R Praggnanandhaa: ಇತಿಹಾಸ ಸೃಷ್ಟಿಸಿದ ಪ್ರಜ್ಞಾನಂದ್ ಮುಡಿಗೆ ಮತ್ತೊದು ಗರಿ
ಭಾರತದ ಸ್ಟಾರ್ ಚೆಸ್ ಆಟಗಾರ ಆರ್ ಪ್ರಜ್ಞಾನಂದ್ ಉಜ್ಬೇಕಿಸ್ತಾನದಲ್ಲಿ ಇತಿಹಾಸ ಬರೆದಿದ್ದಾರೆ. ಇವರು ತಮ್ಮ ಗೆಲುವಿನ ಲಯನ್ನು ಮುಂದುವರೆಸಿದ್ದಾರೆ. ಉಜ್ ಚೆಸ್ ಕಪ್ ಮಾಸ್ಟರ್ಸ್ 2025 ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಪ್ರಜ್ಞಾನಂದ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಭಾರತದ ನಂಬರ್ 1 ಚೆಸ್ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ.
ಉಜ್ ಚೆಸ್ ಕಪ್ ಮಾಸ್ಟರ್ಸ್ 2025 ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದ 19 ವರ್ಷದ ಪ್ರಜ್ಞಾನಂದ್ ಫಿಡಾ ವಿಶ್ವ ರ್ಯಾಂಕಿಂಗ್ಸ್‌ನಲ್ಲಿ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇವರು ಈ ವರ್ಷದಲ್ಲಿ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಬರೆದಿದ್ದಾರೆ. ಪ್ರಜ್ಞಾನಂದ ಲೈವ್ ರೇಟಿಂಗ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕದ ಚೆಸ್ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಈ ಗೆಲುವಿನಿಂದ ಪ್ರಜ್ಞಾನಂದ ಅವರ ಲೈವ್ ರೇಟಿಂಗ್ 2778.3 ಕ್ಕೆ ಏರಿತು ಮತ್ತು ಇವರು ಅಗ್ರ ಸ್ಥಾನ ಪಡೆದಿದ್ದಾರೆ.

ಕೊನೆಯ ದಿನದಾಟ ಆರಂಭಿಸಿದ ಪ್ರಜ್ಞಾನಂದ, ಅಬ್ದುಸತ್ತೊರೊವ್‌ಗಿಂತ ಪೂರ್ಣ ಅಂಕದಿಂದ ಹಿಂದೆ ಉಳಿದಿದ್ದರು. ಅಲ್ಲದೆ ಸಿಂದಾರೊವ್‌ಗಿಂತ ಅರ್ಧ ಅಂಕ ಹಿಂದಿದ್ದರು. ಪ್ರಜ್ಞಾನಂದ ಕೊನೆಯ ಪಂದ್ಯದಲ್ಲಿ ಅಮೋಘ ಜಯ ಸಾಧಿಸುವ ಮೂಲಕ ಅಂಕಗಳಿಕೆಯಲ್ಲಿ ಬಡ್ತಿ ಪಡೆದರು. ರೌಂಡ್ ರಾಬಿನ್ ಹಂತ ಮುಗಿದ ಬಳಿಕ ಪ್ರತಿಸ್ಪರ್ಧಿಗಳನ್ನು ಅಗ್ರಸ್ಥಾನದಲ್ಲಿದ್ದರು. ಅಬ್ದುಸತ್ತೊರೊವ್ ವಿರುದ್ಧ ಸಿಂದಾರೋವ್ ಅವರ ಗೆಲುವು ಭಾರತೀಯ ಆಟಗಾರನಿಗೆ ಪ್ರಶಸ್ತಿ ಖಚಿತಪಡಿಸಿತು. ಅಬ್ದುಸತ್ತೊರೊವ್ ಮತ್ತು ಸಿಂದಾರೋವ್ ಎರಡೂ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರು. ಅರವಿಂದ್ ಚಿದಂಬರಂ ಅವರೊಂದಿಗೆ ಡ್ರಾ ಮಾಡಿಕೊಳ್ಳುವ ಮೂಲಕ ಅರ್ಜುನ್ ಎರಿಗೈಸಿ ನಿರಾಸೆಯನ್ನು ಅನುಭವಿಸಿದರು.
ಪ್ರಜ್ಞಾನಂದ್ ಲೈವ್ ರೇಟಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಡಿ ಗುಕೇಶ್ (2776.6) ಮತ್ತು ಅರ್ಜುನ್ ಎರಿಗೈಸಿ (2775.7) ಅವರನ್ನು ಹಿಂದಿಕ್ಕಿದರು. ಆದರೆ ಈಗ ಅವರು ವಿಶ್ವದ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ. ಮ್ಯಾಗ್ನಸ್ ಕಾರ್ಲ್ಸೆನ್ (2839.2) ಅಗ್ರಸ್ಥಾನದಲ್ಲಿದ್ದಾರೆ.

ವಿಶ್ವನಾಥ್ ಅಭಿನಂದನೆ
ಉಜ್ ಚೆಸ್ ಕಪ್ ಮಾಸ್ಟರ್ಸ್ 2025 ಪ್ರಶಸ್ತಿ ಗೆದ್ದ ಪ್ರಜ್ಞಾನಂದ ಅವರಿಗೆ ಅಭಿನಂದನೆಗಳು. ಇದು ಪ್ರಜ್ಞಾನಂದ ಅವರಿಗೆ ವರ್ಷದ ಮೂರನೇ ಪ್ರಶಸ್ತಿಯಾಗಿದೆ. ಪ್ರಜ್ಞಾನಂದ ಅಬ್ದುಸತ್ತೊರೊವ್ ಅವರನ್ನು ಸೋಲಿಸಿ ಮೊದಲ ಸ್ಥಾನ ಪಡೆದರು ಎಂದು ವಿಶ್ವನಾಥ್ ಆನಂದ್ ಸಾಮಾಜಿಕ ತಾಣದಲ್ಲಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications