RCB vs PBKS: ಐಪಿಎಲ್ 2025 ಟ್ರೋಫಿ ಗೆಲ್ಲಲು ಇವರೇ ಅರ್ಹರು: ರಾಜಮೌಳಿ
ಬೆಂಗಳೂರು, ಜೂನ್ 02: ಗುಜರಾತ್ ಟೈಟಾನ್ (GT) ತಂಡ ಸೋಲಿಸುವ ಮೂಲಕ ಪಂಜಾಬ್ ಕಿಂಗ್ಸ್ (BPKS) ಫೈನಲ್ ತಲುಪಿದೆ. IPL 2025 ಫೈನಲ್ ಪಂದ್ಯವನ್ನು ಪಂಜಾಬ್ ಕಿಂಗ್ಸ್ (BPKS) vs ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಜೂನ್ 03ರಂದು ಅಹಮದಾಬಾದ್ ನಲ್ಲಿ ಕ್ರಿಕೇಟ್ ಸ್ಟೇಡಿಯಂ ನಲ್ಲಿ ಆಡಲಿವೆ. ಈ ಎರಡು ತಂಡಗಳು ಬ್ಯಾಟರ್‌ಗಳು ಹಾಗೂ ಈ ಬಾರಿ ಯಾರು ಗೆಲ್ಲುತ್ತಾರೆ? ಎಂಬುದರ ಬಗ್ಗೆ ಪ್ಯಾನ್ ಇಂಡಿಯಾ ಖ್ಯಾತ ತೆಲುಗು ನಿರ್ದೇಶಕ ರಾಜಮೌಳಿ ಅವರು ಮಾತನಾಡಿದ್ದಾರೆ. IPL 2025ರ ಫಲಿತಾಂಶವು ಹೃದಯಘಾತ ನೀಡುವುದು ಖಂಡಿತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ 2025 ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ಪಂಜಾಬ್ ಕಿಂಗ್ಸ್ (BPKS) ನಾಯಕ ಶ್ರೇಯಸ್ ಅಯ್ಯರ್ ನಾಯಕತ್ವ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮತ್ತು ಟೀಮ್ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಕುರಿತು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

ಆರ್‌ಬಿಸಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು 18 ವರ್ಷದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರವಾಗಿ ಆಡುತ್ತಿದ್ದಾರೆ. ಈವರೆಗೂ ಒಮ್ಮೆಯು ಕಪ್ ಗೆದ್ದಿಲ್ಲ. ಇದೇ ಮೊದಲ ಬಾರಿಗೆ ಕಪ್ ಗೆಲ್ಲುವ ಇನ್ನಿಲ್ಲದ ವಿಶ್ವಾಸವನ್ನು ವಿರಾಟ್ ಕೊಹ್ಲಿ ಮಾತ್ರವಲ್ಲದೇ, ಇಡೀ ಆರ್‌ಸಿಬಿ ತಂಡಕ್ಕಿದೆ. ಅಲ್ಲದೇ ಕೋಟ್ಯಾನು ಕೋಟಿ ಅಭಿಮಾನಿಗಳಿಗೆ ಇದೆ. ಫೈನಲ್ ಪಂದ್ಯ ವೀಕ್ಷಿಸಲು ಕಾತರರಾಗಿದ್ದಾರೆ. ಇತ್ತ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಪಂಜಾಬ್ ತಂಡ ಸಹ ಈ ವರ್ಷ ಫೈನಲ್ ತಲುಪಿದ್ದು, ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.
