RCB: ಆರ್‌ಸಿಬಿಗೆ ಬಿಗ್ ಶಾಕ್! ಐಪಿಎಲ್‌ನಿಂದ ಹೊರಬಿದ್ದ ಪಡಿಕ್ಕಲ್ ಮತ್ತೊಬ್ಬ ಕನ್ನಡಿಗನಿಗೆ ಅವಕಾಶ
ಐಪಿಎಲ್ 2025 ರ ಪ್ಲೇಆಫ್‌ಗಳ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಉತ್ತಮ ಪ್ರದರ್ಶನ ನೀಡುತ್ತಿದ್ದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಮಂಡಿರಜ್ಜು ಗಾಯದಿಂದ ಪಂದ್ಯಾವಳಿಯಿಂದಲೇ ಹೊರಗುಳಿದಿದ್ದಾರೆ. ದೇವದತ್ ಪಡಿಕ್ಕಲ್ ಹೊರಬಿದ್ದ ಬಳಿಕ ಬದಲೀ ಆಟಗಾರನನ್ನು ಆರ್ ಸಿಬಿ ಆಯ್ಕೆ ಮಾಡಿದ್ದು ಮತ್ತೊಬ್ಬ ಕರ್ನಾಟಕದ ಅನುಭವಿ ಆಟಗಾರನಿಗೆ ಮಣೆ ಹಾಕಿದೆ.
ಗಾಯಗೊಂಡ ಪಡಿಕ್ಕಲ್ ಅವರ ಬದಲಾಗಿ ಮಯಾಂಕ್ ಅಗರ್ವಾಲ್ ತಂಡವನ್ನು ಸೇರಿಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ತಮ್ಮ ಮೊದಲ ಐಪಿಎಲ್ ಫ್ರಾಂಚೈಸಿಗೆ ಮರಳಿದ್ದಾರೆ. ದೇವದತ್ ಪಡಿಕ್ಕಲ್ ಅವರ ಐಪಿಎಲ್ 22025 ಅಭಿಯಾನವು ಮಂಡಿರಜ್ಜು ಗಾಯದಿಂದ ಮೊಟಕುಗೊಂಡಿದೆ. ಎಡಗೈ ಬ್ಯಾಟರ್ ಈ ಋತುವಿನಲ್ಲಿ ಫ್ರಾಂಚೈಸ್‌ಗಾಗಿ ಉತ್ತಮ ಫಾರ್ಮ್‌ನಲ್ಲಿದ್ದರು. ವಿರಾಟ್ ಕೊಹ್ಲಿ ಅವರೊಂದಿಗೆ ಉತ್ತಮ ಜೊತೆಯಾಟ ಆಡುವ ಮೂಲಕ ಹಲವು ಪಂದ್ಯಗಳಲ್ಲಿ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.

2025ರ ಆವೃತ್ತಿಯಲ್ಲಿ ದೇವದತ್ ಪಡಿಕ್ಕಲ್ ಆರ್ ಸಿಬಿ ತಂಡದ ಎರಡನೇ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿದ್ದರು. 10 ಪಂದ್ಯಗಳಲ್ಲಿ 150.60 ಸ್ಟ್ರೈಕ್‌ರೇಟ್‌ನಲ್ಲಿ 247 ರನ್ ಗಳಿಸಿದ್ದಾರೆ. ಆರ್‌ಸಿಬಿಯ ಬ್ಯಾಟಿಂಗ್ ಕ್ರಮಾಂಕಕ್ಕೆ ಅವರು ಎಡಗೈ ಬ್ಯಾಟ್ಸ್‌ಮನ್ ಆಗಿ ಸೇರ್ಪಡೆಗೊಂಡಿದ್ದರು.
ಮಯಾಂಕ್ ಅಗರ್ವಾಲ್ ಐಪಿಎಲ್‌ನಲ್ಲಿ ಎರಡನೇ ಬಾರಿಗೆ ಅವಕಾಶ ಪಡೆದಿದ್ದಾರೆ. ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಕೇವಲ 4 ಪಂದ್ಯಗಳಲ್ಲಿ 64 ರನ್ ಗಳಿಸಿದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಐಪಿಎಲ್ 2025 ರ ಹರಾಜಿನಲ್ಲಿ ಯಾವ ತಂಡವೂ ಅವರನ್ನು ಖರೀದಿ ಮಾಡಲು ಆಸಕ್ತಿ ತೋರಿಸಿರಲಿಲ್ಲ. ಈಗ ಅವರನ್ನು ಆರ್‌ಸಿಬಿ 1 ಕೋಟಿ ರೂಪಾಯಿಗೆ ಖರೀದಿಸಿದೆ.
ಮಯಾಂಕ್ ಅಗರ್ವಾಲ್ ಆರ್‌ಸಿಬಿಯೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಐಪಿಎಲ್‌ನಲ್ಲಿ 127 ಪಂದ್ಯಗಳನ್ನು ಆಡಿರುವ ಅವರು 2661 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು ಮತ್ತು ಎಸ್‌ಆರ್‌ಹೆಚ್, ದೆಹಲಿ ಕ್ಯಾಪಿಟಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡಕ್ಕಾಗಿಯೂ ಆಡಿದ್ದಾರೆ. ಕಳೆದ 3 ಆವೃತ್ತಿಯಲ್ಲಿ ಅವರು ರನ್ ಗಳಿಸಲು ಪರದಾಡಿದ ಕಾರಣ ತಂಡದಲ್ಲಿ ಐಪಿಎಲ್‌ನಲ್ಲಿ ಅವಕಾಶ ಕಳೆದುಕೊಂಡಿದ್ದರು.
ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ
ಮಯಾಂಕ್ ಅಗರ್ವಾಲ್ ಈ ವರ್ಷ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ 7 ಪಂದ್ಯಗಳನ್ನು ಆಡಿರುವ ಅವರು 152.99 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಚಾಂಪಿಯನ್ ಮಾಡಿದ ನಾಯಕರಾಗಿದ್ದ ಅವರು, ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಕರುಣ್ ನಾಯರ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. 93 ಸರಾಸರಿಯಲ್ಲಿ 4 ಶತಕಗಳು ಮತ್ತು 107.60 ಸ್ಟ್ರೈಕ್ ರೇಟ್‌ನೊಂದಿಗೆ 651 ರನ್ ಗಳಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರು ಅಪಾರ ಅನುಭವ ಹೊಂದಿದ್ದು ಮುಂದಿನ ಎರಡು ಮಹತ್ವದ ಪಂದ್ಯಗಳಲ್ಲಿ ಅಗರ್ವಾಲ್ ಆರ್ ಸಿಬಿಯ ಬ್ಯಾಟಿಂಗ್‌ಗೆ ಬಲ ತುಂಬಬಲ್ಲರು.












Click it and Unblock the Notifications