ಆರ್‌ಸಿಬಿ ಅಭಿಮಾನಿಗಳೇ ಇಲ್ಲಿ ಕೇಳಿ.. ಇಲ್ಲಿ ಕೇಳಿ..!

ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ, ನಿನ್ನೆ ಪಂಜಾಬ್ ತಂಡವನ್ನು ಹೀನಾಯವಾಗಿ ಸೋಲಿಸಿದ್ದ ಆರ್‌ಸಿಬಿ ಬೆಂಗಳೂರು ತಂಡ ಇಂದು ಮ್ಯಾಚ್ ಆಡದೇ ಇದ್ದರೂ ಸಿಹಿ ಸುದ್ದಿ ಪಡೆದಿದೆ. ಅದು ಏನೆಂದರೆ ಐಪಿಎಲ್ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೇ ಸ್ಥಾನ ಪಡೆದಿರುವ ಗುಜರಾತ್ ತಂಡ ಇಂದು ಚೆನ್ನೈ ತಂಡವನ್ನು ಮಣಿಸಿದೆ. ಈ ಮೂಲಕ ಈಗ, ಐಪಿಎಲ್ 2024ರ ಟೂರ್ನಿಗೆ ಭರ್ಜರಿ ತಿರುವು ಸಿಕ್ಕಂತಾಗಿದೆ!

ಚೆನ್ನೈ ತಂಡ ಈವರೆಗೆ ಒಟ್ಟು 12 ಪಂದ್ಯ ಆಡಿದ್ದು 6 ಪಂದ್ಯ ಗೆದ್ದಿದ್ದರೆ ಇನ್ನು 6 ಮ್ಯಾಚ್ ಸೋತಿದೆ. ಈ ಮೂಲಕ 12 ಅಂಕ ಪಡೆದು 4ನೇ ಸ್ಥಾನ ಗಿಟ್ಟಿಸಿದೆ ಚೆನ್ನೈ ತಂಡ. ಹೀಗಾಗಿ ಇಂದು ಗುಜರಾತ್ ವಿರುದ್ಧ ನಡೆದ ಪಂದ್ಯ ಏನಾಗುತ್ತೆ? ಚೆನ್ನೈ ಗೆಲ್ಲುತ್ತಾ? ಎಂಬ ಕುತೂಹಲ ಕೆರಳಿತ್ತು. ಆದರೆ ಚೆನ್ನೈ ತಂಡ ಇಂದು ಸೋತು ಹೋಗಿದೆ. ಈ ಮೂಲಕ ಗುಜರಾತ್ ಈಗ ಮತ್ತೆ ಹುಮ್ಮಸ್ಸು ಪಡೆದಿದ್ದು, ಭಾರಿ ಕುತೂಹಲ ಕೆರಳಿದೆ. ಯಾಕಂದ್ರೆ, ಚೆನ್ನೈ ಮುಂದಿನ ಹಂತಕ್ಕೆ ಹೋಗುತ್ತಾ? ಅನ್ನೋ ಅನುಮಾನ ಮೂಡಿದೆ. ಹಾಗೇ ಇದರಿಂದ ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗಲು ವೇದಿಕೆ ಸಿದ್ಧವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

RCB s Playoff Hopes Alive After Chennai VS Gujrat Titans Match

ಆರ್‌ಸಿಬಿಗೆ ಕಪ್ ಗ್ಯಾರಂಟಿ?

ವಿರಾಟ್ ಕೊಹ್ಲಿ ರೊಚ್ಚಿಗೆದ್ದಿದ್ದಾರೆ, ಆರ್‌ಸಿಬಿ ತಂಡ 2024ರ ಐಪಿಎಲ್ ಟೂರ್ನಿಯಲ್ಲಿ ಈ ರೀತಿ ಸತತ ಹೀನಾಯ ಸೋಲು ಕಂಡ ನಂತರ ಕಿಚ್ಚು ಹೊತ್ತಿಕೊಂಡಿದೆ. ಇದೇ ಕಾರಣಕ್ಕೆ, ಆರ್‌ಸಿಬಿ ತಂಡ ಸತತವಾಗಿ ಗೆಲುವು ಕಾಣುತ್ತಿದೆ. ಹೀಗಾಗಿ ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ, ಭರ್ಜರಿಯಾಗಿ ಕಂಬ್ಯಾಕ್ ಮಾಡಿದೆ. ಆದರೆ ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗಲು ಬಾಕಿ ಇರುವ 2 ಪಂದ್ಯಗಳನ್ನು ಕೂಡ ಗೆಲ್ಲಬೇಕಿದೆ.

