RCB: 2026ರ ಐಪಿಎಲ್‌ಗೆ ಆರ್‌ಸಿಬಿಯಲ್ಲಿ ಆಡುವವರ 11ರ ಬಳಗ ಹಾಗೂ ಇಂಪ್ಯಾಕ್ಟ್ ಪ್ಲೇಯರ್ಸ್
RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿಯು ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಮೊದಲ ಟ್ರೋಫಿ ತನ್ಮದಾಗಿಸಿಕೊಂಡಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುತ್ತಿದ್ದಂತೆ ಬರೀ ಕರ್ನಾಟಕ ಅಷ್ಟೇ ಆಲ್ಲದೆ, ಇಡೀ ದೇಶದಲ್ಲೇ ಸಂಭ್ರಾಮಚರಣೆ ಮಾಡಿದರು. ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಆಯೋಜಿಸಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದು ಗೆಲುವಿನ ಸಂಭ್ರಮವನ್ನೇ ಕಿತ್ತುಕೊಂಡಿದ್ದು, ಬಳಿಕ ಹಲವು ಬೆಳವಣಿಗೆಗಳು ಆಗುತ್ತಲಿವೆ.
ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಪಂದ್ಯ ನಡೆದಿದ್ದು, ಆರ್‌ಸಿಬಿಯು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಟ್ರೋಫಿ ಮುಡಿಗೇರಿಸಿಕೊಂಡಿತು. ಅಂದು ಇಡೀ ದೇಶವೇ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಮುಳುಗಿಹೋಗಿಬಿಟ್ಟಿತ್ತು. ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭಿವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದದರು. ಈ ದುರಂತ ಆರ್‌ಸಿಬಿ ಪಾಲಿಗೆ ಕಪ್ಪು ಚುಕ್ಕೆಯಾಗಿಬಿಟ್ಟಿತು.

ಕಾಲ್ತುಳಿತ ದುರಂತ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿತು. ಅಷ್ಟೇ ಅಲ್ಲದೆ, ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧವೂ ಎಫ್‌ಐಆರ್ ಹಾಗೂ ವಿರಾಟ್ ಕೊಹ್ಲಿ ಮೇಲೂ ದೂರು ದಾಖಲಿಸಿದ್ದರು. ಇದಾದ ಬಳಿಕ ಆರ್‌ಸಿಬಿ ತಂಡವನ್ನೇ ಬ್ಯಾನ್ ಮಾಡಬೇಕು ಹಾಗೂ ಮಾರಾಟ ಮಾಡಲಾಗುತ್ತದೆ ಎನ್ನುವ ವದಂತಿಗಳು ಹಬ್ಬಿದ್ದವು. ಇದಕ್ಕೆ ಸ್ಪಷನೆ ನೀಡಿದ ಪ್ರಾಂಚೈಸಿ ನಾವು ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಿತು.
ಈ ನಡುವೆಯೇ ಮುಂದಿನ ಸೀಸನ್ ಅಂದರೆ 2026ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ 11ರ ಬಳಗ ಹಾಗೂ ಇಂಫ್ಯಾಕ್ಟ್ ಪ್ಲೇಯರ್ಸ್ಟ್‌ಗಳ ಪಟ್ಟಿಯೊಂದು ವೈರಲ್ ಆಗುತ್ತಿದೆ. ಹಾಗಾದ್ರೆ ಯಾರೆಲ್ಲಾ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಬಲಿಷ್ಠ ತಂಡಗಳನ್ನ ಬಗ್ಗುಬಡಿದು ಟ್ರೋಫಿ ಮುಡಿಗೇರಿಸಿಕೊಂಡಿದೆ. ಹೀಗೆ ಬ್ಯಾಟಿಂಗ್, ಬೌಲಿಂಗ್ ಲೈನ್ ಅಪ್ ಉತ್ತಮವಾಗಿದೆ. ಯಾರನ್ನು ಯಾವ ಸ್ಥಾನದಲ್ಲಿ ಆಡಿಸಿದರೆ ಉತ್ತಮ ಎಂಬ ಐಡಿಯಾ ಕೂಡ ಸಿಕ್ಕಿದೆ. ಅಂದುಕೊಂಡಿದ್ದಕ್ಕಿಂತ ಉತ್ತಮ ಆಟಗಾರರನ್ನೇ ಹೊಂದಿದ್ದು, ಅವರನ್ನೇ ಮುಂದಿನ ಆವೃತ್ತಿಗೆ ಮುಂದುವರೆಸುವ ಚಿಂತನೆ ನಡೆಸಿದೆ.
2026ಕ್ಕೆ ಆಡುವವರ 11ರ ಬಳಗ & ಇಂಪ್ಯಾಕ್ಟ್ ಪ್ಲೇಯರ್ಸ್
* ರಜತ್ ಪಾಟಿದಾರ್ (ನಾಯಕ)
* ವಿರಾಟ್ ಕೊಹ್ಲಿ
* ಫಿಲ್ ಸಾಲ್ಟ್ / ಜಾಕೋಬ್ ಬೆಥೆಲ್
* ದೇವದತ್ ಪಡಿಕ್ಕಲ್/ ಮಯಾಂಕ್ ಅಗರ್ವಾಲ್
* ಜಿತೇಶ್ ಶರ್ಮಾ (ವಿಕೆಟ್ ಕೀಪರ್)
* ಕೃನಾಲ್ ಪಾಂಡ್ಯ
* ಟೀಂ ಡೆವಿಡ್ / ರೊಮಾರಿಯೋ ಶೇಫರ್ಡ್
* ಜೋಶ್ ಹೇಜಲ್‌ವುಡ್
* ಸುಯೇಶ್ ಶರ್ಮಾ
* ಭುವನೇಶ್ವರ್ ಕುಮಾರ್
* ಯಶ್ ದಯಾಳ್
ಅದರಲ್ಲೂ 2025ರ ಟ್ರೋಫಿ ಗೆಲುವಿಗೆ ಕೋಚ್ ದಿನೇಶ್ ಕಾರ್ತಿಕ್ ಪಾತ್ರವನ್ನು ಮರೆಯುವಂತಿಲ್ಲ. ಎಲ್ಲಾ ಆಟಗಾರರೊಂದಿಗೂ ತಾನು ಕೋಚ್‌ನಂತೆ ಕಾಣಿಸಿಕೊಳ್ಳದೇ ತಾನೊಬ್ಬ ಆಟಗಾರನೆಂಬಂತೆ ನಡೆದುಕೊಂಡ ರೀತಿ ಮಾತ್ರ ಎಲ್ಲರೂ ಮೆಚ್ಚುವಂತದ್ದಾಗಿದೆ. ಅವರ ಈ ಗುಣದಿಂದಲೇ ತಂಡ ಧನಾತ್ಮಕತೆಯಿಂದ ಕೂಡಿತ್ತು. ಹೊಸ ಆಟಗಾರರಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ, ಉತ್ಸುಕತೆಯನ್ನ ತುಂಬಿದ್ದು ಕೂಡ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು ಅಂದ್ರೆ ತಪ್ಪಾಗಲಾರದು.












Click it and Unblock the Notifications