Devdutt Padikkal: ಭರ್ಜರಿ ಶತಕ ಸಿಡಿಸಿದ ಆರ್‌ಸಿಬಿ ಬ್ಯಾಟರ್ ದೇವದತ್ ಪಡಿಕ್ಕಲ್

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯದಲ್ಲಿ ಆಡಿ ಬಳಿಕ ಬೆಂಚ್ ಕಾದಿದ್ದ ಕರ್ನಾಟಕದ ಆಟಗಾರ ದೇವದತ್ ಪಡಿಕ್ಕಲ್ ಈಗ ರಾಜ್ಯ ತಂಡಕ್ಕೆ ಮರಳಿದ್ದಾರೆ. ಶನಿವಾರ ನಡೆದ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಡಿಕ್ಕಲ್ ಭರ್ಜರಿ ಶತಕ ಸಿಡಿಸುವ ಮೂಲಕ ರಾಜ್ಯ ತಂಡಕ್ಕೆ ನೆರವಾಗಿದ್ದಾರೆ.

ಶನಿವಾರ ನಡೆದ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬರೋಡಾ ವಿರುದ್ಧ ಶತಕ ಬಾರಿಸಿ ಗಮನ ಸೆಳೆದರು. ಟಾಸ್ ಗೆದ್ದ ಬರೋಡಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 281 ರನ್ ಕಲೆಹಾಕಿತು.

rcb batter devdutt padikkal scores century in vijay hazare trophy

ದೇವದತ್ ಪಡಿಕ್ಕಲ್ 99 ಎಸೆತಗಳಲ್ಲಿ 15 ಬೌಂಡರಿ 2 ಸಿಕ್ಸರ್ ಸಹಿತ 102 ರನ್ ಗಳಿಸಿ ತಂಡದ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಅನೀಶ್ ಕೆವಿ 52 ರನ್ ಗಳಿಸುವ ಮೂಲಕ ಪಡಿಕ್ಕಲ್‌ಗೆ ಬೆಂಬಲ ನೀಡಿದರು. ಸ್ಮರಣ್ ರವಿಚಂದ್ರನ್ 28 ರನ್, ಕೆ ಶ್ರೀಜಿತ್ 28 ರನ್ ಮತ್ತು ಅಭಿನವ್ ಮನೋಹರ್ 21 ರನ್ ಗಳಿಸಿ ತಂಡಕ್ಕೆ ನೆರವಾದರು.

ಸೆಮಿಫೈನಲ್‌ಗೆ ಕರ್ನಾಟಕ

ದೇವದತ್ ಪಡಿಕ್ಕಲ್‌ರ ಶತಕ ಮತ್ತು ಬೌಲರ್ ಗಳ ಉತ್ತಮ ಪ್ರದರ್ಶನದ ನೆರವಿನಿಂದ ಕರ್ನಾಟಕ ಬರೋಡಾ ವಿರುದ್ಧ 5 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಕ್ವಾರ್ಟರ್ ಫೈನಲ್ ಗೆದ್ದಿರುವ ಕರ್ನಾಟಕ ಸೆಮಿಫೈನಲ್ ಮತ್ತು ಫೈನಲ್‌ ಎನ್ನುವ ಎರಡು ಮಹತ್ವದ ಮೆಟ್ಟಿಲು ದಾಟಿದರೆ ಈ ಬಾರಿಯ ಪ್ರಶಸ್ತಿ ಗೆಲ್ಲಬಹುದಾಗಿದೆ.

ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ ತಂಡಕ್ಕೆ ಮರಳಿರುವುದು ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಕ್ಕೆ ಬಲ ತಂದುಕೊಟ್ಟಿದೆ. ಸೆಮಿಫೈನಲ್‌ನಲ್ಲಿ ರಾಜ್ಯದ ಎದುರಾಳಿ ಎನ್ನುವುದು ಭಾನುವಾರ (ಇಂದು) ತಿಳಿಯಲಿದೆ.

ಪಡಿಕ್ಕಲ್ ಶತಕ ಆರ್‌ಸಿಬಿ ಫ್ಯಾನ್ಸ್ ಖುಷಿ

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಬಳಿಕ ನೇರವಾಗಿ ಕರ್ನಾಟಕ ತಂಡ ಸೇರಿಕೊಂಡ ದೇವದತ್ ಪಡಿಕ್ಕಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲೇ ಶತಕ ಗಳಿಸಿ ತಂಡಕ್ಕೆ ನೆರವಾದರು. ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ನೋಡಿದ ಆರ್ ಸಿಬಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

2025ರ ಮೆಗಾ ಹರಾಜಿನಲ್ಲಿ ದೆವದತ್ ಪಡಿಕ್ಕಲ್ ಆರ್ ಸಿಬಿ ತಂಡ ಸೇರಿಕೊಂಡಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಪಡಿಕ್ಕಲ್ ಆರ್ ಸಿಬಿ ಬ್ಯಾಟಿಂಗ್‌ಗೆ ಬಲ ತುಂಬುತ್ತಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಈಗ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಅವರ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+