₹171,32,83,84,000 ಆರ್‌ಸಿಬಿ ಮಾರಾಟ: ಸ್ಪಷ್ಟನೆ ನೀಡಿದ ಮ್ಯಾನೇಜ್‌ಮೆಂಟ್, ಏನದು?
ಆರ್‌ಸಿಬಿ ತಂಡವನ್ನು ಮಾರಾಟ ಮಾಡುವ ಬಗ್ಗೆ ದೊಡ್ಡ ಸುದ್ದಿ ಹೊರ ಬಿದ್ದಿದೆ. ಕಂಪನಿಯನ್ನು ಮಾರಾಟ ಮಾಡುವ ಬಗ್ಗೆ ಮಂಗಳವಾರ ದೊಡ್ಡ ಚರ್ಚೆ ಆಗಿತ್ತು. ಆದರೆ ಈಗ ಆರ್‌ಸಿಬಿ ಮ್ಯಾನೇಜ್ಮೆಂಟ್ ಈ ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದೆ. ಹಾಗಿದ್ದರೆ ಆರ್‌ಸಿಬಿ ತಂಡವನ್ನು ನಿಜವಾಗಿಯೂ ಮಾರಕಟ್ಟೆ ಇಡಲಾಗಿದೆಯಾ ಎಂಬ ಬಗ್ಗೆ ಕಂಪನ ಹೇಳಿದ್ದೇನು ಎಂಬ ಬಗ್ಗೆ ವರದಿ ಇಲ್ಲಿದೆ.
18ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆರ್‌ಸಿಬಿ ತಂಡ ಮಾರಾಟಕ್ಕಿದೆ ಎಂಬ ಸುದ್ದಿ ವ್ಯಾಪಕವಾಗಿ ಸದ್ದು ಮಾಡಿತ್ತು. ಅಲ್ಲದೆ ಡಿಯಾಜಿಯೊ ಕಂಪನಿ ಆರ್‌ಸಿಬಿ ತಂಡವನ್ನು 2 ಬಿಲಿಯನ್ ಯುಎಸ್ ಡಾಲರ್‌ಗೆ ಮಾರಕಟ್ಟಿರುವುದಾಗ ವರದಿಗಳು ಆಗಿದ್ದವು. ಅಂದರೆ 18ನ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡವನ್ನು ₹171,328,384,000 ಖರೀದಿಗೆ ಇದ್ದು ಸುದ್ದಿ ಸದ್ದು ಮಾಡಿತ್ತು. ಅಲ್ಲದೆ ಈ ತಂಡವನ್ನು ಯಾರೆಲ್ಲಾ ತೆಗೆದುಕೊಳ್ಳಬಹುದು ಎಂಬ ಬಗ್ಗೆಯೂ ಚರ್ಚೆಗಳು ನಡೆದಿದ್ದವು.ಆದರೆ ಈ ಎಲ್ಲ ಬೆಳವಣಿಗೆಗಳ ಮಧ್ಯದಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್ ದೊಡ್ಡ ಬಾಂಬ್ ಸಿಡಿಸಿದೆ.

ಇಂಗ್ಲೆಂಡ ಮೂಲದ ಡಿಯಾಜಿಯೊ ಪಿಎಲ್‌ಸಿಯ ಭಾರತೀಯ ಶಾಖೆ ಈ ಬಗ್ಗೆ ಸ್ಪಷ್ಟನೇ ನೀಡಿದೆ. ಇನ್ನು ಆರ್‌ಸಿಬಿ ತಂಡವನ್ನು ಮಾರಾಟ ಮಾಡುವ ಸುದ್ದಿಯನ್ನು ಕಂಪನಿ ತಳ್ಳಿ ಹಾಕಿದೆ. ಮಂಗಳವಾರ (ಜೂನ್ 10) ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಬರೆದ ಪತ್ರದಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಆರ್‌ಸಿಬಿ ತಂಡವನ್ನು ಮಾರಾಟ ಮಾಡುವು ವರದಿಗಳು ಮಾಧ್ಯಮ ಊಹಾಪೋಹ ಎಂದು ಅಧಿಕಾರಿಯೊಬ್ಬರು ಬಿಎಸ್‌ಇ ಹೇಳಿದ್ದಾರೆ.
ಆರ್‌ಸಿಬಿ ತಂಡವನ್ನು ಮಾರಾಟ ಮಾಡುವ ಯೋಜನೆಯನ್ನು ಕಂಪನಿ ಹೊಂದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಕ್ರಿಕ್‌ಬಜ್ ಪ್ರಕಾರ, ಕಂಪನಿಯ ಕಾರ್ಯದರ್ಶಿ ಮಿತ್ತಲ್ ಸಾಂಘ್ವಿ ಭಾರತೀಯ ಷೇರು ಮಾರುಕಟ್ಟೆಯ ನಿಯಂತ್ರಕಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಆರ್‌ಸಿಬಿ ಮಾರಾಟ ಮಾಡುವ ಬಗ್ಗೆ ಯಾವುದ ಚರ್ಚೆಗಳ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಕಂಪನಿಯ ಈ ಹೇಳಿಕೆ ಈ ತಂಡವನ್ನು ಕೊಳ್ಳುವ ಕನಸು ಕಾಣುತ್ತಿದ್ದ ಅದೆಷ್ಟೋ ಉದ್ಯಮಿಗಳ ಆಸೆಗೆ ಪೆಟ್ಟು ನೀಡಿದಂತೆ ಆಗಿದೆ.
ಕಾಲ್ತುಳಿತ ತಂದ ಮುಜುಗುರ
ಆರ್‌ಸಿಬಿ ಅಹಮದಾಬಾದ್‌ನಲ್ಲಿ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟಿತ್ತು. ವಿಶ್ವದ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್ ತಂಡ ಎಂಬ ಹೆಗ್ಗಳಿಕೆ ಹೊಂದಿದ್ದ ಆರ್‌ಸಿಬಿ, 17 ವರ್ಷದ ಬಳಿಕ ಅಭಿಮಾನಿಗಳ ಆಸೆಯನ್ನು ಈಡೇರಿಸಿದೆ. ಇನ್ನು ತಂಡದ ವಿಜಯೋತ್ಸವದ ಸಂಭ್ರಮಾಚರಣೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ಚಾಂಪಿಯನ್ ತಂಡಕ್ಕೆ ಗೌರವ ಸಲ್ಲಿಸಲು ಆರ್‌ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರ ಸಾವಿಗೆ ಕಾರಣವಾಗಿತ್ತು. ಈ ಘಟನೆ ಆರ್‌ಸಿಬಿಗೆ ಕಪ್ಪು ಚುಕ್ಕೆ ಎಂತೆ ಕಂಡಿದೆ. ಹೀಗಾಗಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಮುಜುಗರ ತಪ್ಪಿಸಿಕೊಳ್ಳಲು ಮಾರಾಟ ಮಾಡುವ ತೀರ್ಮಾನವನ್ನು ಕೈ ಗೊಂಡಿತ್ತು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಈ ಎಲ್ಲ ಸುದ್ದಿಗಳಿಗೆ ಬ್ರೇಕ್ ಬಿದ್ದಿದೆ.












Click it and Unblock the Notifications