲದೆ ವೇಗವಾಗಿ ರನ್ ಗಳಿಸುವುದು. ಬೇಗನೆ ರನ್ ಗಳಿಸಲು ಪ್ರಯತ್ನಿಸುತ್ತಿರುವಾಗ ಅನೇಕ ಬ್ಯಾಟ್ಸ್‌ಮನ್‌ಗಳು ಔಟಾಗುತ್ತಾರೆ. ರಿಂಕು ಸಿಂಗ್ ಈ ಕೆಲಸದಲ್ಲಿ ಪರಿಣಿತಿ ಸಾಧಿಸಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ತನ್ನ ಆಟವನ್ನು ಬದಲಾಯಿಸಿಕೊಳ್ಳುತ್ತಾನೆ.

17 ಪಂದ್ಯಗಳ ನಂತರ ಟಿ20ಯಲ್ಲಿ ರಿಂಕು ಸಿಂಗ್ ಸರಾಸರಿ 80.80 ಆಗಿದೆ. ಈ ಬಾರಿ ಎಂಟು ಬಾರಿ ಔಟಾಗದೆ ವಾಪಸಾಗಿದ್ದಾರೆ. ಅವರ ಸ್ಟ್ರೈಕ್ ರೇಟ್ 178.76. ಅವರ T20 ವೃತ್ತಿಜೀವನದಲ್ಲಿ, ಅವರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಅವರು ಟೀಮ್ ಇಂಡಿಯಾದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಲು ಸಿದ್ಧರಾಗಿದ್ದಾರೆ ಎಂದು ಅವರ ಅಂಕಿಅಂಶಗಳು ಸಾಬೀತುಪಡಿಸುತ್ತವೆ.
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲ?
ರಿಂಕು ಸಿಂಗ್‌ಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಅವರನ್ನು ಮೀಸಲು ಆಟಗಾರನಾಗಿ ಇರಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಇದೀಗ ಜಿಂಬಾಬ್ವೆ ಸರಣಿಯ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅವಕಾಶ ಅವರದ್ದಾಗಿದೆ.












Click it and Unblock the Notifications