• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಆಲ್‌ರೌಂಡರ್‌ ಭಾರತ ಟಿ20 ತಂಡದ ಮುಂದಿನ ನಾಯಕನಾಗಬೇಕು: ರವಿಶಾಸ್ತ್ರಿ ಹೇಳಿದ್ದು ಯಾರ ಬಗ್ಗೆ?

|
Google Oneindia Kannada News

ವಿಶ್ವಕಪ್​ನಲ್ಲಿ ಅಘಾತಕಾರಿ ಸೋಲು ಕಂಡ ಹೊರಬಿದ್ದಿರುವ ಭಾರತ ತಂಡ ಹೊಸತನದೊಂದಿಗೆ ಕಿವೀಸ್‌ ಪ್ರವಾಸ ಕೈಗೊಂಡಿದೆ. ವಿಶ್ವಕಪ್‌ನಲ್ಲಿ ಉತ್ತಮ ಆರಂಭ ಪಡೆದರೂ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಸೋಲು ಕಂಡಿತ್ತು. ಈ ಸೋಲಿನ ಬಳಿಕ ತಂಡದಲ್ಲಿನ ಬದಲಾವಣೆ ಬಗ್ಗೆ ಹಲವು ದಿಗ್ಗಜರು ಸಲಹೆ ನೀಡುತ್ತಿದ್ದು, ಭಾರತ ಟಿ20 ತಂಡಕ್ಕೆ ಪ್ರತ್ಯೇಕ ನಾಯಕನನ್ನು ಆಯ್ಕೆ ಮಾಡಬೇಕೆಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಟಿ20 ತಂಡ ಸೀನಿಯರ್ ಆಟಗಾರರಿಲ್ಲದೆ, ನ್ಯೂಜಿಲ್ಯಾಂಡ್‌ ಪ್ರವಾಸ ಕೈಗೊಂಡಿದೆ. ಇದರಿಂದ ಸಂಜು ಸಾಮ್ಸನ್‌, ಉಮ್ರಾನ್ ಮಲಿಕ್ , ಇಶಾನ್ ಕಿಶನ್‌ ಅಂತಹ ಆಟಗಾರರಿಗೆ ಅವಕಾಶ ಸಿಕ್ಕಿದೆ. ಕಿವೀಸ್‌ ನೆಲದಲ್ಲಿ ನಡೆಯುವ ವೈಟ್‌ಬಾಲ್ ಸರಣಿಯಲ್ಲಿ ಟಿ20 ತಂಡವನ್ನು ಹಾರ್ದಿಕ್ ಪಾಂಡ್ಯ ಹಾಗೂ ಏಕದಿನ ತಂಡವನ್ನು ಶಿಖರ್ ಧವನ್‌ ಮುನ್ನಡೆಸಲಿದ್ದಾರೆ. ಈ ಸರಣಿ ಆರಂಭಕ್ಕೂ ಮುನ್ನ ಭಾರತ ಟಿ20 ತಂಡಕ್ಕೆ ಹೊಸ ನಾಯಕನನ್ನು ಹುಡುಕಿದರೆ ತಪ್ಪೇನಿಲ್ಲ, ಹಾರ್ದಿಕ್ ಪಾಂಡ್ಯ ಆಗಬಹುದು ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.

ವಿಶ್ವಕಪ್ 2022: ಸ್ಪೇನ್ ತಂಡದಲ್ಲಿ ಯಾರು ಇನ್? ಯಾರು ಔಟ್? ವಿಶ್ವಕಪ್ 2022: ಸ್ಪೇನ್ ತಂಡದಲ್ಲಿ ಯಾರು ಇನ್? ಯಾರು ಔಟ್?

ಪ್ರತ್ಯೇಕ ನಾಯಕನ ಅಗತ್ಯದ ಬಗ್ಗೆ ಹೇಳಿದ್ದ ಮಾಜಿ ಆಟಗಾರ ವಿವಿಎಸ್​ ಲಕ್ಷ್ಮಣ್​ ಸಲಹೆಯನ್ನು ಭಾರತ ತಂಡದ ಮಾಜಿ ತರಬೇತುದಾರ ರವಿಶಾಸ್ತ್ರಿ ಅನುಮೋದಿಸಿದ್ದಾರೆ. ತಂಡದ ಬಲವರ್ಧನೆಗೆ ನಾಯಕನ ಬದಲು ಮಾಡಬಹುದು. ಹಾರ್ದಿಕ್ ​ಪಾಂಡ್ಯ ನಾಯಕನ ಸ್ಥಾನ ತುಂಬುವಲ್ಲಿ ಸಮರ್ಥ ಎಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಟಿ20ಗೆ ಪ್ರತ್ಯೇಕ ನಾಯಕನ ನೇಮಕದಿಂದ ಯಾವುದೇ ಹಾನಿಯಾಗುವುದಿಲ್ಲ. ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಇದಕ್ಕೆ ಸೂಕ್ತ ಆಟಗಾರ. ನಾಯಕನ ಬದಲಿ ತಂಡವನ್ನು ಬಲಪಡಿಸಲಿದೆ. ಮೂರು ಪ್ರಕಾರದ ಕ್ರಿಕೆಟ್​ ಅನ್ನು ಒಬ್ಬ ನಾಯಕ ನಿಭಾಯಿಸುವುದು ಕಷ್ಟ. ರೋಹಿತ್ ಶರ್ಮಾ ಟೆಸ್ಟ್ ಮತ್ತು ಏಕದಿನದ ನೇತೃತ್ವ ವಹಿಸಿಕೊಂಡರೆ, ಟಿ20 ಮಾದರಿಗೆ ಹೊಸ ನಾಯಕನ ನೇಮಕ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.

" ಟ್ವೆಂಟಿ-20 ಕ್ರಿಕೆಟ್‌ ಹೊಸ ನಾಯಕನನ್ನು ನೇಮಿಸುವುದರಿಂದ ತಂಡಕ್ಕೆ ಯಾವುದೇ ಹಾನಿ ಇಲ್ಲ. ಏಕೆಂದರೆ ಕ್ರಿಕೆಟ್‌ನಲ್ಲಿ ಒಬ್ಬ ಆಟಗಾರನಿಗೆ ಎಲ್ಲಾ ಮೂರು ಮಾದರಿಯಲ್ಲಿ ಆಟವಾಡುವುದು ಸುಲಭದ ಮಾತಲ್ಲ. ರೋಹಿತ್ ಈಗಾಗಲೇ ಟೆಸ್ಟ್‌ ಮತ್ತು ಏಕದಿನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗಾಗಿ ಟಿ20ಗೆ ಹೊಸ ನಾಯಕನನ್ನು ಗುರುತಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಸೂಕ್ತವಾದರೆ, ಇರಲಿ ಬಿಡಿ" ಎಂದು ಶಾಸ್ತ್ರಿ ಹೇಳಿದ್ದಾರೆ.

ಈ ಸೀಮಿತ ಓವರ್‌ಗಳ ಸರಣಿಗೆ ವೇಗಿ ಉಮ್ರಾನ್ ಮಲಿಕ್ ಆಯ್ಕೆಯಾಗಿರುವುದರ ಬಗ್ಗೆ ಮಾತನಾಡಿ, ಈ ಸರಣಿ ಆತನ ಪಾಲಿಗೆ ಉತ್ತಮವಾಗಲಿದೆ ಎಂದಿದ್ದಾರೆ.

Ravi Shastri wants Hardik Pandya will be a New Indian T20 Captain

ಮಲಿಕ್ ಭಾರತದ ಅತ್ಯಂತ ವೇಗವಾಗಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಹ್ಯಾರಿಸ್ ರೌಫ್‌, ನಸೀಮ್ ಶಾ, ಆನ್ರಿಚ್ ನೋಕಿಯಾ ಸೇರಿದಂತೆ ವೇಗಿಗಳು ಎದುರಾಳಿಗಳ ಬ್ಯಾಟರ್‌ಗಳನ್ನು ಕಾಡಿದ್ದನ್ನು ನೀವು ವಿಶ್ವಕಪ್‌ನಲ್ಲಿ ನೋಡಿದ್ದೀರಿ. ಹಾಗಾಗಿ ಸಣ್ಣ ಮೊತ್ತದ ಗುರಿಯಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ವೇಗಿಗಳಿಂದ ಸಾಧ್ಯ. ಉಮ್ರಾನ್‌ಗೆ ಈ ಪ್ರವಾಸ ಒಂದು ಅದ್ಭುತ ಅವಕಾಶವಾಗಿದೆ. ಆಶಾದಾಯಕವಾಗಿ ಅವರು ತಮ್ಮ ಸಾಮರ್ಥ್ಯವನ್ನು ತೋರಿಸಲಿದ್ದಾರೆ. ಜೊತೆಗೆ ಕಲಿಯಲು ಉತ್ತಮ ಅವಕಾಶ ಎಂದು ತಿಳಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ಹಿರಿಯ ಆಟಗಾರರ ವಿಶ್ರಾಂತಿಯಲ್ಲಿ ಸ್ಥಾನ ಪಡೆದಿರುವುದರಿಂದ ಶುಭಮನ್ ಗಿಲ್, ಉಮ್ರಾನ್ ಮಲಿಕ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್‌ ಅವಕಾಶವನ್ನು ಬಳಸಿಕೊಳ್ಳಬೇಕು. ತಮ್ಮ ಸಾಮರ್ಥ್ಯ ಸಾಬೀತು ಪಡಿಸಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕು ಎಂದು ರವಿಶಾಸ್ತ್ರಿ ಹೇಳಿದರು.

ವಿದೇಶಿ ಲೀಗ್​ಗಳಿಗೆ ಭಾರತೀಯ ಆಟಡಗಾರರಿಗೆ ಅವಕಾಶ ನೀಡಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಇದರ ಅಗತ್ಯವೇ ಇಲ್ಲ. ನಮ್ಮ ಆಟಗಾರರು ಬಿಡುವಿಲ್ಲದ ಕ್ರಿಕೆಟ್​ ಆಡುತ್ತಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​) ಅನುಭವವೇ ಸಾಕು. ಸಾಗರೋತ್ತರ ಲೀಗ್​ಗಳ ಅಗತ್ಯ ಭಾರತೀಯ ಆಟಗಾರರಿಗೆ ಅವಶ್ಯಕತೆಯಿಲ್ಲ ಎಂದು ಅಭಿಪ್ರಾಯಪಟ್ಟರು.

English summary
Former Indian head coach Ravi Shastri wants the All rounder Hardik Pandya replace Rohit Sharma as captain of the Indian T20I team. he said there is no harm in having a new captain for shorter famate,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X