
T20 world cup:6 ವರ್ಷಗಳ ನಂತರ ಕಮ್‌ಬ್ಯಾಕ್, ಸತತ 2 ಸತಕ ಸಿಡಿಸಿದ ದಾಖಲೆ ಬರೆದ ರೋಸೋ
ಸಿಡ್ನಿ, ಅಕ್ಟೋಬರ್ 27: ಗುರುವಾರ ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ದಕ್ಷಿಣ ಆಫ್ರಿಕಾ ತಂಡ 104 ರನ್‌ಗಳ ಭರ್ಜರಿ ಜಯ ಸಾಧಿಸಿ ವಿಶ್ವಕಪ್‌ನಲ್ಲಿ ಮೊದಲ ಜಯ ಸಾಧಿಸಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್‌ಗಳಿಸಿತ್ತು. ಕ್ವಿಂಟನ್ ಡಿಕಾರ್ 38 ಎಸೆತಗಳಲ್ಲಿ 7 ಬೌಂಡರಿ ಜೊತೆಗೆ 3 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 63 ರನ್‌ಗಳಿಸಿದರೆ, ರೋಸೋ 56 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ 1079 ರನ್‌ಗಳಿಸಿ ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದರು.
ಗಂಧದ ಗುಡಿ ಸಿನಿಮಾ ನೋಡಿ ಪುನೀತ್ ಆಶಯವನ್ನು ಜೀವಂತವಾಗಿರಿಸಿ : ಅಮಿತ್ ಮಿಶ್ರಾ ಮನವಿ
206 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 16.3 ಓವರ್‌ಗಳಲ್ಲಿ ಕೇವಲ 101 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು. ಲಿಟ್ಟನ್ ದಾಸ್ 34 ರನ್‌ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್ ಆಯಿತು. ಹರಿಣಗಳ ಪರ ಎನ್ರಿಚ್ ನೊರ್ಕಿಯಾ 4 ತಬ್ರೈಜ್ ಶಮ್ಸಿ 3 ಕಗಿಸೋ ರಬಾಡ ಹಾಗೂ ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
6 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರೋಸೋ ಕಮ್‌ಬ್ಯಾಕ್
ವಿಶೇಷವೆಂದರೆ 2022ರ ಜುಲೈನಲ್ಲಿ ರೋಸೋ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ಮುನ್ನ ಹರಿಣ ಪಡೆಗಾಗಿ ಕೊನೆಯ ಟಿ20 ಪಂದ್ಯವನ್ನಾಡಿದ್ದು 2016ರ ಮಾರ್ಚ್ 9ರಂದು. ಅಲ್ಲಿಂದ ತಂಡದಿಂದ ದಿಢೀರ್ ಹೊರಬಿದ್ದಿದ್ದ ಪ್ರತಿಭಾವಂತ ಬ್ಯಾಟರ್‌ಗೆ ಮತ್ತೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರೂಸೋ 36 ಏಕದಿನ ಪಂದ್ಯ ಮತ್ತು 15 ಟಿ20 ಪಂದ್ಯಗಳನ್ನಾಡಿದ್ದರು. 2016ರಲ್ಲಿ ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನಾಡಿದ್ದ ರೋಸೋ ಅಲ್ಲಿಂದ ಮತ್ತೆ ಗ್ರೀನ್ ಆರ್ಮಿಯಲ್ಲಿ ಅವಕಾಶ ಪಡೆದಿರಲಿಲ್ಲ. ಕೇವಲ ಟಿ20 ಅಲ್ಲ ಯಾವುದೇ ಮಾದರಿಯ ತಂಡದಲ್ಲಿ ಮತ್ತೆ ಆಡುವ ಅವಕಾಶ ಸಿಕ್ಕಿರಲಿಲ್ಲ.

ಆದರೆ ವಿಶ್ವದಾದ್ಯಂತ ಹಲವು ಟಿ20 ಲೀಗ್‌ಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ನಂತರ ವಿಶ್ವಕಪ್‌ಗೂ ಮುನ್ನವೇ ಕೋಚ್ ಮಾರ್ಕ್ ಬೌಷರ್ ರೋಸೋ ಪ್ರತಿಭೆಯನ್ನು ಗುರುತಿಸಿ ಮತ್ತೆ ಟಿ20 ತಂಡದಲ್ಲಿ ಅವಕಾಶ ಕೊಟ್ಟಿದ್ದರು. ಇದೀಗ ಸಿಕ್ಕ ಅವಕಾಶವನ್ನು ರೋಸೋ ಅದ್ಭುತವಾಗಿ ಬಳಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯುವ ಹರಿಣಗಳ ಕನಸನ್ನು ಇಡೇರಿಸುವ ಪ್ರಬಲ ಶಕ್ತಿಯಾಗಿದ್ದಾರೆ.
ಸತತ 2 ಶತಕ, 7 ಇನ್ನಿಂಗ್ಸ್ 336 ರನ್
ರಿಲೇ ರೋಸೋ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ನಂತರ 8 ಪಂದ್ಯಗಳಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡು 7 ರಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಕ್ರಮವಾಗಿ 4, 96, 31, 0,0, 100, 109 ರನ್‌ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ ಒಮ್ಮೆ 96 ರನ್ ಸಿಡಿಸಿರುವುದು ವಿಶೇಷ. ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಿದ ಬಳಿಕ ಇಂತಹ ಅದ್ಭುತ ಪ್ರದರ್ಶನ ತೋರುತ್ತಿರುವುದು ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿರಾಗಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಐಸಿಸಿ ಸದಸ್ಯ ರಾಷ್ಟ್ರದ ಬ್ಯಾಟರ್ ಒಬ್ಬ ಸತತ 2 ಶತಕ ಸಿಡಿಸಿದ್ದು ಇದೇ ಮೊದಲಾಗಿದೆ. ಜೊತೆಗೆ ದಕ್ಷಿಣ ಆಫ್ರಿಕಾ ತಂಡದ ಪರ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೊದಲ ಕ್ರಿಕೆಟರ್ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ.