RCB: ಆರ್‌ಸಿಬಿ ಆಟಗಾರನಿಗೆ ಏನಾಗಿತ್ತು? ಕ್ರಿಕೆಟ್ ಬಿಡುವ ನಿರ್ಧಾರ ಮಾಡಿದ್ಯಾಕೆ?

ಆರ್‌ಸಿಬಿ ಅಂದ್ರೆ ಅಭಿಮಾನಿಗಳಿಗೆ ಅದೊಂದು ಟೀಂ ಅಲ್ಲ..ಅದೊಂದು ಎಮೋಷನ್. 18 ವರ್ಷಗಳಿಂದ ಕಪ್ ಗೆಲ್ಲದೇ ಇದ್ದರೂ ನೂರಾರು ಪ್ಲೇಯರ್ಸ್ ಚೇಂಜ್ ಆದರೂ ಆ ಟೀಂ ಮೇಲಿರುವ ಅಭಿಮಾನ ಮಾತ್ರ ಯಾವತ್ತೂ ಕೂಡಾ ಕಡಿಮೆ ಆಗಿಲ್ಲ. ಇಂದಿಗೂ ಆರ್‌ಸಿಬಿ ಅಭಿಮಾನಿಗಳಿಗೆ ಲಾಯಲ್ ಫ್ಯಾನ್ಸ್‌ ಅಂತಾನೇ ಸೋಷಿಯಲ್ ಮಿಡಿಯಾಗಳಲ್ಲಿ ಕರೆಯಲಾಗುತ್ತದೆ.

ಇಂತಹ ಆರ್‌ಸಿಬಿ ಫ್ಯಾನ್ಸ್ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಎಬಿಡಿ, ರಾಸ್ ಟೇಲರ್, ರಾಬಿನ್ ಉತ್ತಪ್ಪಾ, ಜಾಕ್ ಕಾಲಿಸ್, ಕ್ರಿಸ್ ಗೇಲ್, ಗ್ಲೆನ್ ಮ್ಯಾಕ್ಸ್‌ವೆಲ್ ಅಷ್ಟೇ ಅಲ್ಲದೇ ಇನ್ನೂ ಹಲವಾರು ಆಟಗಾರರನ್ನು ಆರಾಧಿಸಿದ್ದಾರೆ. ಇವರನ್ನು ಕೇವಲ ತಂಡದ ಆಟಗಾರರಷ್ಟೇ ಅಲ್ಲದೇ ತಮ್ಮ ಮನೆ ಮಂದಿಯಂತೆ ಭಾವಿಸಿ ಇವರ ಆಟವನ್ನು ಸಂಭ್ರಮಿಸಿದ್ದಾರೆ.

RCB vs DC Devdutt Padikkal Return to RCB After Health Challenges

ಬೇರೆ ರಾಜ್ಯದ, ದೇಶದ ಆಟಗಾರರನ್ನೇ ಭುಜದ ಮೇಲೆ ಕೂರಿಸಿ ಮೆರೆಸುವ ಆರ್‌ಸಿಬಿ ಫ್ಯಾನ್ಸ್ ಇನ್ನು ನಮ್ಮ ಕರ್ನಾಟಕದ ಆಟಗಾರರ ಅಂದ್ರೆ ಕೇಳಬೇಕಾ ತಲೆಮೇಲೆ ಕೂರಿಸಿ ಮೆರೆಸಿ ಬಿಡುತ್ತಾರೆ ಅದಕ್ಕೆ ತುಂಬಾ ಉದಾಹರಣೆಗಳಿವೆ. ಈ ಹಿಂದೆ ಆರ್‌ಸಿಬಿಯಲ್ಲೇ ಮಿಂಚಿ ಈಗ ಮತ್ತೆ ಆರ್‌ಸಿಬಿಗೆ ಮರಳಿರುವ ನಮ್ಮ ಬೆಂಗಳೂರಿನ ಹುಡುಗ ದೇವದತ್ ಪಡಿಕ್ಕಲ್ ಬಗ್ಗೆ ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ.

ಮೂಲತಃ ಕೇರಳವೇ ಆದರೂ ಚಿಕ್ಕವಯಸ್ಸಿನಿಂದ ಬೆಂಗಳೂರಿನಲ್ಲೇ ನೆಲೆಸಿ ಬೆಂಗಳೂರಿಗನೇ ಆಗಿ ಬೆಳೆದ ದೇವದತ್ ಪಡಿಕ್ಕಲ್ ಚಿಕ್ಕವಯಸ್ಸಿನಿಂದಲೂ ಆರ್‌ಸಿಬಿ ಫ್ಯಾನ್.. ಎಲ್‌ಎಸ್‌ಜಿ ತಂಡದಿಂದ ಮರಳಿ ಆರ್‌ಸಿಬಿಗೆ ಬಂದಿರುವ ಖುಷಿಯಲ್ಲಿ ಆರ್‌ಸಿಬಿ ಅಫಿಷಿಯಲ್ ಯೂಟ್ಯೂಬ್ ಚಾನೆಲ್‌ಗೆ ಮಾತನಾಡುತ್ತಾ ಹಲವಾರು ವಿಷಯಗಳನ್ನ ಬಿಚ್ಚಿಟ್ಟಿದ್ದಾರೆ..ಆದರಲ್ಲಿ ಅವರ ಗೆಲುವು..ಸೋಲು ಆರೋಗ್ಯದ ಬಗ್ಗೆಯೂ ಮಾತನಾಡುತ್ತಾ ಅವರ ಅನಾರೋಗ್ಯದ ಬಗ್ಗೆ ತಿಳಿಸಿದ್ದಾರೆ.

