00001 ರನ್, ಊಟಕ್ಕೆ ಇಲ್ಲದ ಉಪ್ಪಿನಕಾಯಿ ಈ ಬಾಡಿ ಬಿಲ್ಡರ್... ರೊಚ್ಚಿಗೆದ್ದ ಆರ್‌ಸಿಬಿ ಅಭಿಮಾನಿಗಳು! Tim David
232 ರನ್... ಅಂದಹಾಗೆ ನಿನ್ನೆ ಬೆಂಗಳೂರು ತಂಡ ಆರ್‌ಸಿಬಿ ಇಷ್ಟು ರನ್ ಬಾರಿಸಿದ್ದರೆ ಅದು ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಅಳಿಸಲು ಆಗದೇ ಇರುವ ರೀತಿ ಉಳಿದು ಬಿಡುತ್ತಿತ್ತು. ಆದರೆ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ದಿಟ್ಟ ಹೋರಾಟವನ್ನೇ ಪ್ರದರ್ಶನ ಮಾಡುತ್ತಾ ಸೋತು ಹೋಯಿತು... ಹೀಗಿದ್ದಾಗಲೇ, 00001 ರನ್, ಊಟಕ್ಕೆ ಇಲ್ಲದ ಉಪ್ಪಿನಕಾಯಿ ಈ ಬಾಡಿ ಬಿಲ್ಡರ್... ರೊಚ್ಚಿಗೆದ್ದ ಆರ್‌ಸಿಬಿ ಅಭಿಮಾನಿಗಳು!
ಬೆಂಗಳೂರು ತಂಡ ಆರ್‌ಸಿಬಿಗೆ ಇರುವಷ್ಟು ಅಭಿಮಾನಿಗಳು ಫುಟ್‌ಬಾಲ್ ತಂಡಗಳಿಗೆ ಕೂಡ ಇಲ್ಲ ಎನ್ನಬಹುದು. ಯಾಕಂದ್ರೆ ನಮ್ಮ ಆರ್‌ಸಿಬಿ ಅಂದ್ರೆ ಜೀವ ಬಿಡುತ್ತಾರೆ ಕೋಟಿ ಕೋಟಿ ಅಭಿಮಾನಿಗಳು. ಹೀಗಿದ್ದರೂ ನಮ್ಮ ಆರ್‌ಸಿಬಿ ತಂಡ ಒಂದೇ ಒಂದು ಬಾರಿ ಕೂಡ ಐಪಿಎಲ್ ಕಪ್ ಗೆದ್ದಿಲ್ಲ, ಈಗ ಅದೆಲ್ಲಾ ಚೇಂಜ್ ಆಗುತ್ತೆ 18 ವರ್ಷಗಳ ವನವಾಸ ಮುಕ್ತಾಯ ಆಗಲಿದೆ ಅಂತಾನೇ ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿದ್ದರು. ಇಂತಹ ಸಮಯದಲ್ಲೇ ಭೀಕರ ಆಘಾತ ಎದುರಾಗಿದೆ!

00001 ರನ್, ಊಟಕ್ಕೆ ಇಲ್ಲದ ಉಪ್ಪಿನಕಾಯಿ!
ಹೌದು, ಬೆಂಗಳೂರು ತಂಡ ಆರ್‌ಸಿಬಿ ನಿನ್ನೆ ಒಂದೇ ಒಂದು ಮ್ಯಾಚ್ ಸೋತು ಹೋಯಿತು ಅಂತಾ ಯಾಕೆ ಎಲ್ಲರೂ ಬೇಜಾರ್ ಅಲ್ಲಿ ಇದ್ದಾರೆ? ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರುತ್ತೆ ಬಿಡಿ... ಅಷ್ಟಕ್ಕೂ ನಿನ್ನೆಯ ಮ್ಯಾಚ್ ಸೋತ ನಂತರ ಬೆಂಗಳೂರು ತಂಡ ಆರ್‌ಸಿಬಿ 3ನೇ ಸ್ಥಾನಕ್ಕೆ ಕುಸಿದು ಬಿದ್ದಿದೆ. ಇದು ಅಭಿಮಾನಿಗಳ ಎದೆಯಲ್ಲಿ ಬೆಂಕಿ ಹೊತ್ತಿಸಿದ್ದು, ಭಯದ ವಾತಾವರಣವೇ ಈಗ ಸೃಷ್ಟಿ ಆಗಿಬಿಟ್ಟಿದೆ. ಹೀಗಿದ್ದಾಗಲೇ, 00001 ರನ್, ಊಟಕ್ಕೆ ಇಲ್ಲದ ಉಪ್ಪಿನಕಾಯಿ ಈ ಬಾಡಿ ಬಿಲ್ಡರ್... ರೊಚ್ಚಿಗೆದ್ದ ಆರ್‌ಸಿಬಿ ಅಭಿಮಾನಿಗಳು!