ಈಗ ಆರ್‌ಸಿಬಿ ಒಟ್ಟು 12 ಮ್ಯಾಚ್ ಆಡಿದ್ದು, ಒಟ್ಟು 7 ಪಂದ್ಯ ಸೋತಿದೆ. ಹಾಗೇ 5 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಆರ್‌ಸಿಬಿ ಇದೀಗ ಬಾಕಿ ಉಳಿದಿರುವ ಎಲ್ಲಾ ಪಂದ್ಯ ಗೆಲ್ಲಬೇಕಿದೆ. ಇದರ ಜೊತೆಗೆ ಅಂಕ ಪಟ್ಟಿಯಲ್ಲಿ ಮೇಲೆ ಇರುವ ತಂಡಗಳು ಸೋಲು ಕಾಣಬೇಕಿದೆ. ಇದು ಭರ್ಜರಿ ಅವಕಾಶ ಸೃಷ್ಟಿ ಮಾಡಲಿದೆ. ಹಾಗೇ ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ನುಗ್ಗಿ, ಕಪ್ ಗೆಲ್ಲುವ ಅವಕಾಶ ಗಿಟ್ಟಿಸಿಕೊಳ್ಳಲಿದೆ.

ಅಬ್ಬರಿಸಿದ ಗಿಲ್ & ಸುದರ್ಶನ್!

ಗುಜರಾತ್ ಟೈಟಾನ್ಸ್ ಟೀಂಗೆ ಇಂದು ನೆರವಾಗಿದ್ದು ಶುಭ್‌ಮನ್ ಗಿಲ್ & ಸುದರ್ಶನ್ ಅವರು. ಈ ಇಬ್ಬರೂ ಭರ್ಜರಿ ಆಟ ಆಡಿ, ಗುಜರಾತ್ ತಂಡಕ್ಕೆ ಭರ್ಜರಿ ಬುನಾದಿ ಹಾಕಿ ಕೊಟ್ಟಿದ್ದರು. ಆದ್ರೆ ಈ ಗುರಿ ಬೆನ್ನುಹತ್ತಿದ್ದ ಚೆನ್ನೈ ತಂಡ ಸೋತು ಹೋಗಿದೆ. 20 ಓವರ್‌ಗೆ 231 ರನ್‌ಗಳ ಚಚ್ಚಿ ಬಿಸಾಡಿದ್ದ ಗುಜರಾತ್ ಟೈಟಾನ್ಸ್ ತಂಡ, ಚೆನ್ನೈ ತಂಡಕ್ಕೆ 232 ರನ್‌ಗಳ ಗುರಿಯನ್ನ ನೀಡಿತ್ತು. ಆದರೆ ಆಗಿದ್ದೇ ಬೇರೆ...

ಹೀಗೆ ಗುಜರಾತ್ ಟೈಟಾನ್ಸ್ ನೀಡಿದ್ದ 232 ರನ್‌ಗಳ ಗುರಿಯನ್ನು ಬೆನ್ನು ಹತ್ತಿದ್ದ ಚೆನ್ನೈಗೆ, ಆಘಾತ ಎದುರಾಗಿತ್ತು. 196 ರನ್‌ಗೆ 8 ವಿಕೆಟ್ ಕಳೆದುಕೊಂಡು ಸೋಲು ಒಪ್ಪಿಕೊಂಡಿತ್ತು. ಆದರೆ ಇದೇ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಭರ್ಜರಿ ಆಟ ಎಲ್ಲರಿಗೆ ಕೂಡ ಇಷ್ಟವಾಗಿತ್ತು. ಕೇವಲ 11 ಬಾಲ್‌ಗೆ 26 ರನ್ ಸಿಡಿಸಿದ ಮಹೇಂದ್ರ ಸಿಂಗ್ ಧೋನಿ 236.36 ಸ್ಟ್ರೈಕ್ ರೇಟ್ ಮೂಲಕ 3 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಆದರೂ ಚೆನ್ನೈ ಈ ಪಂದ್ಯದಲ್ಲಿ ಸೋಲು ಕಂಡಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+