RCB: ಇಷ್ಟು ಆಟಗಾರರು ಆರ್‌ಸಿಬಿಯಿಂದ ಔಟ್!
RCB Team: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು 17 ವರ್ಷದ ಬಳಿಕ ಮೊದಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಅಂದು ಬರೀ ಕರ್ನಾಟಕ ಅಷ್ಟೇ ಅಲ್ಲದೆ, ದೇಶವೇ ಸಂಭ್ರಮಾಚರಣೆಯಲ್ಲಿ ಮಿಂದೆದಿತ್ತು. ಆದರೆ ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಆಯೋಜಿಸಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನಪ್ಪಿದ್ದರು. ಈ ದುರಂತ ಗೆಲುವಿನ ಖಷಿಯನ್ನೇ ಕಿತ್ತುಕೊಂಡುಬಿಟ್ಟಿತ್ತು.
ಕಾಲ್ತುಳಿತ ದುರಂತದ ಬೆನ್ನಲ್ಲೇ ಆರ್‌ಸಿಬಿ ಪ್ರಾಂಚೈಸಿಯನ್ನು ಮಾರಾಟ ಮಾಡಲಾಗುತ್ತದೆ ಹಾಗೂ ಬ್ಯಾನ್ ಆಗುತ್ತದೆ ಎನ್ನುವ ಸುಳ್ಳು ಸುದ್ದಿಗಳು ಹಬ್ಬಿದ್ದವು. ಇದರ ಬೆನ್ನಲ್ಲೇ ಇದೀಗ ಮುಂದಿನ ಸೀಸನ್ ಅಂದರೆ 19ನೇ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕೆಲವು ಆಟಗಾರರನ್ನು ಕೈಬಿಡಲಾಗುತ್ತದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಾದ್ರೆ ಅವರು ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ..

2025ನೇ ಆವೃತ್ತಿಯಲ್ಲಿ ಆರಂಭದಿಂದಲೂ ಕೊನೆವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಈ ಮೂಲಕ ಬಲಿಷ್ಠ ತಂಡಗಳನ್ನೇ ಬಗ್ಗುಬಡಿದು ಕೊನೆಗೆ ಫೈನಲ್‌ನಲ್ಲೂ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಚಾಂಪಿಯನ್ಸ್ ಪಟ್ಟ ಏರಿದೆ. 17 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಆರ್‌ಸಿಬಿ ಅಭಿಮಾನಿಗಳು ಮುಳುಗಿಹೋಗಿಬಿಟ್ಟಿದ್ದರು.
ಆದರೆ, ಟ್ರೋಫಿ ಗೆದ್ದು ಮಾರನೇ ದಿನ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ವಿಜಯೋತ್ಸವದ ಸಂಭ್ರಮವನ್ನು ಕಿತ್ತುಕೊಂಡುಬಿಟ್ಟಿತ್ತು. ಇದು ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತುಂಬಾ ಬದಲಾವಣೆಗಳಾದವು. ಅಲ್ಲದೆ, ಈ ವಿಚಾರ ಬಿಸಿಸಿಐವರೆಗೂ ಕೂಡ ತಲುಪಿದ್ದು, ಮುಂದೆ ಇಂತಹ ಘಟನೆಗಳು ಸಂಭವಿದಂತೆ ವಿಜಯಯಾತ್ರೆಗಳಿಗೆ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ತಿಳಿಸಿತ್ತು.
