RCB vs MI: ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳ ಅಬ್ಬರ; ಸಿಟ್ಟಿಗೆದ್ದ ನೀತಾ ಅಂಬಾನಿ ಮಾಡಿದ್ದೇನು?

ಸೋಮವಾರ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ. 10 ವರ್ಷಗಳ ಬಳಿಕ ಆರ್ ಸಿಬಿ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ. ಮುಂಬೈನಲ್ಲಿ ಪಂದ್ಯ ನಡೆದರೂ ಆರ್ ಸಿಬಿಗೆ ಸಿಕ್ಕ ಬೆಂಬಲ ಮಾತ್ರ ಎದುರಾಳಿ ತಂಡದ ಆಟಗಾರರನ್ನು ದಂಗಾಗಿಸಿದೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್‌ ಮಾಡಲು ಬರುತ್ತಿದ್ದಂತೆ ಅಭಿಮಾನಿಗಳ ಅಬ್ಬರ ಜೋರಾಗಿತ್ತು. ಬೌಂಡರಿ, ಸಿಕ್ಸರ್ ಬಾರಿಸಿದಾಗಲೆಕ್ಕಾ ಇಡೀ ಮೈದಾನದಲ್ಲಿ ಆರ್ ಸಿಬಿ ಆರ್ ಸಿಬಿ ಎಂದು ಅಬ್ಬರಿಸಿದರು. ಇದನ್ನು ನೋಡಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಶಾಕ್ ಆಗಿದ್ದರು. ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಆರ್ ಸಿಬಿ ತಂಡಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಬೆಂಬಲ ಸಿಕ್ಕಿದೆ.

rcb fans roars wankhede stadium mumbai indians nita ambani left stadium ipl 2025

ಸಿಟ್ಟಿಗೆದ್ದ ನೀತಾ ಅಂಬಾನಿ

ವಾಂಖೆಡೆ ಕ್ರೀಡಾಂಗಣದಲ್ಲಿ ಆರ್ ಸಿಬಿ ಅಭಿಮಾನಿಗಳ ಅಬ್ಬರ ಕಂಡು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲಕಿ ನೀತಾ ಅಂಬಾನಿ ಪೆಚ್ಚಾದರು. ಒಂದು ಹಂತದಲ್ಲಿ ಸಿಟ್ಟಾದ ಅವರು ಮೈದಾನದಿಂದಲೇ ಹೊರಗಡೆ ಹೋಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ಗಳು ಔಟಾದಾಗ ಕೂಡ ಆರ್ ಸಿಬಿ ಅಭಿಮಾನಿಗಳ ಕೂಗು ಮೈದಾನದಲ್ಲಿ ಪ್ರತಿಧ್ವನಿಸಿತ್ತು.

2025ರ ಐಪಿಎಲ್‌ನಲ್ಲಿ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಕೊನೆಯ ಓವರ್ ವರೆಗೂ ಗೆಲುವು ಯಾರಿಗೆ ಎನ್ನುವ ಕುತೂಹಲ ಮನೆ ಮಾಡಿತ್ತು. ಕೊನೆಯ ಮೂರು ಓವರ್ ಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್ ಮತ್ತು ಕೃನಾಲ್ ಪಾಂಡ್ಯ ಆರ್ ಸಿಬಿ ಗೆಲ್ಲುವಂತೆ ನೋಡಿಕೊಂಡರು.

ಫಿಲ್ ಸಾಲ್ಟ್ 2ರನ್ ಗಳಿಸಿ ಮೊದಲ ಓವರ್ ನಲ್ಲೇ ಔಟಾದರೂ, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. ಪಡಿಕ್ಕಲ್ 22 ಎಸೆತಗಳಲ್ಲಿ 37 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 67 ರನ್ ಗಳಿಸುವ ಮೂಲಕ ಉತ್ತಮ ಜೊತೆಯಾಟ ಆಡಿದರು. ನಾಯಕ ರಜತ್ ಪಟಿದಾರ್ 32 ಎಸೆತಗಳಲ್ಲಿ 64 ರನ್ ಸಿಡಿಸುವ ಮೂಲಕ ಮಧ್ಯಮ ಓವರ್ ಗಳಲ್ಲಿ ರನ್ ರೇಟ್ ಕಡಿಮೆಯಾಗದಂತೆ ನೋಡಿಕೊಂಡರು. ಅಂತಿಮ ಓವರ್ ಗಳಲ್ಲಿ ಅಬ್ಬರಿಸಿದ ಜಿತೇಶ್ ಶರ್ಮಾ ಕೇವಲ 19 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 40 ರನ್ ಗಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+