RCB Vs SRH: ಎಸ್‌ಆರ್‌ಎಚ್ ವಿರುದ್ಧ ಆರ್‌ಸಿಬಿಗೆ ಮತ್ತೆ ಮಾರಕ ಬೌಲರ್ ಎಂಟ್ರಿ ಸಾಧ್ಯತೆ
IPL 2025 RCB Vs SRH: ಐಪಿಎಲ್ 2025ರ 65ನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಲು ಮುಖಾಮುಖಿ ಆಗಲಿದೆ. ಈಗಾಗಲೇ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಾರಕ ಬೌಲರ್ ಜೋಶ್ ಹೇಜಲ್‌ವುಡ್ ಮತ್ತೆ ಮರಳಿದ್ದಾರಾ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.
ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಐಪಿಎಲ್ 2025 ಟೂರ್ನಿಯನ್ನು ಪ್ರಾಂಚೈಸಿಗಳ ಮನವಿ ಮೇರೆಗೆ ಬಿಸಿಸಿಐ ರದ್ದುಪಡಿಸಿ ಒಂದು ವಾಕ್ಕೆ ಮುಂದೂಡಿಕೆ ಮಾಡಿತ್ತು. ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿ ಸುಧಾರಿಸಿದ ಬಳಿಕ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಅದರಂತೆಯೇ ಮೇ 17ರಿಂದ ಮತ್ತೆ ಐಪಿಎಲ್ ಟೂರ್ನಿ ಆರಂಭವಾಗಿದೆ.

ಐಪಿಎಲ್‌ನಲ್ಲಿ ಬರೀ ದೇಶ ಅಷ್ಟೇ ಅಲ್ಲದೇ ವಿದೇಶಿ ಆಟಗಾರರು ಸಹ ಇದ್ದರು. ಅವರ ರಕ್ಷಣೆ ಭಾರತದ ಮೇಲಿತ್ತು. ಆದ್ದರಿಂದ ಟೂರ್ನಿ ರದ್ದಾದ ಬಳಿಕ ವಿದೇಶಿ ಆಟಗಾರರನ್ನು ಅವರವರ ದೇಶಗಳಿಗೆ ಕಳುಹಿಸಿಕೊಡಲಾಗಿತ್ತು. ಈ ವೇಳೆ ಹೇಜಲ್‌ವುಡ್ ಸಹ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದರು. ಇದೀಗ ಐಪಿಎಲ್ ಆರಂಭವಾದ ಹಿನ್ನೆಲೆ ಮತ್ತೆ ವಿದೇಶದ ಆಟಗಾರರನ್ನು ವಾಪಾಸ್ ಕರೆಸಿಕೊಳ್ಳಲಾಗಿದೆ.
ಮೊದಲ ಪಂದ್ಯವನ್ನು ಆರ್‌ಸಿಬಿಯು ತವರು ಮೈದಾನ ಬೆಂಗಳೂರಿನಲ್ಲಿ ಎಲ್‌ಎಸ್‌ಜಿ ತಂಡವನ್ನು ಎದುರಿಸಬೇಕಿತ್ತು. ಆದರೆ, ಭಾರೀ ಮಳೆ ಮುಂದುವರೆದ ಕಾರಣ ಪಂದ್ಯ ರದ್ದಾಗಿದ್ದು, ಎರಡು ತಂಡಗಳಿಗೆ ತಲಾ ಒಂದೊಂದು ಅಂಕ ನೀಲಡಾಗಿತ್ತು. ಮುಂದಿನ ಪಂದ್ಯವನ್ನು ಮೇ 23ರಂದು ಕೂಡ ತವರು ಮೈದಾನದಲ್ಲೇ ಎಸ್‌ಆರ್‌ಎಚ್ ವಿರುದ್ಧ ನಡೆಯಬೇಕಿತ್ತು. ಅಂದು ಕೂಡ ಮಳೆ ಮುನ್ಸೂಚನೆ ಇರುವ ಕಾರಣ ಪಂದ್ಯವನ್ನು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿದೆ.
ಈಗಾಗಲೇ ಹೇಜಲ್‌ವುಡ್ ಸಹ ವಾಪಾಸ್ ಮರಳಿದ್ದಾರೆ ಎನ್ನುವ ಮಾಹಿತಿ ಇದೆ. ಭುಜದ ನೋವು ಹಿನ್ನೆಲೆ ಕಳೆಡೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಆದರೆ, ಮುಂದಿನ ಎಆರ್‌ಎಚ್ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆರ್‌ಸಿಬಿ ಸಹ ಅವರು ಯಾವಾಗ ಮತ್ತೆ ಮರಳಿದ್ದಾರೆ ಎಂದು ಕಾಯುತ್ತಿದೆ.
