Get Updates
Get notified of breaking news, exclusive insights, and must-see stories!

Rahul Dravid: ಟೀಮ್ ಇಂಡಿಯಾ ಕೋಚ್‌ ರಾಹುಲ್ ದ್ರಾವಿಡ್‌ 2.5 ಕೋಟಿ ರೂ. ತ್ಯಾಗ ಮಾಡಿದ್ದು ಏಕೆ?

ಟೀಮ್ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್‌ ಭಾರತ ತಂಡಕ್ಕೆ ಬಿಸಿಸಿಐ ಭರ್ಜರಿ ಗಿಫ್ಟ್‌ ನೀಡಿದೆ. ದಕ್ಷಿಣ ಆಫ್ರಿಕಾವನ್ನು ಮಣಿಸಿ ವಿಶ್ವಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಈ ಬಹುಮಾನ ಮೊತ್ತ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗೆ ಸಲ್ಲುತ್ತದೆ. ಟೀಮ್ ಇಂಡಿಯಾಕ್ಕೆ ಚಾಂಪಿಯನ್‌ ಪಟ್ಟಕ್ಕೇರಿಸಿದ ಕೋಚ್‌ಗೂ ಇದರಲ್ಲಿ ಪಾಲು ಇದೆ.

ಕನ್ನಡಿಗ ರಾಹುಲ್‌ ದ್ರಾವಿಡ್‌ ಮತ್ತೊಮ್ಮೆ ಹೃದಯ ವ್ಯಶಾಲ್ಯತೆ ಮೆರೆದಿದ್ದಾರೆ. ತಂಡದ ಆಟಗಾರರಿಗೆ ಸಮಾನವಾಗಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ 5 ಕೋಟಿ ರೂಪಾಯಿ ನೀಡುವ ಬಗ್ಗೆಯೂ ಚರ್ಚೆ ನಡೆದಿದ್ದು, ತಂಡದ ಇತರ ಕೋಚ್‌ಗಳಿಗೆ 2.5 ಕೋಟಿ ನೀಡಬೇಕಿತ್ತು. ಆದರೆ ತಮ್ಮ ಸಹ ಸಿಬ್ಬಂದಿಗಳಿಗಾಗಿ ಅವರು 2.5 ಕೋಟಿ ರೂ ತ್ಯಾಗ ಮಾಡಿದ್ದಾರೆ.

Rahul Dravid Refuses Rs 2 5 Crore Extra Bonus to Ensure Equal Rewards for Support Staff

ಯಾರಿಗೆ ಎಷ್ಟು ಹಣ?

ಟೀಮ್ ಇಂಡಿಯಾವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ತಂಡದ ಪ್ರತಿಯೋಬ್ಬ ಆಟಗಾರರಿಗೆ ಬಿಸಿಸಿಐ ನೀಡಿದ ಹಣದಲ್ಲಿ 5 ಕೋಟಿ ರೂ. ಲಭಿಸುತ್ತದೆ. ಅಲ್ಲದೆ ಸಹಾಯಕ ಸಿಬ್ಬಂದಿಗೆ 2.5 ಕೋಟಿ ರೂ. ಸಿಗುತ್ತೆದ. ಇನ್ನು ಟಿ20 ವಿಶ್ವಕಪ್‌ ತಂಡದ ಕಾಯ್ದಿರಿಸಿದ ಆಟಗಾರರು 1 ಕೋಟಿ ಹಣವನ್ನು ಪಡೆಯಲಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಬಿಸಿಸಿಐ ಈ ಘೋಷಣೆ ಮಾಡಿತ್ತು.

ದ್ರಾವಿಡ್ ತಮ್ಮ ನಗದು ಬಹುಮಾನವನ್ನು 2.5 ಕೋಟಿ ರೂ.ಗೆ ತಗ್ಗಿಸುವಂತೆ ಬಿಸಿಸಿಐಗೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಇದರ ಹಿಂದಿನ ಕಾರಣ ತುಂಬಾ ವಿಶೇಷವಾಗಿದೆ. ಅವರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್‌ಗಳಿಗಿಂತ ಹೆಚ್ಚಿನ ಹಣವನ್ನು ತಾವು ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಹುಲ್ ಅವರು ತಮ್ಮ ಉಳಿದ ಸಹಾಯಕ ಸಿಬ್ಬಂದಿಗಳಾದ, ಬೌಲಿಂಗ್ ಕೋಚ್ ಪರಾಸ್ ಮಹಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್‌ಗೆ ಅದೇ ನೀಡುವ ಬೋನಸ್‌ ಹಣವನ್ನೇ ತನಗೂ ನೀಡಬೇಕು ಎಂದು ಕೇಳಿಕೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Rahul Dravid Refuses Rs 2 5 Crore Extra Bonus to Ensure Equal Rewards for Support Staff

ಇದೇನು ಮೊದಲಲ್ಲ

ದ್ರಾವಿಡ್ 2018 ರಲ್ಲಿ ಭಾರತದ ಅಂಡರ್-19 ವಿಶ್ವಕಪ್ ವಿಜೇತ ತಂಡದ ಮುಖ್ಯ ಕೋಚ್ ಆಗಿ ಇದೇ ನಿಲುವನ್ನು ಪಾಲಿಸಿದ್ದರು. ಆ ವೇಳೆ ದ್ರಾವಿಡ್ 50 ಲಕ್ಷ ರೂ., ಇತರೆ ಸಹಾಯಕ ಸಿಬ್ಬಂದಿ ತಲಾ 20 ಲಕ್ಷ ರೂ. ನೀಡಲಾಗಿತ್ತು. ಮೂಲಗಳ ಪ್ರಕಾರ ಆಟಗಾರರು ತಲಾ 30 ಲಕ್ಷ ಪಡೆದರು. ಆದರೆ ದ್ರಾವಿಡ್ ಅಂತಹ ಬಿಸಿಸಿಐ ನೀತಿಯನ್ನು ವಿರೋಧಿಸಿದರು. ಬಿಸಿಸಿಐ ಎಲ್ಲರಿಗೂ ಒಂದೇ ಮೊತ್ತವನ್ನು ಪಾವತಿಸಲು ಒತ್ತಾಯಿಸಿದರು.

ನಂತರ ಮಂಡಳಿಯು ನಗದು ಪ್ರಶಸ್ತಿಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿತು, ಅದರಲ್ಲಿ ದ್ರಾವಿಡ್ ಸೇರಿದಂತೆ ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರು 25 ಲಕ್ಷ ರೂ. ದ್ರಾವಿಡ್ ಅವರ ಈ ನಿಸ್ವಾರ್ಥ ಮನೋಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+