RCB Vs PBKS Final Match: ಟ್ಯಾಬ್‌ನಲ್ಲೇ ಆರ್‌ಸಿಬಿ ಫೈನಲ್ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

RCB Vs PBKS: ಐಪಿಎಲ್‌ 2025 ಹೈ ವೋಲ್ಟೇಜ್‌ ಫೈನಲ್‌ ಪಂದ್ಯ ಆರ್‌ಸಿಬಿ-ಪಂಜಾಬ್‌ ಕಿಂಗ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆ ಸಿದ್ದರಾಯಮಯ್ಯ ಕಾರಿನಲ್ಲೇ ಕುಳಿತು ಟ್ಯಾಬ್‌ನಲ್ಲಿ ವೀಕ್ಷಣೆ ಮಾಡಿ ಗಮನ ಸೆಳದಿದ್ದಾರೆ.

ಐಪಿಎಲ್‌ 2025ರ ಪಂಜಾಬ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವಿನ ಹೈವೋಲ್ಟೇಜ್‌ ಫೈನಲ್‌ ಪಂದ್ಯವನ್ನು ಸಿಎಂ ಸಿದ್ದರಾಮಯ್ಯ ಅವರು ಟ್ಯಾಬ್‌ನಲ್ಲೇ ವೀಕ್ಷಣೆ ಮಾಡಿ ಗಮನ ಸೆಳೆದಿದ್ದಾರೆ.

RCB Vs PBKS Final CM Siddaramaiah Watches RCB Final Match on Tablet

ಸಿಎಂ ಸಿದ್ದರಾಮಯ್ಯ ಅವರು ಗದಗ ಜಿಲ್ಲಾ ಪ್ರವಾಸ ಮುಗಿಸಿ ಬರುತ್ತಿದ್ದಂತೆ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಟ್ಯಾಬ್‌ನಲ್ಲೇ ಐಪಿಎಲ್‌ ಫೈನಲ್ ಪಂದ್ಯ ವೀಕ್ಷಿಸಿದರು. ಈಗಾಗಲೇ ಈ ಹಿಂದೆ ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ಇದ್ದಾಗಲೂ ಸ್ಟೇಡಿಯಂನಲ್ಲೇ ಪಂದ್ಯ ವೀಕ್ಷಣೆ ಮಾಡಿದ್ದರು.

ಲಕ್ಕುಂಡಿಯಲ್ಲಿ ಐತಿಹಾಸಿಕ ಪ್ರಾಚ್ಯಾವಶೇಷಗಳ ಉತ್ಖನನಕ್ಕೆ ಚಾಲನೆ ನೀಡಿದ್ದ ಸಂದರ್ಭದಲ್ಲಿ ಆರ್‌ಸಿಬಿಗೆ ಶುಭಹಾರೈಸಿದ್ದರು. ಆರ್‌ಸಿಬಿ 3ನೆ ಬಾರಿಗೆ ಫೈನಲ್‌ಗೆ ಬಂದಿದೆ. ಈ ಬಾರಿ ಗೆಲ್ಲಲಿ ಎಂದು ಹಾರೈಸುತ್ತೇನೆ. ಗೆದ್ದರೆ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದ್ದರು. ಇಂದು ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 190 ರನ್‌ ಕಲೆಹಾಕಿ ಪಂಜಾಬ್‌ಗೆ 191 ರನ್‌ಗಳ ಗುರಿ ನೀಡಿದರು.

ಫಿಲ್‌ ಸಾಲ್ಟ್‌ 16, ವಿರಾಟ್‌ ಕೊಹ್ಲಿ 43, ಮಯಾಂಕ್‌ ಅಗರ್ವಾಲ್‌ 24, ರಜತ್‌ ಪಾಟೀದಾರ್‌ 26, ಲಿಯಾಮ್‌ ಲಿವಿಂಗ್‌ಸ್ಟೋನ್‌ 25, ಜಿತೇಶ್‌ ಶರ್ಮಾ 24, ರೊಮಾರಿಯೋ ಶೆಫರ್ಡ್‌ 17 ರನ್‌ ಕಲೆ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+