IPL 2025 RCB: ಬೆಂಗಳೂರಿನಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳು
IPL 2025 RCB: ಐಪಿಎಲ್ 2025ರ 34ನೇ ಪಂದ್ಯದಲ್ಲಿ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸುಲಭವಾಗಿ ಸೋಲನುಭವಿಸಿದೆ. ಈ ಮೂಲಕ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಸೋತಿಗೆ. ಹಾಗಾದರೆ ನಿನ್ನೆಯ ಸೋಲಿಗೆ ಕಾರಣಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತವರು ಅಂಗಳವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವು ಸತತ ಮೂರು ಸೋಲನುಭವಿಸಿದೆ. ಮೊದಲು ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಸೋತಿತ್ತು. ಇದೀಗ ನಿನ್ನೆ (ಏಪ್ರಿಲ್ 18) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದೇ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಆರ್‌ಸಿಬಿ ಕೊನೆಗೂ 5 ವಿಕೆಟ್‌ಗಳಿಂದ ಸೋಲು ಕಂಡಿತು. ಈ ಆವೃತ್ತಿಯಲ್ಲಿ ಈ ಕ್ರೀಡಾಂಗಣದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಆರ್ಸಿಬಿ ಟಾಸ್ ಸಹ ಸೋತಿದೆ.

ಶುಕ್ರವಾರವಾದ್ರೂ ತವರಿನಲ್ಲಿ ಆರ್‌ಸಿಬಿ ಕಡೆ ಶುಕ್ರದೆಸೆ ತಿರುಗಲಿದ್ಯಾ ಎಂದು ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದರು. ಮಳೆ ಹಿನ್ನೆಲೆ ನಿನ್ನೆಯ ಪಂದ್ಯವನ್ನು 14 ಓವರ್‌ಗಳಿಗೆ ಕಡಿತಗೊಳಿಸಲಾಗೊತ್ತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 9 ವಿಕೆಟ್ ಕಳೆದುಕೊಂಡು95 ರನ್ ಕಲೆಹಾಕುವ ಮೂಲಕ ಪಂಜಾಬ್ ಕಿಂಗ್ಸ್‌ಗೆ 96 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು.
ಈ ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಕೇವಲ 12.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ ಸುಲಭವಾಗಿ ಗೆಲುವು ಸಾಧಿಸಿತು. ಈ ಮೂಲಕ ಆರ್‌ಸಿಬಿಯು ಬೇಡವಾದದ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ. ಹಾಗಾದ್ರೆ ಆರ್‌ಸಿಬಿ ಸೋಲಿಗೆ ಪ್ರಮುಖ ಮೂರು ಕಾರಣಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪಂಜಾಬ್ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣಗಳು
* ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಚೇಸ್ ಮಾಡುವ ತಂಡಗಳೇ ಗೆದ್ದಿರುವ ಉದಾಹರಣೆಗಳಿವೆ. ಇನ್ನು ನಿನ್ನೆ ಆರ್‌ಸಿಬಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಯಾಕೆಂದ್ರೆ, ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಈ ಪಿಚ್ ತುಂಬಾ ಕಷ್ಟಕರವಾಗಿರುತ್ತದೆ. ಅದರಲ್ಲೂ ಮಳೆಗಾಲದಲ್ಲಿ. ಇದು ಕೂಡ ಆರ್‌ಸಿಬಿ ಸೋಲಿಗೆ ಒಂದು ಕಾರಣ.
* ಮಳೆ ಅಡ್ಡಿ ಆಗಿದ್ದರಿಂದ ಆರ್‌ಸಿಬಿ ಬ್ಯಾಟರ್‌ಗಳಿಗೆ ಈ ಪಿಚ್ ತುಂಬಾ ಕಾಡಿತು. ಬರಬರುತ್ತಾ ಪಿಚ್ ಡ್ರೈ ಆಗಿದ್ದು, ಇದು ಪಂಜಾಬ್ ಬ್ಯಾಟರ್‌ಗಳಿಗೆ ತುಂಬಾ ಅನುಕೂಲವಾಯಿತು. ಆದರೂ ಕೂಡ ಆರ್‌ಸಿಬಿ ಪರ ಬೌಲರ್‌ಗಳು ಕೂಡ ತುಂಬಾ ಶ್ರಮ ಹಾಕಿ ಬೌಲಿಂಗ್ ಮಾಡಿದರೂ ವ್ಯರ್ಥವಾಯಿತು.
*ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪರಿಣಾಮ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲೇಬೇಕಾಯಿತು. ಮಳೆಯಿಂದ ಪಿಚ್ ಮೇಲೆ ಕೆಲ ಗಂಟೆಗಳ ಕಾಲ ತೇವಾಂಶ ಹೆಚ್ಚಾಗಿದ್ದು, ಇದು ಪಂಜಾಬ್ ಬೌಲರ್‌ಗಳಿಗೆ ನೆರವಾದಂತಾಯಿತು.
* ತೇವಾಂಶದಿಂದ ಕೂಡಿದ್ದ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ರನ್ ಕಲೆಹಾಕಲು ಪರದಾದರು. ಅಲ್ಲದೆ, ವಿಕೆಟ್‌ಗಳನ್ನು ಸರದಿಯಲ್ಲಿ ಕಳೆದುಕೊಂಡಿತು. ಈ ಹಿನ್ನೆಲೆ ಆರ್‌ಸಿಬಿ ಹೆಚ್ಚು ರನ್ ಗಳಿಸುವಲ್ಲಿ ಸಾಧ್ಯವಾಗಲಿಲ್ಲ. ಬೌನ್ಸರ್‌ಗಳನ್ನು ಹಾಕುವ ಪಂಜಾಬ್ ಬೌಲರ್‌ಗಳ ತಂತ್ರ ಕೆಸಲ ಮಾಡಿತು.
* ಅದರಲ್ಲೂ ಈ ಪಂದ್ಯದಲ್ಲಿ ಆರಂಭಿಕರಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ್ ತೋರಬೇಕಿದ್ದ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅವರು ಕೂಡ ಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ತೆರಳಿದರು. ಇದು ನಂತರ ಬಂದಂತಹ ಬ್ಯಾಟರ್‌ಗಳ ಮೇಲೆ ಹೆಚ್ಚು ಒತ್ತಡಕ್ಕೆ ಕಾರಣವಾಗಿದ್ದು, ಸರದಿಯಲ್ಲಿ ವಿಕೆಟ್ ಒಪ್ಪಿಸಿದರು. ಇದು ತಂಡವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿಬಿಟ್ಟಿತು.
* ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳಿತ್ತಾ ಸಾಗಿದ್ದ ಆರ್ಸಿಬಿಯು ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಆತಂಕ ಎದುರಾಗಿತ್ತು. ಆದರೆ, ಕೊನೆಗೆ ಅಬ್ಬರ ಬ್ಯಾಟಿಂಗ್ ಮಾಡುವ ಮೂಲಕ ಟೀಮ್ ಡೇವಿಡ್ 50 ರನ್‌ಗಳು ಅಂದರೆ ಅರ್ಧ ಶತನ ಸಿಡಿಸುವ ಮೂಲಕ ತಂಡದ ಮೊತ್ತವನ್ನು 95ಕ್ಕೆ ಮುಟ್ಟಿಸಿದರು. ಟೀಂ ಡೆವಿಡ್‌ಗೆ ಸಾಥ್ ಕೊಡುವವರು ಯಾರಾದರೂ ಇದ್ದಿದ್ದರೆ ತಂಡದ ಮೊತ್ತ 120 ದಾಟುವ ಸಾಧ್ಯತೆ ಇತ್ತು. ಆದರೆ ಅವರೊಬ್ಬರೇ ಏಕಾಂಗಿ ಹೋರಾಟ ಮಾಡಿ ಇಷ್ಟು ರನ್‌ಗಳನ್ನು ಕಲೆಹಾಕಿದರು. ಇದು ಪಂಜಾಬ್‌ಗೆ ಸಾಧಾರಣ ಮೊತ್ತವೆನಿಸಿತು.
* ಆರ್ಸಿಬಿ ಬ್ಯಾಟರ್‌ಗಳನ್ನು ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್‌ಗಳು ಕೂಡ ಕಾಡಿದರು. ಯುಜ್ವೇಂದ್ರ ಚಹಾಲ್ 3 ಓವರ್ ಗಳಲ್ಲಿ ಪ್ರಮುಖ ಎರಡು ವಿಕೆಟ್ ಪಡೆದು ಕೇವಲ 11 ರನ್ ಬಿಟ್ಟುಕೊಟ್ಟರೆ, ಹರ್‌ಪ್ರೀತ್ ಕೇವಲ 25 ನೀಡಿ 2 ವಿಕೆಟ್ ಗಳಿಸಿದ್ದರು. ಆದರೆ, ಆರ್‌ಸಿಬಿ ಪರ ಸ್ಪಿನ್ನರ್ಸ್ ಕೃನಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮಾ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯ ಆಗಲಿಲ್ಲ.
