RCB vs CSK: ಎಂಎಸ್ ಧೋನಿ ಔಟ್ ಮಾಡಿದ್ದಕ್ಕೆ ಬೇಸರವಾಗಿದೆ ಎಂದ ಆರ್‌ಸಿಬಿ ಬೌಲರ್ ಯಶ್ ದಯಾಳ್
ಐಪಿಎಲ್ 2024ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಲೀಗ್ ಹಂತದ ಕೊನೆಯ ಪಂದ್ಯ ಐಪಿಎಲ್ ಇತಿಹಾಸದಲ್ಲೇ ರಣನ ರೋಚಕ ಪಂದ್ಯಗಳಲ್ಲಿ ಒಂದಾಗಿದೆ. ಕೊನೆಯ ಓವರ್ ನಲ್ಲಿ ರೋಚಕ ಗೆಲುವು ಸಾಧಿಸಿದ ಆರ್ ಸಿಬಿ ಪ್ಲೇ ಆಫ್ ತಲುಪಿದ್ದನ್ನು ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಕೊನೆಯ ಓವರ್ ನಲ್ಲಿ ಧೋನಿಯನ್ನು ಔಟ್ ಮಾಡಿದ ಯಶ್ ದಯಾಳ್ ಆರ್ ಸಿಬಿ ಅಭಿಮಾನಿಗಳ ಪಾಲಿನ ಹೀರೋ ಆಗಿದ್ದರು. ಇದೀಗ ಧೋನಿ ಔಟ್ ಮಾಡಿದ ಬಗ್ಗೆ ಮಾತನಾಡಿದ್ದಾರೆ.
ಎಂಎಸ್ ಧೋನಿಯನ್ನು ಔಟ್ ಮಾಡಿದ್ದಕ್ಕೆ ಬೇಸರವಾಗುತ್ತಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅದೇ ಎಂಎಸ್ ಧೋನಿಯ ಕೊನೆಯ ಪಂದ್ಯವಾಗುವ ಸಾಧ್ಯತೆ ಕೂಡ ಇದ್ದು, ಧೋನಿಯನ್ನು ಔಟ್ ಮಾಡಿದ ಕೊನೆಯ ಬೌಲರ್ ಎನ್ನುವ ಹೆಗ್ಗಳಿಕೆ ಕೂಡ ಅವರದ್ದಾಗುವ ಸಾಧ್ಯತೆ ಇದೆ.

ಕೊನೆಯ ಓವರ್ ನಲ್ಲಿ ಸಿಎಸ್‌ಕೆ ಗೆಲುವಿಗೆ 17 ರನ್ ಬೇಕಿತ್ತು, ಧೋನಿ ಕ್ರೀಸ್‌ನಲ್ಲಿದ್ದರು. ಯಶ್ ದಯಾಳ್ ಕೊನೆಯ ಓವರ್ ನ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿದರು. 5 ಎಸೆತಗಳಲ್ಲಿ ಸಿಎಸ್‌ಕೆ ಗೆಲುವಿಗೆ 11 ರನ್ ಬೇಕಿತ್ತು, ಎರಡನೇ ಎಸೆತದಲ್ಲಿ ಧೋನಿ ವಿಕೆಟ್ ಪಡೆದ ಯಶ್ ದಯಾಳ್, ಆರ್ ಸಿಬಿ ಗೆಲುವಿಗೆ ಕಾರಣವಾದರು.
ಅದೊಂದು ಕೆಟ್ಟ ಭಾವನೆ
ಆರ್ ಸಿಬಿ ರೋಚಕ ಗೆಲುವು ಸಾಧಿಸಿದ ಬಳಿಕ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಅದೇ ಎಂಎಸ್ ಧೋನಿಯವರಿಗೆ ಬಹುತೇಕ ಕೊನೆಯ ಪಂದ್ಯವಾಗಿರುವ ಕಾರಣ ಭಾರಿ ನಿರಾಸೆ ಅನುಭವಿಸಿದರು. 2025ರ ಐಪಿಎಲ್‌ನಲ್ಲಿ ಧೋನಿ ಆಡುವುದು ಇನ್ನೂ ಖಚಿತವಾಗಿಲ್ಲ. ಧೋನಿಯನ್ನು ಔಟ್ ಮಾಡಿದ ಕೊನೆಯ ಬೌಲರ್ ನಾನೇ ಆಗಬಹುದು ಎಂದು ಯಶ್ ದಯಾಳ್ ಬೇಸರಪಟ್ಟುಕೊಂಡಿದ್ದಾರೆ.