RCB vs DC Devdutt Padikkal Return to RCB After Health Challenges

2020ರ ಐಪಿಎಲ್‌ನಲ್ಲಿ RCB ಪರ ಸ್ಫೋಟಕ ಬ್ಯಾಟಿಂಗ್ ಮಾಡಿ ಇಡೀ ದೇಶದ ಮನೆ ಮಾತಾಗಿದ್ದರು.. ಆರ್‌ಸಿಬಿ ಫ್ಯಾನ್‌ಳಿಗಂತೂ ಹಬ್ಬದೂಟವನ್ನೇ ನೀಡಿದ್ದರು. ನಂತರ ಐಪಿಎಲ್ ಬಿಡ್ಡಿಂಗ್ ನಿಯಮಾವಳಿಗಳ ಪ್ರಕಾರ ಹಲವಾರು ಬೇರೆ ಬೇರೆ ತಂಡಗಳಲ್ಲಿ ಆಡಬೇಕಾಯಿತು. ಈ ಮಧ್ಯೆ 2022ರಲ್ಲಿ ಪಡಿಕ್ಕಲ್‌ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ವೈದ್ಯರ ಬಳಿ ಪರೀಕ್ಷಿಸಿದಾಗ ಅವರಿಗೆ ಅಲ್ಸೈಟಿಸಿ ಕೊಲೈಟಿಸ್ ಎಂಬ ಆರೋಗ್ಯ ಸಮಸ್ಯೆ ಇರುವುದು ತಿಳಿದು ಬರುತ್ತದೆ.

Take a Poll

ಈ ಆರೋಗ್ಯ ಸಮಸ್ಯೆ ಏನು ಅಂದರೆ ಕರುಳಿನ ಮೇಲೆ ಅಲ್ಸರ್ ಆಗೋದು. ಸಾಮಾನ್ಯವಾಗಿ ನಮ್ಮ ದೇಹಕ್ಕೆ ಯಾವುದೋ ಬ್ಯಾಕ್ಟೀರಿಯಾ ಪ್ರವೇಶ ಮಾಡುವ ಮೂಲಕ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಕೇಳೋದಕ್ಕೆ ಸಾಮಾನ್ಯ ಎನಿಸಿದರೂ ಕ್ರೀಡಾಪಟುವಾಗಿ ಈ ಸಮಸ್ಯೆಯಿಂದ ಪಡಿಕ್ಕಲ್ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಯಾವಾಗಲೂ ಆಯಾಸ ಕಾಡುತ್ತಿತ್ತು. ಕೇವಲ ಎರಡೇ ತಿಂಗಳಲ್ಲಿ 10-12 ಕೆಜಿ ತೂಕ ಇಳಿಕೆಯಾಗಿ ಹೋಗಿತ್ತು ಅಷ್ಟೇ ಅಲ್ಲ.. ಪ್ರಾಣಕ್ಕೆ ಪ್ರಾಣ ಆಗಿದ್ದ ಕ್ರಿಕೆಟ್ ಆಡೋದನ್ನೇ 3-4 ತಿಂಗಳು ಬಿಡಬೇಕಾಯಿತು. ಈ ನಿರ್ಧಾರ ನನ್ನ ಜೀವನದಲ್ಲೇ ಜೀರ್ಣಿಸಿಕೊಳ್ಳಲಾಗದ ನಿರ್ಧಾರ ಎಂದು ದೇವದತ್ ಪಡಿಕ್ಕಲ್ ತಮ್ಮ ಜೀವನದ ಕಹಿ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

RCB vs DC Devdutt Padikkal Return to RCB After Health Challenges

ಅದೃಷ್ಟವಶಾತ್ ಸದ್ಯ ಈ ಎಲ್ಲಾ ಸಮಸ್ಯೆಗಳಿಂದ ಗುಣಮುಖವಾಗಿ ದೇವದತ್ ಪಡಿಕ್ಕಲ್ ಮತ್ತೆ ಆರ್‌ಸಿಬಿಗೆ ಮರಳಿದ್ದಾರೆ. ಫಾರ್ಮ್‌ನಲ್ಲಿ ಇಲ್ಲ ಎನ್ನುವ ಟೀಕೆಗಳಿದ್ದರೂ ಮೊನ್ನೆ ಮುಂಬೈ ವಿರುದ್ಧ ಪಂದ್ಯದಲ್ಲಿ ಆಡಿದ ಪರಿ ನೋಡಿದರೆ ಟೀಕೆಗಳಿಗೆ ಸವಾಲೊಡ್ಡಿ ನಿಂತತೆ ಕಾಣುತ್ತಿತ್ತು. 2020ರಲ್ಲಿ ಮಿಂಚಿದ ಡಿಡಿಪಿ ಮತ್ತೆ ಸೆಟೆದು ನಿಂತ ಬಾಹುಬಲಿಯಂತೆ ಪಂದ್ಯದಲ್ಲಿ ಪ್ರದರ್ಶನ ತೋರಿದರು. ಇಂದು ಕೂಡ ಆರ್‌ಸಿಬಿ ಪಂದ್ಯವಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಸಂಜೆ ಬೆಂಗಳೂರಲ್ಲಿ ಆರ್‌ಸಿಬಿ ಗರ್ಜಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+