* ಅದರಲ್ಲೂ ಪಂಜಾಬ್ ಬ್ಯಾಟಿಂಗ್ ಮಾಡುವಾಗ ಆರ್‌ಸಿಬಿ ಬೌಲರ್‌ಗಳಾದ, ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಉತ್ತಮ ಬೌಲಿಂಗ್ ಪ್ರದರ್ಶನ್ ಮಾಡಿದರು. ಅಲ್ಲದೆ, ಪಂಜಾಬ್ ಬ್ಯಾಟರ್‌ಗಳಿಗೆ ಭಯವೂ ಶುರುವಾಗಿತ್ತು ಈ ನಡುವೆಯೇ ಸ್ಪಿನ್ನರ್‌ಳಾದ ಕೃನಾಲ್ ಪಾಂಡೆ, ಸುಯೇಶ್ ಶರ್ಮಾ ತುಂಬಾ ರನ್‌ಗಳನ್ನು ಬಿಟ್ಟುಕೊಟ್ಟರು.
* ಕೃನಾಲ್ ಪಾಂಡ್ಯ ಕೇವಲ ಒಂದು ಓವರ್‌ನಲ್ಲಿ 10 ರನ್ ನೀಡಿದರೆ, ಜೋಶ್ ಹ್ಯಾಜಲ್‌ವು ಮೂರು ಓವರ್ ಬೌಲಿಂಗ್ ಮಾಡಿದ ಕೇವಲ 14 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್ ಮೂರು ಓವರ್ ಮಾಡಿ 26 ರನ್‌ಗಳನ್ನು ಕೊಟ್ಟು 2 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಇನ್ನುಳಿದ ಸ್ಪಿನರ್‌ಗಳೇ ದುಬಾರಿ ರನ್‌ಗಳನ್ನು ನೀಡಿದರು. ಇವರು ಕೂಡ ಹೆಚ್ಚು ರನ್ ಕೊಡದೇ ವಿಕೆಟ್ ಕಬಳಿಸಿದರೆ, ಪಂದ್ಯದ ಚಿತ್ರಣವೇ ಬೇರೆ ಆಗುತ್ತಿತ್ತು.
ಐಪಿಎಲ್ 2025 ರಲ್ಲಿ ಆರ್‌ಸಿಬಿಯು ತವರು ಮೈದಾನವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ ಆಡಿದ ಮೂರು ಪಂದ್ಯಗಳಲ್ಲೂ ಸೋತಿದೆ. ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋಲನುಭವಿಸಿದೆ. ಈ ಆವೃತ್ತಿಲ್ಲಿ ಇದುವರೆಗೂ ಹೊರಗಡೆ ರಾಜ್ಯಗಳ ಮೈದಾನಗಳಲ್ಲಿ ಆಡಿರುವ ಪಂದ್ಯಗಳಲ್ಲಿ ಗೆದ್ದಿದೆ, ತವರಿನಲ್ಲಿ ಮೂರು ಪಂದ್ಯಗಳನ್ನು ಸೋತಿದೆ. ಈ ಮೂಲಕ ಆರ್‌ಸಿಬಿಗೆ ಈ ಪಿಚ್ ಶುಕ್ರದೆಸೆ ಅಲ್ಲ, ಬದಲಾಗಿ ವಕ್ರದೆಸೆ ಆಗಿದೆ ಎನ್ನುವಂತಾಗಿದೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
IPL 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಟಿಕೆಟ್ ಮಾರಾಟ ಶುರು; ಇಲ್ಲಿವೆ ಬುಕಿಂಗ್ ಮಾಡುವ ವಿಧಾನಗಳು -
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
IPL 2026: ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB Yash Dayal: ಐಪಿಎಲ್ 2026ರ ಸೀಸನ್ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್ಸಿಬಿ ಅಧಿಕೃತ ಮಾಹಿತಿ -
IPL 2026: ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
Nandini: ಆರ್ಸಿಬಿ ಜೊತೆ ರಾರಾಜಿಸಲಿದೆ ನಮ್ಮ ಹೆಮ್ಮೆಯ 'ನಂದಿನಿ': ಐಪಿಎಲ್-2026ರಲ್ಲಿ ಕನ್ನಡಿಗರಿಗೆ ಡಬಲ್ ಧಮಾಕಾ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications