Get Updates
Get notified of breaking news, exclusive insights, and must-see stories!

Rachin Ravindra: ಪಾಕಿಸ್ತಾನದ ನೆಲದಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ರಚಿನ್ ರವೀಂದ್ರ

ಚಾಂಪಿಯನ್ಸ್ ಟ್ರೋಫಿ 2025ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ ಸವಾಲಿನ ಮೊತ್ತ ಕಲೆಹಾಕಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಕನ್ನಡಿಗ ರಚಿನ್ ರವೀಂದ್ರ ಹೊಸ ದಾಖಲೆ ಬರೆದಿದ್ದಾರೆ. 101 ಎಸೆತಗಳಲ್ಲಿ 108 ರನ್ ಗಳಿಸಿದ ಅವರು ಐಸಿಸಿ ಏಕದಿನ ಪಂದ್ಯಾವಳಿಯಲ್ಲಿ ಐದು ಶತಕ ಬಾರಿಸುವ ಮೂಲಕ ಶಿಖರ್ ಧವನ್ ದಾಖಲೆಯನ್ನು ಮುರಿದಿದ್ದಾರೆ.

ತಮ್ಮ ಮೊದಲ ಐಸಿಸಿ ಪಂದ್ಯಾವಳಿಗಳಲ್ಲೇ ಐದು ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು. ಐಸಿಸಿ ಏಕದಿನ ಪಂದ್ಯಾವಳಿಯಲ್ಲಿ ಕೇವಲ 13 ಇನ್ನಿಂಗ್ಸ್‌ಗಳಲ್ಲಿ ರವೀಂದ್ರ ಜಡೇಜಾ 5 ಶತಕ ಬಾರಿಸಿದ್ದಾರೆ. ಶಿಖರ್ ಧವನ್ 15 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. 2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ 3 ಶತಕ ಬಾರಿಸಿದ್ದ ರಚಿನ್ ರವೀಂದ್ರ, ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಶತಕ ಬಾರಿಸಿದ್ದಾರೆ.

rachin ravindra creates new record new zealand vs south africa champions trophy 2025

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ 3ನೇ ಪಂದ್ಯ ಆಡುತ್ತಿರುವ ರಚಿನ್ ರವೀಂದ್ರ 2ನೇ ಶತಕ ಬಾರಿಸಿದ್ದಾರೆ. ಗಾಯದ ಕಾರಣದಿಂದ ಅವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಬಳಿಕ ತಾವು ಆಡಿದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 112 ರನ್ ಗಳಿಸಿದರು. ಭಾರತದ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಅವರು 6 ರನ್‌ಗಳಿಗೆ ಔಟಾಗಿದ್ದ ಅವರು, ಇದೀಗ ಸೆಮಿಫೈನಲ್‌ನಲ್ಲಿ ಶತಕ ಗಳಿಸಿ ಮಿಂಚಿದ್ದಾರೆ.

ಒಂದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದಕ್ಕಿಂತ ಹೆಚ್ಚಿನ ಶತಕ ಗಳಿಸಿದ ಮೊದಲ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರಿಸ್ ಗೇಲ್ 2006ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ 3 ಶತಕ ಬಾರಿಸಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರನಾಗಿದ್ದಾರೆ. 2000 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೌರವ್ ಗಂಗೂಲಿ, ಸಯೀದ್ ಅನ್ವರ್ ಒಂದಕ್ಕಿಂತ ಹೆಚ್ಚಿನ ಶತಕ ಗಳಿಸಿದ್ದರು. 2002ರಲ್ಲಿ ಹರ್ಷಲ್ ಗಿಬ್ಸ್, 2006ರಲ್ಲಿ ಉಪುಲ್ ತರಂಗ, 2009ರಲ್ಲಿ ಶೇನ್ ವ್ಯಾಟ್ಸನ್, 2013ರಲ್ಲಿ ಶಿಖರ್ ಧವನ್ ಈ ಸಾಧನೆ ಮಾಡಿದ ಆಟಗಾರರಾಗಿದ್ದಾರೆ.

25 ವರ್ಷ 107 ದಿನ ವಯಸ್ಸಾಗಿರುವ ರಚಿನ್ ರವೀಂದ್ರ ಅವರು ಕೇನ್ ವಿಲಿಯಮ್ಸನ್ (24 ವರ್ಷ 165 ದಿನಗಳು) ನಂತರ ಐದು ಏಕದಿನ ಶತಕಗಳನ್ನು ಬಾರಿಸಿದ ನ್ಯೂಜಿಲೆಂಡ್‌ನ ಎರಡನೇ ಕಿರಿಯ ಬ್ಯಾಟ್ಸ್‌ಮನ್ ಎಂಬ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 362 ರನ್ ಗಳಿಸಿದೆ. ರಚಿನ್ ರವೀಂದ್ರ 108 ರನ್ ಗಳಿಸಿದರೆ, ಕೇನ್ ವಿಲಿಯಮ್ಸನ್ 102 ರನ್ ಗಳಿಸಿದರು. ಡೇರಿಲ್ ಮಿಚೆಲ್ 49 ರನ್ ಗಳಿಸಿದರು. ಗ್ಲೆನ್ ಫಿಲಿಪ್ಸ್ 27 ಎಸೆತಗಳಲ್ಲಿ 49 ರನ್ ಗಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+