ಇದುವರೆಗೂ ಜೋಶ್ ಹ್ಯಾಜಲ್‌ವುಡ್ ಅವರು 18 ವಿಕೆಟ್ ಕಬಳಿಸಿದ್ದಾರೆ. ನಾಲ್ಕೂ ವಿಕೆಟ್ ಕಬಳಿಸಿದ್ರೆ, ಪರ್ಪಲ್ ಕ್ಯಾಪ್ ಪಡೆಯಲಿದ್ದಾರೆ. ಇದು ಕೂಡ ಸಾಧ್ಯವಾಗುತ್ತಿತ್ತು. ಅದೂ ಅವರು ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದರಿಂದ ಇದು ಸಾಧ್ಯವಾಗಿಲ್ಲ. ಮುಂದಿನ ಪಂದ್ಯಗಳಿಗೆ ಎಂಟ್ರಿ ಕೊಟ್ಟರೆ, ಪರ್ಪಲ್ ಕ್ಯಾಪ್ ಕಬಳಿಸಬಹುದು ಎಂದು ಹೇಳಲಾಗುತ್ತಿದೆ.
ಐಪಿಎಲ್ 2025ನೇ ಆವೃತ್ತಿ ಆರಂಭದಿಂದಲೂ ಆರ್‌ಸಿಬಿ ಬ್ಯಾಟಿಂಗ್ ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಈ ಮೂಲಕ ಪ್ಲೇ ಆಫ್ ಸ್ಥಾನ ಪಡೆದುಕೊಂಡಿದೆ. ಇನ್ನೂ ಕಳೆದೆರಡು ಪಂದ್ಯಗಳಿಂದ ಹೊರಗಡೆ ಉಳಿದಿದ್ದ ಆರ್‌ಸಿಬಿ ಮಾರಕ ಬೌಲರ್ ಜೋಶ್ ಹೇಜಲ್‌ವುಡ್ ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರ್‌ಸಿಬಿ ಮೇ 23ರಂದು ಎಸ್‌ಆರ್‌ಎಚ್ ಮತ್ತು ಮೇ 27ರಂದು ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ ಸೆಣಸಲಿದೆ. ಈಗಾಗಲೇ ಭುಜದ ನೋವಿನಿಂದ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿರುವ ಹೇಜಲ್‌ವುಡ್ ಮತ್ತೆ ತಂಡಕ್ಕೆ ಮರಳಲು ಸಿದ್ಧರಾಗಿದ್ದು, ನೆಟ್ಸ್‌ನಲ್ಲಿ ಬೌಲಿಂಗ್ ಆರಂಭ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಮೇ 23ರಂದು ನಡೆಯಲಿರುವ ಎಸ್‌ಆರ್‌ಎಚ್ ವಿರುದ್ಧದ ಪಂದ್ಯಕ್ಕೆ ಲಭ್ಯ ಇರುವುದಿಲ್ಲ. ಆದರೆ ಪ್ಲೇ ಆಫ್ ಪಂದ್ಯಗಳಿಗೂ ಮೊದಲು ಆರ್‌ಸಿಬಿ ಗೂಡು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೂ ಅವರು ಸರಾಸರಿ 17.27ರಲ್ಲಿ 18 ವಿಕೆಟ್‌ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಮತ್ತೊಂದೆಡೆ ಪ್ಲೇ ಆಫ್ ಪಂದ್ಯಕ್ಕೂ ಮುನ್ನ ಜೇಕಬ್ ಬೆಥೆಲ್, ಫಿಲ್ ಸಾಲ್ಟ್ ಮತ್ತು ಎನ್‌ಗಿಡಿ ತಂಡ ತೊರೆಯಲಿದ್ದಾರೆ. ಹೇಜಲ್‌ವುಡ್ ಆರ್‌ಸಿಬಿ ಗೂಡು ಸೇರಲಿದ್ದಾರೆ ಎನ್ನುವ ಮಾಹಿತಿ ಇದೆ. ಇದು ಒಂಥರಾ ಸಿಹಿಕಹಿ ಅಂತಲೇ ಹೇಳಬಹುದು.












Click it and Unblock the Notifications