ಇನ್ನೂ ಇದೀಗ ಮುಂದಿನ ಬಾರಿ ಅಂದರೆ 2026ನೇ ಐಪಿಎಲ್‌ನಲ್ಲಿ ಆರ್‌ಸಿಬಿಯಿಂದ ಕೆಲ ಆಟಗಾರರನ್ನು ಹೊರಕಳಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಯಾಕಂದ್ರೆ ಪ್ರತಿ ಬಾರಿಯೂ ಗೊಂದಲದಲ್ಲಿ ಇರುತ್ತಿದ್ದ ತಂಡಕ್ಕೆ ಈ ಬಾರಿ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಹೇಗೆ ಅಂತೀರಾ.. ಈ ಬಾರಿ ಬ್ಯಾಟಿಂಗ್, ಬೌಲಿಂಗ್ ಲೈನ್ ಅಪ್ ಉತ್ತಮವಾಗಿದೆ. ಯಾರನ್ನು ಯಾವ ಸ್ಥಾನದಲ್ಲಿ ಆಡಿಸಿದರೆ ಉತ್ತಮ ಎನ್ನುವ ಐಡಿಯಾ ಕೂಡ ಸಿಕ್ಕಿದೆ. ಅಂದುಕೊಂಡಿದ್ದಕ್ಕಿಂತ ಉತ್ತಮ ಆಟಗಾರರನ್ನೇ ಹೊಂದಿದ್ದು, ಕೆಲ ಆಟಗಾರರನ್ನು ಕೈಬಿಡುವ ಚಿಂತನೆ ನಡೆಸಿದೆಯಂತೆ.
ಆರ್‌ಸಿಬಿಯಿಂದ ಹೊರಬೀಳಿರುವ ಆಟಗಾರರ ಪಟ್ಟಿ
* ಲಿಯಾಮ್ ಲಿವಿಂಗ್ಸ್ಟೋನ್
* ಅಭಿನಂದನ್ ಸಿಂಗ್
* ರಾಸಿಖ್ ಸಲಾಂ ದಾರ್
* ಮೋಹಿತ್ ರಾಥಿ
* ಬ್ಲೆಸ್ಸಿಂಗ್ ಮುಜರಬಾನಿ
* ಟಿಮ್ ಸೀಫರ್ಟ್
ಐಪಿಎಲ್ 2025ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 22 ಆಟಗಾರರು ಇದ್ದರು. ಇವರಲ್ಲಿ 16 ಆಟಗಾರರು ಮುಂದಿನ ಸೀಸನ್‌ನಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಯಾಕಂದ್ರೆ ಈ ಬಾರಿ ಆರ್‌ಸಿಬಿ ಪರ ಅಂಗಳಕ್ಕಿಳಿದ ಬಹುತೇಕ ಆಟಗಾರರು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದವರಾಗಿದ್ದಾರೆ. ಆದ್ದರಿಂದ ಮಿನಿ ಹರಾಜಿಗೂ ಮುನ್ನ ಕೆಲವೇ ಕೆಲವು ಆಟಗಾರರನ್ನು ಮಾತ್ರ ಹೊರಕಳಿಸಲಿದೆ ಎಂದು ತಿಳಿದುಬಂದಿದೆ.
ಐಪಿಎಲ್ ಸೀಸನ್ 18ನೇ ಸೀನಸ್‌ನಲ್ಲಿ ಚಾಂಪಿಯನ್ಸ್ ಆಟ ಆರ್‌ಸಿಬಿಯು ಮುಂದಿನ ಸೀಸನ್ಗೂ ಮುನ್ನ ಕೆಲ ಆಟಗಾರರನ್ನು ಕೈಬಿಡುವುದು ಖಚಿತವೇಂದೇ ಹೇಳಲಾಗುತ್ತಿದೆ. ಅದರಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಿನಿ ಹರಾಜಿಗೂ ಮುನ್ನ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದ ಹೇಳಲಾಗುತ್ತಿದೆ.