ಆರ್‌ಸಿಬಿ ಅಭಿಮಾನಿಗಳ ಆಕ್ರೋಶ!
ಹೈದರಾಬಾದ್ ವಿರುದ್ಧ ನಿನ್ನೆ ಆರ್‌ಸಿಬಿ ತಂಡ ಸುಲಭವಾಗಿ ಗೆಲ್ಲುವ ಅವಕಾಶವನ್ನ ಕಿಂಗ್ ವಿರಾಟ್ ಕೊಹ್ಲಿ & ಫಿಲ್ ಸಾಲ್ಟ್ ಸೃಷ್ಟಿ ಮಾಡಿದ್ದರು. ಹೀಗಿದ್ದಾಗ ನಂತರ ಬಂದ ಆರ್‌ಸಿಬಿ ತಂಡದ ಬೇರೆ ಆಟಗಾರರು ಸರಿಯಾಗಿ ಆಟ ಆಡಿದ್ದರೆ ಸುಲಭವಾಗಿ ಗೆದ್ದು ಬೀಗಬಹುದಿತ್ತು. ನಿನ್ನೆ ಆರ್‌ಸಿಬಿ ತಂಡ ಗೆದ್ದು ಬೀಗಿದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲೇ ಮುಂದುವರಿಯುವ ಅವಕಾಶ ಇತ್ತು. ಹೀಗಿದ್ದಾಗ ಕೆಲವು ಆಟಗಾರರು ಮಾಡಿದ ಎಡವಟ್ಟು ಬಗ್ಗೆ ಇದೀಗ ಆಕ್ರೋಶದ ರಣಕಹಳೆ ಮೊಳಗಿದೆ.
ಯೆಸ್, ಮಯಾಂಕ್ ಅಗರ್ವಾಲ್ ಕೇವಲ 11 ರನ್, ರಜತ್ ಪಾಟಿದಾರ್ 18 ರನ್ ಹಾಗೂ ಜಿತೇಶ್ ಶರ್ಮಾ ಕೇವಲ 24 ರನ್ ಬಾರಿಸಿ ಆರ್‌ಸಿಬಿ ತಂಡಕ್ಕೆ ನೆರವು ನೀಡಲೇ ಇಲ್ಲ. ಈ ಎಲ್ಲರಿಗಿಂತ ದೊಡ್ಡ ವೇಸ್ಟ್ ಅಂದ್ರೆ ರೋಮಾರಿಯೋ ಶೆಫರ್ಡ್ 1 ಬಾಲ್ ಆಡಿ 0 ರನ್ ಸುತ್ತಿ ಹೋಗಿದ್ದು ಹಾಗೂ ಟಿಮ್ ಡೇವಿಡ್ ಕೇವಲ 1 ರನ್‌ಗೆ ಔಟ್ ಆಗಿ ಹೋಗಿದ್ದು ಅಂತಿದ್ದಾರೆ ಆರ್‌ಸಿಬಿ ಅಭಿಮಾನಿಗಳು. ಅಲ್ಲದೆ ಆರ್‌ಸಿಬಿ ತಂಡ ಸೋಲು ಕಾಣಲು ಇದೇ ರೋಮಾರಿಯೋ ಶೆಫರ್ಡ್ & ಟಿಮ್ ಡೇವಿಡ್ ಕಾರಣ ಅಂತಾ, ಈ ಇಬ್ಬರೂ ಆಟಗಾರರ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.












Click it and Unblock the Notifications