Rahul Dravid: ಸಿಟ್ಟಿಗೆದ್ದ ರಾಜಸ್ಥಾನ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್!
ರಾಜಸ್ಥಾನ್ ರಾಯಲ್ಸ್ (RR) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್ ನಲ್ಲಿ ಸೋಲು ಕಂಡ ನಂತರ ತಂಡದಲ್ಲಿ ಏನೋ ಸಮಸ್ಯೆ ಇದೆ ಎನ್ನುವ ವದಂತಿಗಳು ಶುರುವಾಗಿದ್ದವು. ಅದರಲ್ಲೂ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಸಂಜು ಸ್ಯಾಮ್ಸನ್ ನಡುವೆ ಅಸಮಾಧಾನ ಇದೆ ಎನ್ನುವ ಸುದ್ದಿ ಹರಿದಾಡಿತ್ತು, ಈ ಬಗ್ಗೆ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದು ವದಂತಿಗಳಿಗೆ ತೆರೆ ಎಳೆದಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಜೊತೆ ತಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿರುವ ರಾಹುಲ್ ದ್ರಾವಿಡ್ ವದಂತಿಗಳನ್ನು ಆಧಾರ ರಹಿತ ಎಂದು ಕರೆದಿದ್ದಾರೆ. ಇಂತಹ ವದಂತಿಗಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಪಂದ್ಯದ ಬಳಿಕ ವಿಡಿಯೋ ಕ್ಲಿಪ್ ವೈರಲ್ ಆದ ನಂತರ ಈ ವದಂತಿಗಳು ಹೆಚ್ಚು ಗಮನ ಸೆಳೆದವು. ಸಂಜು ಸ್ಯಾಮ್ಸನ್ ಮಾತಿಗೆ ಬೆಲೆ ಕೊಡುತ್ತಿಲ್ಲವೇ ಎನ್ನುವ ಅನುಮಾನ ಶುರುವಾಗಿತ್ತು. ಆರ್ ಆರ್ ತಂಡದ ಆಟಗಾರರು ಕೋಚಿಂಗ್ ಸಿಬ್ಬಂದಿ ಚರ್ಚೆ ನಡೆಸುತ್ತಿರುವಾಗ ಸ್ಯಾಮ್ಸನ್ ಗುಂಪಿನಿಂದ ದೂರವಿದ್ದದ್ದು ಬೇಡ ಎಂದು ಸನ್ನೆ ಮಾಡಿದ್ದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೂಪರ್ ಓವರ್‌ಗೆ ಸ್ವಲ್ಪ ಮೊದಲು ರೆಕಾರ್ಡ್ ಮಾಡಿರುವ ವೀಡಿಯೊದಲ್ಲಿ, ದ್ರಾವಿಡ್ ತಮ್ಮ ಬೆಂಬಲ ಸಿಬ್ಬಂದಿ ಮತ್ತು ಕೆಲವು ಆಟಗಾರರೊಂದಿಗೆ ಅನಿಮೇಟೆಡ್ ಚರ್ಚೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿದೆ. ಸ್ಯಾಮ್ಸನ್ ಹಡಲ್‌ಗೆ ಸೇರಲು ಯಾರೋ ಸನ್ನೆ ಮಾಡಿದಾಗ, ನಾಯಕ ಡಗೌಟ್ ಬಳಿ ನಿಂತು, ಬೇಡ ಎನ್ನುವಂತೆ ಸೂಚಿಸುತ್ತಿರುವುದು ಕಂಡುಬಂದಿದೆ.
ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ್ದಾರೆ
ರಾಜಸ್ಥಾನ್ ರಾಯಲ್ಸ್ ತಂಡದ ಮುಂದಿನ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ರಾಹುಲ್ ದ್ರಾವಿಡ್ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ದ್ರಾವಿಡ್ ಹೆಚ್ಚಾಗಿ ಮಾತನಾಡದೇ ಇದ್ದರೂ ಸರಿಯಾದ ಮಾಹಿತಿಯನ್ನು ನೀಡಿದರು.
"ಈ ವರದಿಗಳು ಎಲ್ಲಿಂದ ಬರುತ್ತಿವೆ ಎಂದು ನನಗೆ ತಿಳಿದಿಲ್ಲ. ಸಂಜು ಮತ್ತು ನಾನು ಒಂದೇ ಪುಟದಲ್ಲಿದ್ದೇವೆ" ಎಂದು ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ದ್ರಾವಿಡ್ ತಮ್ಮ ಚಿಕ್ಕ ವಯಸ್ಸಿನಿಂದಲೂ ಸ್ಯಾಮ್ಸನ್‌ಗೆ ಬೆಂಬಲ ನೀಡಿದ್ದಾರೆ ಎಂಬ ಅಂಶ ತಿಳಿದಿದ್ದರೂ, ಇಂತಹ ವದಂತಿಗಳನ್ನು ಹಬ್ಬಿಸುವುದು ಅಸಹ್ಯಕರವಾಗಿದೆ. 2013 ರಲ್ಲಿ ಸ್ಯಾಮ್ಸನ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದಾಗ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದರು.












Click it and Unblock the Notifications