* 18ನೇ ಸೀಸನ್‌ನಲ್ಲಿ ಆರ್‌ಸಿಬಿ ಪರ ಆಲ್ರೌಂಡರ್ ಆಗಿ ಕಾಣಿಸಿಕೊಂಡ ಲಿಯಾಮ್ ಲಿವಿಂಗ್ಸ್ಟೋನ್ ಅವರು 10 ಪಂದ್ಯಗಳಲ್ಲಿ ಕಣಕ್ಕಿಳಿದು ಕಲೆಹಾಕಿರುವುದು ಕೇವಲ 54 ರನ್ಗಳು ಮಾತ್ರ. ಹಾಗೆಯೇ 5 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು 2 ವಿಕೆಟ್‌ಗಳನ್ನು ಮಾತ್ರ ಕಿತ್ತಿದ್ದಾರೆ. ಆದ್ದರಿಂದ ಅವರನ್ನು ಹೊರಹಾಕುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
* ಅಭಿನಂದನ್ ಸಿಂಗ್ ಆರ್‌ಸಿಬಿ ಪರ ಈ ಬಾರಿ ಒಂದೇ ಒಂದು ಪಂದ್ಯ ಆಡಿಲ್ಲ. ಅದರಲ್ಲೂ ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಕಾಣಿಸಿಕೊಂಡಿರಲಿಲ್ಲ. ಆದ್ದರಿಂದ ಅವರನ್ನು ಸಹ ಮುಂಬರುವ ಸೀಸನ್ನನಲ್ಲಿ ಕೈಬಿಡುವ ನಿರ್ಧಾರ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
* ಯುವ ವೇಗಿ ರಾಸಿಖ್ ಸಲಾಂ ದಾರ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ 6 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ ಈ ಬಾರಿ ಕಣಕ್ಕಿಳಿದ 2 ಪಂದ್ಯಗಳಲ್ಲಿ ರಾಸಿಖ್ ಕಡೆಯಿಂದ ಹೇಳಿಕೊಳ್ಳುವಷ್ಟು ಪ್ರದರ್ಶನ ಕಂಡುಬರಲಿಲಿಲ್ಲ. ಮತ್ತೊಂದೆಡೆ ಅವರು ಮಾಡಿದ ಬೌಲಿಂಗ್‌ನಲ್ಲಿ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ. ಆದ್ದರಿಂದ ಮುಂದಿನ ಬಾರಿಯಿಂದ ಇವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ.
* ಆರ್‌ಸಿಬಿ ತಂಡದಲ್ಲಿರುವ ಯುವ ಆಲ್ರೌಂಡರ್ ಮೋಹಿತ್ ರಾಥಿ ಸಹ ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಕಣದಲ್ಲಿ ಕಾಣಿಸಿಕೊಂಡಿಲ್ಲ. ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಮೋಹಿತ್ಗೆ ಸ್ಥಾನ ಲಭಿಸಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಆದ್ದರಿಂದ ಅವರನ್ನು ಸಹ ತಂಡದಿಂದ ಕೈ ಬಿಡಲಿದ್ದಾರೆ ಎನ್ನುವ ಮಾಹಿತಿ ಇದೆ.
* ಐಪಿಎಲ್ನ ಕೊನೆಯ ಎರಡು ಪಂದ್ಯಗಳ ವೇಳೆ ಆರ್‌ಸಿಬಿ ತಂಡದಲ್ಲಿ ಕಾಣಿಸಿಕೊಂಡ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿಯನ್ನು ಸಹ ತಂಡದಿಂದ ಕೈಬಿಡಲಿದ್ದಾರೆ. ಯಾಕೆಂದರೆ ಮುಝರಬಾನಿ ಅವರನ್ನು ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಆದ್ದರಿಂದ ಆಯ್ಕೆಯಾದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ.
* ಸ್ಫೋಟಕ ಬ್ಯಾಟರ್ ಜೇಕಬ್ ಬೆಥೆಲ್ ತವರು ಇಂಗ್ಲೆಂಡ್‌ಗೆ ಮರಳಿದ ಹಿನ್ನೆಲೆ ನ್ಯೂಜಿಲೆಂಡ್ನ ವಿ.ಕೀ. ಟಿಮ್ ಸಿಫರ್ಟ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆಯಾಗಿರುವಅವರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ. ಹೀಗೆ ಮುಂಬರುವ ಐಪಿಎಎಲ್ ಸೀಸನ್‌ನಿಂದ ಈ ಆಟಗಾರರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಆರ್‌ಸಿಬಿಗೆ ಉತ್ತಮ ಆಟಗಾರರು ಸಿಕ್ಕಾಂತಾಗಿದೆ.











Click it and Unblock the Notifications