ಧೋನಿ ತನ್ನ ಬಗ್ಗೆಯೇ ಅಸಹ್ಯಪಟ್ಟು ಮೈದಾನದಿಂದ ಹೊರನಡೆಯುವುದು, ಡಗೌಟ್‌ನಲ್ಲಿ ಕುಳಿತು ನಂತರ ಸದ್ದಿಲ್ಲದೆ ಕಣ್ಮರೆಯಾಗುವುದು ಅವರು ನಿರೀಕ್ಷೆ ಮಾಡಿರುವ ಅಂತ್ಯವಾಗಿರಲಿಲ್ಲ. ಯಶ್ ದಯಾಳ್ ಇದು ಒಂದು ರೀತಿ ಸಂತೋಷದ ಕ್ಷಣವಾದರೆ ಇನ್ನೊಂದು ರೀತಿ ಕಹಿ ಕ್ಷಣವಾಗಿದೆ.
ಧೋನಿಯನ್ನು ಔಟ್ ಮಾಡಿದ ಬಳಿಕ ನನಗೆ ಬೇಸರವಾಯಿತು. ಜನ ನನಗೆ ಏನು ಹೇಳುತ್ತಾರೆ ಎಂದು ನನಗೆ ತಿಳಿದಿಲ್ಲ, ಅದಕ್ಕೆ ಹೆದರುವುದಿಲ್ಲ. ಆದರೆ ಧೋನಿ ಮೈದಾನದಿಂದ ಹೊರ ನಡೆದ ರೀತಿ, ಅವರು ಮತ್ತೆ ಆಡುತ್ತಾರೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಮೈದಾನದಲ್ಲಿ ಹಲವು ಆಲೋಚನೆಗಳು ತಲೆಗೆ ಬಂದವು ಎಂದು ಖ್ಯಾತ ಕ್ರೀಡಾ ಪ್ರಸಾರಕ ಜತಿನ್ ಸಪ್ರು ಅವರಿಗೆ ಹೇಳಿದರು.
ಐಡಿಯಾ ಕೊಟ್ಟಿದ್ದು ವಿರಾಟ್ ಕೊಹ್ಲಿ
ಧೋನಿ ಔಟ್ ಮಾಡಲು ವಿರಾಟ್ ಕೊಹ್ಲಿ ಮಾಡಿದ ಪ್ಲಾನ್ ಕಾರಣ ಎಂದು ಯಶ್ ದಯಾಳ್ ಹೇಳಿದರು. ದಯಾಳ್ ಎರಡನೇ ಎಸೆತವನ್ನು ಯಾರ್ಕರ್ ಎಸೆಯಲು ಯೋಜಿಸಿದ್ದರು, ನಾಯಕ ಫಾಫ್ ಡು ಪ್ಲೆಸಿಸ್‌ಗೆ ಕೂಡ ಅದನ್ನು ತಿಳಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ವಿರಾಟ್ ಕೊಹ್ಲಿ ನಿಧಾನಗತಿಯ ಎಸೆತ ಬೌಲ್ ಮಾಡಲು ತಿಳಿಸಿದರು ಎಂದು ಹೇಳಿದರು.
ಧೋನಿ ಔಟಾಗಿದ್ದರು ದಯಾಳ್ ಕೆಲಸ ಅರ್ಧದಷ್ಟು ಮುಗಿದಿದೆ ಅವರಿಗೆ ತಿಳಿದಿತ್ತು. ಶಾರ್ದೂಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದರು. ಆದರೆ ಕೊನೆಯ 4 ಎಸೆತಗಳಲ್ಲಿ ಎದುರಾಳಿಗೆ ರನ್ ಗಳಿಸಲು ಅವಕಾಶ ಕೊಡದ ದಯಾಳ್ ಆರ್ ಸಿಬಿಗೆ ಗೆಲುವು ತಂದುಕೊಟ್ಟರು.












Click it and Unblock the Notifications