ಈ ಐಪಿಎಲ್ ಪಂದ್ಯ 2025ರಲ್ಲಿ ಶ್ರೇಯಸ್ ಅಯ್ಯರ್ ಮಾತ್ರವಲ್ಲದೇ ವರ್ಷಗಳಿಂದಲೂ ಆರ್‌ಸಿಬಿಯಲ್ಲಿದ್ದುಕೊಂಡು ಸಾವಿರಾರು ರನ್ ಕಲೆ ಹಾಕಿರುವ ವಿರಾಟ್ ಕೊಹ್ಲಿ ಅವರು ಸೇರಿ ಇಬ್ಬರು ಐಪಿಎಲ್ ಟ್ರೋಫಿ ಗೆಲ್ಲಲು ಅರ್ಹರು ಎಂದು ರಾಜಮೌಳಿ ಹೇಳಿದ್ದಾರೆ. ಯಾರೇ ಗೆದ್ದರೂ ಈ ಬಾರಿಯ ಐಪಿಎಲ್ ಫಲಿತಾಂಶ ಹೃದಯಾಘಾತ ನೀಡುವುದಂತೂ ಸುಳ್ಳಲ್ಲ ಎಂದು ಇಬ್ಬರು ಬಗ್ಗೆ ಮೆಚ್ಚುಗೆ ಮಾತುಗಳನ್ನಾಗಿದ್ದಾರೆ.
Iyer guiding Bumrah’s and Boult’s yorkers to the third man boundary… Exquisite…
— rajamouli ss (@ssrajamouli) June 2, 2025
This man leads Delhi to a final… and is dropped…
Leads Kolkata to a trophy… dropped…
Leads a young Punjab to the finals after 11 years.
He deserves this year’s trophy too…
On the other hand,… pic.twitter.com/ws0anhcZ3l
ಇನ್ನು ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಈ ಹಿಂದೆ ದೆಹಲಿ ಕ್ಯಾಪಿಟಲ್ (DC) ತಂಡವನ್ನು ಫೈನಲ್ ತನಕ ತಂದಿದ್ದರು. ಅದಾಗಿ ಕಳೆದ ವರ್ಷ ಕೊಲ್ಕತ್ತ ನೈಟ್ ರೈಡರ್ಸ್ (KKR) ಕಪ್ ಗೆದ್ದಾಗ ಶ್ರೇಯಸ್ ಅಯ್ಯ ಕ್ಯಾಪ್ಟನ್ ಆಗಿದ್ದರು. ಹೀಗಿದ್ದರು ಸಹಿತ ಪ್ರಸಕ್ತ IPL 2025 ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಕೊಲ್ಕತ್ತ ನೈಟ್ ರೈಡರ್ಸ್ (KKR) ತಂಡವು ಅವರನ್ನು ಕೈ ಬಿಟ್ಟಿತು. ಅವರು ಹರಾಜಿನಲ್ಲಿ ಪಂಜಾಬ್ ತಂಡ ಸೇರಿದರು. ಅವರ ನಾಯತ್ಕತ್ವದಲ್ಲಿ ಇಂದು ಪಂಜಾಬ್ ಫೈನಲ್ ಬಂದು ತಲುಪುವಂತೆ ಮಾಡಿದ್ದಾರೆ ಶ್ರೇಯಸ್ ಅಯ್ಯರ್ ಕುರಿತು ರಾಜಮೌಳಿ ಮಾತನಾಡಿದ್ದಾರೆ.
ಬುಮ್ರಾ ಮತ್ತು ಬೌಲ್ಟ್ ಅವರ ಯಾರ್ಕರ್‌ಗಳನ್ನು ಥರ್ಡ್ ಮ್ಯಾನ್ ಬೌಂಡರಿಗಟ್ಟುವ ಶ್ರೇಯಸ್ ಅಯ್ಯರ್ ಅವರ ಸಾಮರ್ಥ್ಯ ಅದ್ಭುತ ಎಂದು ಪಂಜಾಬ್ ಕಿಂಗ್ಸ್ ನಾಯಕನನ್ನು ಹಾಡಿ ಹೊಗಳಿದ್ದಾರೆ. ವರ್ಷದಿಂದ ವರ್ಷಕ್ಕೆ ಉತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಇವರಿಬ್ಬರು ಈ ಬಾರಿಯ ಟ್ರೋಫಿ ಗೆಲ್ಲಲು ಅರ್ಹರು ಎಂದರು.












Click it and Unblock the Notifications